ಮಂಗಳೂರು: ಐಪಿಎಸ್ ಅಧಿಕಾರಿ ಡಾ ಮಧುಕರ ಶೆಟ್ಟಿ ಅವರ ಅಕಾಲಿಕ ನಿಧನಕ್ಕೆ ಬಂಟರ ಯಾನೆ ನಾಡವರ ಮಾತೃ ಸಂಘದಿಂದ ಸಾರ್ವಜನಿಕ ಸಂತಾಪ ಸಭೆ ಜನವರಿ 8 ರಂದು ಮಂಗಳವಾರ ಸಂಜೆ 5.30ಕ್ಕೆ ಬಂಟ್ಸ್ ಹಾಸ್ಟೆಲ್ ಬಳಿಯ ಶ್ರೀ ರಾಮಕೃಷ್ಣ ಕಾಲೇಜು ಮೈದಾನದಲ್ಲಿ ನಡೆಯಲಿದೆ. ಸಂತಾಪ ಸಭೆಯಲ್ಲಿ ನಿವೃತ್ತ ಲೋಕಯುಕ್ತ ನ್ಯಾ.ಸಂತೋಷ್ ಹೆಗ್ಡೆ , ದ.ಕ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಹಾಗೂ ಸಂಸದರು , ಶಾಸಕರು ಭಾಗವಹಿಸಲಿದ್ದಾರೆ.

ಭ್ರಷ್ಟ ಅಧಿಕಾರಿಗಳಿಗೆ ಸಿಂಹಸ್ವಪ್ನವಾಗಿದ್ದ ಮಧುಕರ್ ಶೆಟ್ಟಿ ಡಿಸೆಂಬರ್ 28 ರಂದು ಶುಕ್ರವಾರ ರಾತ್ರಿ 8.15ರ ಸುಮಾರಿಗೆ ಹೈದರಾಬಾದ್‌ನ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ನಿಧನರಾದರು. ಇವರ ಅಂತ್ಯಕ್ರಿಯೆ ಹುಟ್ಟುರು ಕುಂದಾಪುರದ ಶಿರಿಯಾರ ಸಮೀಪ ಯಡಾಡಿಯಲ್ಲಿ ಡಿಸೆಂಬರ್ 30ರಂದು ನೆರವೇರಿತು.

ಹಿರಿಯ ಪತ್ರಕರ್ತ ದಿವಂಗತ ವಡ್ಡರ್ಸೆ ರಘುರಾಮ ಶೆಟ್ಟಿಯವರ ಸುಪುತ್ರರಾದ ಮಧುಕರ ಶೆಟ್ಟಿ 1999ರ ಬ್ಯಾಚ್ ನ ಐಪಿಎಸ್ ಅಧಿಕಾರಿ. ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕೆಲಸ ಮಾಡಿದ್ದರು. ವೀರಪ್ಪನ್ ಎನ್‌ಕೌಂಟರ್ ಮಾಡಿದ ಟಾಸ್ಕ್ ಪೋರ್ಸ್, ಎಎನ್ ಎಫ್ ಎಸ್‌ಪಿಯಾಗಿಯೂ ಕಾರ್ಯ ನಿರ್ವಹಿಸಿದ್ದರು.

ಅಷ್ಟೇ ಅಲ್ಲ, ಬೆಂಗಳೂರು ಟ್ರಾಫಿಕ್ ವಿಭಾಗದ ಆಯುಕ್ತರಾಗಿಯೂ ಕೆಲಸ ಮಾಡಿದ್ದರು. ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಲೋಕಾಯುಕ್ತರಾಗಿದ್ದಾಗ ಅವರ ಜೊತೆ ಕೆಲಸ ಮಾಡಿದ್ದರು. ಬಿಜೆಪಿ ನಾಯಕ ಕಟ್ಟಾ ಸುಬ್ರಮಣ್ಯ ನಾಯ್ಡು ಪುತ್ರನನ್ನು ಭೂ ಅಕ್ರಮಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದರು.

Summary
ಅಕಾಲಿಕ ನಿಧನಕ್ಕೆ ಬಂಟರ ಸಂಘದಿಂದ ಸಂತಾಪ ಸಭೆ
Article Name
ಅಕಾಲಿಕ ನಿಧನಕ್ಕೆ ಬಂಟರ ಸಂಘದಿಂದ ಸಂತಾಪ ಸಭೆ
Description
ಹಿರಿಯ ಪತ್ರಕರ್ತ ದಿವಂಗತ ವಡ್ಡರ್ಸೆ ರಘುರಾಮ ಶೆಟ್ಟಿಯವರ ಸುಪುತ್ರರಾದ ಮಧುಕರ ಶೆಟ್ಟಿ 1999ರ ಬ್ಯಾಚ್ ನ ಐಪಿಎಸ್ ಅಧಿಕಾರಿ. ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕೆಲಸ ಮಾಡಿದ್ದರು. ವೀರಪ್ಪನ್ ಎನ್‌ಕೌಂಟರ್ ಮಾಡಿದ ಟಾಸ್ಕ್ ಪೋರ್ಸ್, ಎಎನ್ ಎಫ್ ಎಸ್‌ಪಿಯಾಗಿಯೂ ಕಾರ್ಯ ನಿರ್ವಹಿಸಿದ್ದರು. ಅಷ್ಟೇ ಅಲ್ಲ, ಬೆಂಗಳೂರು ಟ್ರಾಫಿಕ್ ವಿಭಾಗದ ಆಯುಕ್ತರಾಗಿಯೂ ಕೆಲಸ ಮಾಡಿದ್ದರು. ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಲೋಕಾಯುಕ್ತರಾಗಿದ್ದಾಗ ಅವರ ಜೊತೆ ಕೆಲಸ ಮಾಡಿದ್ದರು. ಬಿಜೆಪಿ ನಾಯಕ ಕಟ್ಟಾ ಸುಬ್ರಮಣ್ಯ ನಾಯ್ಡು ಪುತ್ರನನ್ನು ಭೂ ಅಕ್ರಮಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದರು.

LEAVE A REPLY

Please enter your comment!
Please enter your name here