ಅಕ್ಕಿಆಲೂರು: ಕನ್ನಡ ನಾಡು, ನುಡಿ ಅಭಿಮಾನ ಇಟ್ಟು ಮುನ್ನೆಡೆಯ ಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೊಂಕಣ ಗ್ರಾಪಂ ಅಧ್ಯಕ್ಷ ಜಗದೀಶ್‌ ಚಂದಣ್ಣನವರ ಹೇಳಿದರು.

ಹಾನಗಲ್‌ ತಾಲೂಕಿನ ಇನಾಂಲಕ್ಮಾಪುರದ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಿದ್ದೇಶ್ವರ ಹಾಗೂ ಮಾರುತಿ ದೇವಸ್ಥಾನ ಸಮಿತಿ ಆಶ್ರಯದಲ್ಲಿ ನಡೆದ ಕಿನ್ನರಿ ಜೋಗಿ ಜಾನಪದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವೈಜ್ಞಾನಿಕತೆ ಮತ್ತು ಆಧುನಿಕತೆ ನಮ್ಮ ಶ್ರೀಮಂತ ಪರಂಪರೆ ಬಿಡುವಂತೆ ಎಂದಿಗೂ ಹೇಳುವುದಿಲ್ಲ. ಆದರೆ ಆಚರಣೆಗೆ ತರುತ್ತಿರುವ ನಾವು ಭಿನ್ನವೆಂದು ತೋರಿಸಿಕೊಳ್ಳುವ ಹುಚ್ಚಿನಲ್ಲಿ ವಿಕೃತಿಯನ್ನೇ ಆಧುನಿಕತೆಯ ಚಿಹ್ನೆ ಎಂಬ ರೀತಿಯಲ್ಲಿ ಬಳಸುತ್ತಿರುವುದರಿಂದ ನಮ್ಮ ಗತಕಾಲದ ಕಲಾತ್ಮಕ ಸಂಸ್ಕೃತಿ ಮಾಯವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು ಕಿನ್ನರಿ ಜೋಗಿ ಜಾನಪದವನ್ನು ಮುಂದಿನ ಪೀಳಿಗೆವರೆಗೆ ಸಂರಕ್ಷಿಸುವ ಅಗತ್ಯವಿದೆ ಎಂದರು.

ಸಿದ್ದೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಲಕ್ಷ ್ಮಣ ಮರಿಗೌಡ್ರ ಮಾತನಾಡಿ, ನಮ್ಮ ಸಂಸ್ಕೃತಿ ಮೆಲಕು ಹಾಕಿ ಅದರ ಭದ್ರ ಬುನಾದಿಯ ಮೇಲೆ ವೈಜ್ಞಾನಿಕತೆ ಮತ್ತು ಆಧುನಿಕತೆ ಸೇರಿಸಿಕೊಂಡು ಸುಂದರ ಬದುಕಿನ ಸೌಧ ಕಟ್ಟಿಕೊಳ್ಳಬೇಕಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ತಿಳವಳ್ಳಿಯ ಕಲಾವಿದರಾದ ಕೊಟ್ರೇಶ ಚವ್ಹಾಣ ಸಂಗಡಿಗರು ಪ್ರಸ್ತುತ ಪಡಿಸಿದ ಕಿನ್ನರಿ ಜೋಗಿ ಜಾನಪದ ಗೀತೆಗಳು ಮನಸೂರೆಗೊಂಡವು. ತಾಪಂ ಸದಸ್ಯ ರಾಮಣ್ಣ ಶೇಷಗಿರಿ, ಗ್ರಾಪಂ ಸದಸ್ಯರಾದ ಮಂಜುನಾಥ ದೊಡ್ಡಮನಿ, ಸರೋಜಾ ಬಾರ್ಕಿ, ಹನುಮಂತಪ್ಪ ಚಂದಣ್ಣನವರ, ಚಿದಂಬರಶಾಸ್ತ್ರಿ ಇನಾಂದಾರ, ಈರಪ್ಪ ದೊಡ್ಡಮನಿ, ಮಲ್ಲಿಕಾರ್ಜುನ ದಳವಾಯಿ, ನಾಗರಾಜ್‌ ಕಬ್ಬೂರ, ಪರಮೇಶ ದಳವಾಯಿ, ಗುಡ್ಡಪ್ಪ ಬಾರ್ಕಿ ಇದ್ದರು.
Summary
ಅಕ್ಕಿಆಲೂರು : ನಾಡು, ನುಡಿ ಅಭಿಮಾನ ಅಗತ್ಯ
Article Name
ಅಕ್ಕಿಆಲೂರು : ನಾಡು, ನುಡಿ ಅಭಿಮಾನ ಅಗತ್ಯ
Description
ಸಿದ್ದೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಲಕ್ಷ ್ಮಣ ಮರಿಗೌಡ್ರ ಮಾತನಾಡಿ, ನಮ್ಮ ಸಂಸ್ಕೃತಿ ಮೆಲಕು ಹಾಕಿ ಅದರ ಭದ್ರ ಬುನಾದಿಯ ಮೇಲೆ ವೈಜ್ಞಾನಿಕತೆ ಮತ್ತು ಆಧುನಿಕತೆ ಸೇರಿಸಿಕೊಂಡು ಸುಂದರ ಬದುಕಿನ ಸೌಧ ಕಟ್ಟಿಕೊಳ್ಳಬೇಕಿದೆ ಎಂದು ಹೇಳಿದರು. 

LEAVE A REPLY

Please enter your comment!
Please enter your name here