ಅಕ್ಕಿಆಲೂರು: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಗ್ರಾಪಂ ಕ್ಲರ್ಕ್‌ ಕಂ ಡಾಟಾ ಆಪರೇಟರ್‌ಗಳು ತಾಪಂ ಇಒ ಅವರಿಗೆ ಮನವಿ ಸಲ್ಲಿಸಿ, ಸರಕಾರ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಫೆ.18 ರಿಂದ ಕೆಲಸ ಸ್ಥಗಿತಗೊಳಿಸಿ ಅನಿರ್ದಿಷ್ಟ ಅವಧಿ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.

ಹಾನಗಲ್‌ ತಾಪಂ ಇಒ ಚನ್ನಬಸಪ್ಪ ಹಾವಣಗಿ ಅವರಿಗೆ ಮನವಿ ಸಲ್ಲಿಸಿರುವ ಕ್ಲರ್ಕ್‌ ಕಂ ಡಾಟಾ ಆಪರೇಟರ್‌ಗಳು, ಸರಕಾರದ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಹಗಲಿರುಳು ಶ್ರಮಿಸುತ್ತಿದ್ದೇವೆ. ನಮ್ಮ ಕೆಲ ಬೇಡಿಕೆಗಳನ್ನು ಸರಕಾರದ ಮುಂದಿಟ್ಟರೂ ನಿರ್ಲಕ್ಷ್ಯ ತೋರಲಾಗಿದೆ. ಕೂಡಲೇ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಆರ್ಥಿಕ ಇಲಾಖೆಯಿಂದ ಅನುಮೋದನೆಗೊಂಡು ಕಡತಕ್ಕೆ ಸರಕಾರಿ ಆದೇಶ ಹೊರಡಿಸಬೇಕು. ಸೇವೆಗೆ ಸೇರಿದ ದಿನಾಂಕದಿಂದ ಸೇವೆ ಪರಿಗಣಿಸಬೇಕು. ಜಿಪಂಗಳಲ್ಲಿ ದುರುದ್ದೇಶದಿಂದ ಬಾಕಿ ಉಳಿದ ಅನುಮೋದನೆ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಮಹಿಳಾ ಸಿಬ್ಬಂದಿಗೆ ಸರಕಾರದ ಸೌಲಭ್ಯ ಕಲ್ಪಿಸಲು ಮುಂದಾಗಬೇಕೆನ್ನುವ ಬೇಡಿಕೆಗಳ ಬಗೆಗೆ ಮನವಿಯಲ್ಲಿ ಗಮನ ಸೆಳೆಯಲಾಗಿದೆ.

Summary
ಅಕ್ಕಿಆಲೂರು : ಬೇಡಿಕೆ ಈಡೇರಿಕೆಗೆ ಕ್ಲರ್ಕ್‌ಗಳ ಪ್ರತಿಭಟನೆ 18ರಿಂದ
Article Name
ಅಕ್ಕಿಆಲೂರು : ಬೇಡಿಕೆ ಈಡೇರಿಕೆಗೆ ಕ್ಲರ್ಕ್‌ಗಳ ಪ್ರತಿಭಟನೆ 18ರಿಂದ
Description
ಮಹಿಳಾ ಸಿಬ್ಬಂದಿಗೆ ಸರಕಾರದ ಸೌಲಭ್ಯ ಕಲ್ಪಿಸಲು ಮುಂದಾಗಬೇಕೆನ್ನುವ ಬೇಡಿಕೆಗಳ ಬಗೆಗೆ ಮನವಿಯಲ್ಲಿ ಗಮನ ಸೆಳೆಯಲಾಗಿದೆ. 

LEAVE A REPLY

Please enter your comment!
Please enter your name here