ಲಖನೌ: ಸಮಾಜವಾದಿ ಪಕ್ಷ(ಎಸ್​ಪಿ) ಹಾಗೂ ಬಹುಜನ ಸಮಾಜವಾದಿ ಪಕ್ಷ(ಬಿಎಸ್​ಪಿ) ಲೋಕಸಭಾ ಚುನಾವಣೆಗೆ ಜಂಟಿಯಾಗಿ ಸ್ಪರ್ಧೆ ಮಾಡೋ ಬಗ್ಗೆ ನಿನ್ನೆಯಷ್ಟೇ ಘೋಷಿಸಿವೆ. ಈ ಹಿನ್ನೆಲೆಯಲ್ಲಿ ಇಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್​ ಯಾದವ್ ಹಾಗೂ ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ ಲಖನೌದ ತಾಜ್​ ಹೋಟೆಲ್​ನಲ್ಲಿ ಜಂಟಿ ಸುದ್ದಿಗೋಷ್ಟಿ ನಡೆಸಿದ್ರು.

ಈ ವೇಳೆ ಮಾತನಾಡಿದ ಮಾಯಾವತಿ, ನಾವು ಒಟ್ಟಾಗಿ ಲೋಕಸಭಾ ಚುನಾವಣೆ ಎದುರಿಸಲು ನಿರ್ಧರಿಸಿದ್ದೇವೆ. ಇದರಿಂದ ದೇಶದಲ್ಲಿ ಒಂದು ರಾಜಕೀಯ ಕ್ರಾಂತಿ ನಡೆಯಲಿದೆ ಎಂದರು. ಸಮಾಜವಾದಿ ಪಕ್ಷದೊಂದಿಗಿನ ಈ ಮೈತ್ರಿ ಮೋದಿ ಹಾಗೂ ಅಮಿತ್​​ ಶಾ ನಿದ್ದೆಗೆಡಿಸಲಿದೆ ಎಂದು ಹೇಳಿದ್ರು.

ಇದೇ ವೇಳೆ ಕಾಂಗ್ರೆಸ್​ ವಿರುದ್ಧವೂ ವಾಗ್ದಾಳಿ ನಡೆಸಿದ ಮಾಯಾವತಿ, ಬೈ ಎಲೆಕ್ಷನ್​ಗಳಲ್ಲಿ ಕಾಂಗ್ರೆಸ್​ ಠೇವಣಿ ಕಳೆದುಕೊಂಡಿದೆ ಎಂದರು. ಬಿಜೆಪಿಯಾಗಲೀ ಕಾಂಗ್ರೆಸ್​ ಆಗಲೀ ಯಾರೇ ಆಡಳಿತ ನಡೆಸಿದ್ರೂ, ಅವರ ನೀತಿಗಳು ಬಹುತೇಕ ಒಂದೇ ಆಗಿದೆ. ಉದಾಹರಣೆಗೆ ಎರಡೂ ಪಕ್ಷಗಳು ಡಿಫೆನ್ಸ್​ ಡೀಲ್​ಗಳಲ್ಲಿ ಭ್ರಷ್ಟಾಚಾರ ನಡೆಸಿವೆ. ಕಾಂಗ್ರೆಸ್​​ ತುರ್ತು ಪರಿಸ್ಥಿತಿ ಘೋಷಿಸಿತ್ತು. ಇಂದು ಅಘೋಷಿತ ತುರ್ತು ಪರಿಸ್ಥಿತಿ ಇದೆ ಎಂದು ಹೇಳಿದ್ರು. ನಮ್ಮ ಮೈತ್ರಿಯಲ್ಲಿ ಕಾಂಗ್ರೆಸ್ ಪಕ್ಷವನ್ನೂ ಸೇರ್ಪಡೆ ಮಾಡಿಕೊಳ್ಳೋದ್ರಿಂದ ಯಾವುದೇ ಲಾಭ ಇಲ್ಲ. ಕಾಂಗ್ರೆಸ್ ವೋಟ್​​ಗಳನ್ನ ವರ್ಗಾಯಿಸಲು ಆಗಲ್ಲ ಅನ್ನೋದು ಎಸ್​​ಪಿ, ಬಿಎಸ್​ಪಿ ಎರಡಕ್ಕೂ ಈಗಾಗಲೇ ಅನುಭವ ಆಗಿದೆ ಎಂದರು.

ಬಿಜೆಪಿ ಮುಂಚಿನಂತೆ ಇವಿಎಂ ದುರ್ಬಳಕೆ ಮಾಡಿಕೊಳ್ಳದಿದ್ದರೆ ಕೇಂದ್ರದಿಂದ ಬಿಜೆಪಿಯನ್ನ ಕಿತ್ತೊಗೆಯುತ್ತೇವೆ ಅನ್ನೋ ನಂಬಿಕೆ ನಮಗಿದೆ ಎಂದು ಮಾಯಾವತಿ ಹೇಳಿದ್ರು. ಇನ್ನು ಸೀಟ್​ ಹಂಚಿಕೆ ಬಗ್ಗೆ ಮಾಹಿತಿ ನೀಡಿದ ಮಾಯಾವತಿ, ಬಿಎಸ್​​ಪಿ 38 ಸೀಟ್​ಗಳಲ್ಲಿ ಹಾಗೂ ಎಸ್​​ಪಿ 38 ಸೀಟ್​​ಗಳಲ್ಲಿ ಸ್ಪರ್ಧಿಸಲಿವೆ. ಎರಡು ಲೋಕಸಭಾ ಸೀಟ್​​ಗಳನ್ನ ಇತರೆ ಪಕ್ಷಗಳಿಗೆ ಬಿಟ್ಟಿದ್ದೇವೆ. ಅಮೇಥಿ ಹಾಗೂ ರಾಯ್​​ಬರೇಲಿಯನ್ನ ಕಾಂಗ್ರೆಸ್​​ಗೆ ಬಿಡಲಾಗಿದೆ ಎಂದು ಹೇಳಿದ್ರು.

Summary
ಅಖಿಲೇಶ್​ ಯಾದವ್​​ ಜೊತೆಗಿನ ಮೈತ್ರಿ Modi-Amit Shah ನಿದ್ದೆಗೆಡಿಸಲಿದೆ: ಮಾಯಾವತಿ
Article Name
ಅಖಿಲೇಶ್​ ಯಾದವ್​​ ಜೊತೆಗಿನ ಮೈತ್ರಿ Modi-Amit Shah ನಿದ್ದೆಗೆಡಿಸಲಿದೆ: ಮಾಯಾವತಿ

LEAVE A REPLY

Please enter your comment!
Please enter your name here