ಅಯೋಧ್ಯೆ: ಸುಪ್ರೀಂಕೋರ್ಟ್ ಆದೇಶದಂತೆ ಮಧ್ಯಸ್ಥಿಕೆ ಸಮಿತಿ ಮಂಗಳವಾರ ಅಯೋಧ್ಯೆ ಸಂಧಾನ ಪ್ರಕ್ರಿಯೆಯನ್ನು ಆರಂಭಿಸಿದೆ. ಸುಪ್ರೀಂ ನಿವೃತ್ತ ನ್ಯಾಯಮೂರ್ತಿ ಎಫ್.ಎಂ.ಖಾಲೀಫುಲ್ಲಾ, ಆರ್ಟ್ ಆಫ್ ಲಿವಿಂಗ್​ನ ಶ್ರೀ ಶ್ರೀ ರವಿಶಂಕರ್ ಗುರೂಜಿ ಹಾಗೂ ಹಿರಿಯ ವಕೀಲ ಶ್ರೀರಾಮ ಪಂಚು ನೇತೃತ್ವದ ಸಮಿತಿ ಕೆಲಸ ಆರಂಭಿಸಿದೆ. ವಿಶೇಷ ವಿಮಾನದ ಮೂಲಕ ಅಯೋಧ್ಯೆಗೆ ಬಂದಿಳಿದಿರುವ ಈ ಮೂವರು ಸದಸ್ಯರು, ಸ್ಥಳೀಯ ವಿಶ್ವವಿದ್ಯಾಲಯದ ಅತಿಥಿ ಗೃಹದಲ್ಲಿ ಸಂಧಾನ ಸಭೆ ನಡೆಸುತ್ತಿದ್ದಾರೆ. ಮೂಲಗಳ ಪ್ರಕಾರ ಮೇ 15ರವರೆಗೂ ಸಂಧಾನ ಸಭೆ ಮುಂದುವರಿಯಲಿದೆ.

LEAVE A REPLY

Please enter your comment!
Please enter your name here