ಅಹಮದಾಬಾದ್: ಗುಜರಾತ್​ನ ಕಛ್ ಜಿಲ್ಲೆಯ ಧೋಲವಿರಾ ಗ್ರಾಮದಲ್ಲಿ ಐದು ಸಾವಿರ ವರ್ಷ ಹಳೆಯ ಮಾನವನ ಅಸ್ಥಿಪಂಜರವನ್ನು ಪುರಾತತ್ತ್ವ ಶಾಸ್ತ್ರಜ್ಞರು ಪತ್ತೆ ಹಚ್ಚಿದ್ದಾರೆ. ಇದು ಹರಪ್ಪ ಮತ್ತು ಮೊಹೆಂಜೊದಾರೊ ನಾಗರಿ

ಕತೆಯ ಕಾಲಕ್ಕೆ ಸೇರಿದ್ದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಧೋಲವಿರಾ ಗ್ರಾಮದಲ್ಲಿ 250ಕ್ಕೂ ಹೆಚ್ಚು ಸಮಾಧಿಗಳಿದ್ದು, ಇವು ವೃತ್ತಾಕಾರ, ಅರ್ಧ ವೃತ್ತಾಕಾರದಲ್ಲಿ ಇವೆ. ಈ ಪೈಕಿ 26 ಸಮಾಧಿಗಳ ಉತ್ಖನನ ನಡೆಸುವಾಗ ಈ ಅಸ್ಥಿಪಂಜರ ಪತ್ತೆಯಾಗಿದೆ. ಅಸ್ಥಿಪಂಜರ ದೊರೆತ ಸಮಾಧಿ 4600ರಿಂದ 5200 ವರ್ಷಗಳ ಹಿಂದಿನದ್ದು ಎಂದು ಪುರಾತತ್ತ್ವ ಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಸ್ಥಿಪಂಜರವನ್ನು ಕೇರಳ ವಿಶ್ವವಿದ್ಯಾಲಯಕ್ಕೆ ಒಯ್ದು, ಮೃತ ವ್ಯಕ್ತಿ ವಯಸ್ಸು, ಲಿಂಗ, ಸಾವಿಗೆ ಕಾರಣ ಏನು ಎಂಬುದನ್ನು ಪತ್ತೆ ಹಚ್ಚಲಾಗುವುದು ಎಂದು ಕಛ್ ವಿಶ್ವವಿದ್ಯಾಲಯದ ಪುರಾತತ್ತ್ವ ವಿಭಾಗದ ಮುಖಸ್ಥ ಸುರೇಶ್ ಭಂಡಾರಿ ಹೇಳಿದ್ದಾರೆ. ಕಛ್ ಜಿಲ್ಲೆಯ ಲಖ್ಪತ್ ತಾಲೂಕಿನಲ್ಲಿ ಕಛ್ ವಿಶ್ವವಿದ್ಯಾಲಯ ಮತ್ತು ಕೇರಳ ವಿಶ್ವವಿದ್ಯಾಲಯದ ಸಂಶೋಧಕರು ಜಂಟಿಯಾಗಿ ಉತ್ಖನನ ನಡೆಸುತ್ತಿದ್ದಾರೆ. -ಏಜೆನ್ಸೀಸ್

LEAVE A REPLY

Please enter your comment!
Please enter your name here