ಲಖನೌ: ವಯಸ್ಸಾದ ಮಹಿಳೆಯ ಮುಂದೆ ಅಧಿಕಾರದ ಅಹಂ ತೋರಿದ ಉತ್ತರ ಪ್ರದೇಶದ ಪೊಲೀಸ್‌ ಇನ್ಸ್‌ಪೆಕ್ಟರ್‌ ತೇಜ್‌ ಪ್ರಕಾಶ್‌ ಸಿಂಗ್‌ನನ್ನು ಪೊಲೀಸ್‌ ಇಲಾಖೆ ಅಮಾನತುಗೊಳಿಸಿದೆ. 75 ವರ್ಷದ ಬ್ರಹ್ಮದೇವಿ ಅವರು ಪ್ಲೈವುಡ್‌ ಫ್ಯಾಕ್ಟರಿಯಲ್ಲಿ ತಮ್ಮ 20 ವರ್ಷದ ಮೊಮ್ಮಗ ಅಕ್ಷಯ್‌ ಯಾದವ್‌ ಅನುಮಾನಸ್ಪದ ರೀತಿಯಲ್ಲಿ ಮೃತಪಟ್ಟ ಘಟನೆ ಕುರಿತು ದೂರು ಸಲ್ಲಿಸಲು ಲಖನೌದ ಗುಡಂಬಾ ಪೊಲೀಸ್‌ ಠಾಣೆಗೆ ಕೆಲ ದಿನಗಳ ಹಿಂದೆ ಬಂದಿದ್ದರು. ದಮ್ಮಯ್ಯ ಅಂತೀನಿ. ದಯವಿಟ್ಟು ದೂರು ದಾಖಲಿಸಿಕೊಂಡು ತನಿಖೆ ಕೈಗೊಳ್ಳಿ ಎಂದು ಅಜ್ಜಿ ಕೈಮುಗಿದು ಪರಿಪರಿಯಾಗಿ ಬೇಡಿಕೊಂಡಿದ್ದರು. ಇಷ್ಟು ಸಾಲದೆ ಕೊನೆಗೆ ಇನ್ಸ್‌ಪೆಕ್ಟರ್‌ ಕಾಲಿಗೆ ಬಿದ್ದು ಮೊರೆ ಇಟ್ಟರು. ಇಂತಹ ಪರಿಸ್ಥಿತಿಯಲ್ಲೂ ತೇಜ್‌ ಪ್ರಕಾಶ್‌ ಸಿಂಗ್‌ ಕಾಲ ಮೇಲೆ ಕಾಲು ಹಾಕಿಕೊಂಡು ಅಹಂಕಾರ ಪ್ರದರ್ಶಿಸಿದ್ದರು. ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಇದರ ಬೆನ್ನಲ್ಲೇ ಪೊಲೀಸ್‌ ಇಲಾಖೆ ಅವರನ್ನು ಅಮಾನತುಗೊಳಿಸಿದೆ.

Summary
ಅಹಂ ತೋರಿದ ಪೊಲೀಸ್‌ ಅಧಿಕಾರಿ ಸಸ್ಪೆಂಡ್‌: Photo Viral
Article Name
ಅಹಂ ತೋರಿದ ಪೊಲೀಸ್‌ ಅಧಿಕಾರಿ ಸಸ್ಪೆಂಡ್‌: Photo Viral

LEAVE A REPLY

Please enter your comment!
Please enter your name here