ವಿನೂತನ ಚಿತ್ರ ‘೬’ದಲ್ಲಿ ಹಲವು ವಿಶೇಷತೆಗಳು ಇರಲಿದೆ. ಶಿಶಿರಾ ಚಿತ್ರದ ಮೂಲಕ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ಮಂಜುಸ್ವರಾಜ್ಗೆ ಆರನೇ ಚಿತ್ರವಾಗಿದೆ. ಕತೆಗೆ ಸೂಕ್ತವೆಂದು ಇದೇ ಸಂಖ್ಯೆಯನ್ನು ಬಳಸಲಾಗಿದೆ. ಆರು ಹುಡುಗರ ಸುತ್ತ ಕತೆ ನಡೆಯಲಿದೆ. ಸೆಸ್ಪನ್ಸ್ , ಹಾರರ್ ಥ್ರಿಲ್ಲರ್ ಕತೆಯಾಗಿದ್ದರಿಂದ ಒಂದು ಸಣ್ಣ ಸುಳಿವು ನೀಡಿದಲ್ಲಿ ಸಿನಿಮಾದ ಸಾರಾಂಶ ತಿಳಿಯುತ್ತದೆ. ಅದರಿಂದ ಎಲ್ಲವನ್ನು ಚಿತ್ರಮಂದಿರದಲ್ಲೆ ನೋಡಬೇಕಂತೆ. ಆರು ಹುಡುಗರ ಪೈಕಿ ನಾಲ್ವರು ಆಯ್ಕೆಯಾಗಿದ್ದು, ಉಳಿದ ಎರಡು ಮತ್ತು ಒಬ್ಬಳೇ ನಾಯಕಿ ತಲಾಷ್ ನಡೆಸಲಾಗುತ್ತಿದೆ. ಇಲ್ಲಿಯವರೆಗೂ ೬ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಲಾಗಿದ್ದು, ಕಾಕತಾಳಿಯ ಎನ್ನುವಂತೆ ಟೈಟಲ್ ಕತೆ ಸೂಕ್ತವಾಗಿದೆ. ಕಾರ್ತಿಕ ಮಾಸದ ಕೊನೆ ದಿವಸ ಆಗಿದ್ದರಿಂದ ಇಂದು ಸಿನಿಮಾದ ಪೂಜೆ ಮಾಡಲಾಗಿದೆ. ಮುಂದಿನ ವರ್ಷ ಮೊದಲ ತಿಂಗಳ ೧೯ ತಾರೀಖಿನಿಂದ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸಲು ಯೋಜನೆ ಹಾಕಲಾಗಿದೆ.
ನಾಯಕನಾಗಿ ಅನುರಾಗ್ ಇವರೊಂದಿಗೆ ನೌಶಾದ್, ರವಿತೇಜ, ಪ್ರಜ್ವಲ್ ಇವರೆಲ್ಲರೂ ನಾಗತ್ತಿಹಳ್ಳಿ ಚಂದ್ರಶೇಖರ್ ಸಾರಥ್ಯದ ಟೆಂಟ್ ಸಿನಿಮಾದ ವಿದ್ಯಾರ್ಥಿಗಳು, ಹಾಗೆಯೇ ನಿರ್ದೇಶಕರು ಕೂಡ ಅಮೃತಧಾರೆ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದರು ಎನ್ನುವುದು ವಿಶೇಷ. ಇವರೆಲ್ಲರಿಗೂ ಸೂಕ್ತ ತರಭೇತಿಯನ್ನು ಕೊಠಡಿಯಲ್ಲಿ, ಡಮ್ಮಿ ಕ್ಯಾಮಾರ ಮುಂದೆ ನೀಡಲಾಗುತ್ತದಂತೆ. ಎರಡು ಹಾಡುಗಳಿಗೆ ಸಂಗೀತ ಸಂಯೋಜಿಸುತ್ತಿರುವ ಅಭಿಮನ್ರಾಯ್, ಸಂಕಲನಕಾರ ಬಸವರಾಜಅರಸ್ ಮತ್ತು ಛಾಯಗ್ರಾಹಕ ಲಿವಿನ್ ಇವರಿಗೆ ನಿರ್ದೇಶಕರು ಕತೆ ಹೇಳದೆ ಇರುವ ಕಾರಣ ಚಿತ್ರದ ಕುರಿತಂತೆ ಮಾಹಿತಿ ತಿಳಿದಿಲ್ಲವಂತೆ. ಮಗ ನಾಯಕನಾಗುತ್ತಿರುವ ರಾಜೇಶ್ ಅವರು ಪತ್ನಿ ಸತ್ಯಭಾಮರಾಜೇಶ್ ಹೆಸರಿನಲ್ಲಿ ಗಣಪ ಕ್ರಿಯೆಶನ್ಸ್ ಮೂಲಕ ನಿರ್ಮಾಣ ಮಾಡುತ್ತಿರುವುದು ಹೊಸ ಅನುಭವ.