ಲಖನೌ: ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್​ ಏಳು ಲೋಕಸಭಾ ಕ್ಷೇತ್ರಗಳನ್ನು ಎಸ್​ಪಿ-ಬಿಎಸ್​ಪಿ-ಆರ್​ಎಲ್​ಡಿ ಮೈತ್ರಿಗೆ ಬಿಟ್ಟುಕೊಡಲು ನಿರ್ಧರಿಸಲಿದ್ದು, ಆ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಯುಪಿ ಕಾಂಗ್ರೆಸ್​ ಸಮಿತಿ ಮುಖ್ಯಸ್ಥ ರಾಜ್​ ಬಬ್ಬರ್​ ಸುದ್ದಿಗೋಷ್ಠಿಯಲ್ಲಿ ಘೋಷಿಸಿದ್ದಾರೆ.

ಅಖಿಲೇಶ್​ ಯಾದವ್​ ಅವರ ಮೇನ್ಪುರಿ, ಕನೌಜ್, ಫಿರೋಜಾಬಾದ್​​ ಹಾಗೂ ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ, ರಾಷ್ಟ್ರೀಯ ಲೋಕದಳದ ಮುಖಂಡರಾದ ಅಜಿತ್​ ಸಿಂಗ್​ ಮತ್ತು ಜಯಂತ್​ ಚೌಧರಿ ಅವರು ಸ್ಪರ್ಧಿಸುವ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಯಾವ ಅಭ್ಯರ್ಥಿಗಳನ್ನೂ ಕಣಕ್ಕಿಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಾಗೇ ಅಪನಾ ದಳ ಪಕ್ಷಕ್ಕಾಗಿ ಗೊಂಡಾ ಮತ್ತು ಪಿಲಿಬಿಟ್​ ಕ್ಷೇತ್ರಗಳನ್ನೂ ಬಿಟ್ಟುಕೊಡುವುದಾಗಿ ಅವರು ತಿಳಿಸಿದ್ದಾರೆ.

ಅಖಿಲೇಶ್​ ಯಾದವ್​ ನೇತೃತ್ವದ ಸಮಾಜವಾದಿ ಪಾರ್ಟಿ, ಮಾಯಾವತಿಯವರ ಬಹುಜನ ಸಮಾಜ ಪಾರ್ಟಿ ಮತ್ತು ರಾಷ್ಟ್ರೀಯ ಲೋಕ ದಳಗಳು ಮುಂಬರುವ ಲೋಕಸಭಾ ಚುನಾವಣೆಗಾಗಿ ಈಗಾಗಲೇ ಮೈತ್ರಿ ಮಾಡಿಕೊಂಡಿವೆ. ಈ ಮೊದಲು ಕಾಂಗ್ರೆಸ್​ ಎಲ್ಲ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಹೇಳಿತ್ತು. ಸದ್ಯ ಯುಪಿ ಕಾಂಗ್ರೆಸ್​ ಸಮಿತಿ ಕ್ಷೇತ್ರಗಳನ್ನು ಬಿಟ್ಟುಕೊಡುವುದಾಗಿ ಹೇಳಿದೆ. ಉತ್ತರ ಪ್ರದೇಶದಲ್ಲಿ ಏ.11ರಿಂದ ಚುನಾವಣೆ ಪ್ರಾರಂಭವಾಗಲಿದ್ದು 7 ಹಂತದಲ್ಲಿ ನಡೆಯಲಿದೆ. ಮೇ 19 ರಂದು ಕೊನೆಗೊಳ್ಳಲಿದೆ.

LEAVE A REPLY

Please enter your comment!
Please enter your name here