ಕುಮಟಾ : ಇಂಗ್ಲೀಷ ಮಾಧ್ಯಮ ಶಾಲೆ ಪ್ರಗತಿ ಪಥದಲ್ಲಿ ಸಾಗುತ್ತಿದೆ. ಭವಿಷ್ಯದಲ್ಲಿ ಆಧುನಿಕ ಶಿಕ್ಷ ಣದ ಮಟ್ಟವನ್ನು ಯಶಸ್ವಿಯಾಗಿ ತಲುಪಲು ಪ್ರಾಥಮಿಕ ಹಂತದಲ್ಲಿ ನಮ್ಮ ಶಿಕ್ಷ ಣ ಸಂಸ್ಥೆ ಇಂದಿನ ಶೈಕ್ಷ ಣಿಕ ಸ್ಪರ್ಧೆಯನ್ನು ಎದುರಿಸುವ ಶಿಕ್ಷ ಣ ನೀಡಲು ಸಶಕ್ತವಾಗಿದೆ ಎಂದು ಕೆನರಾ ಕಾಲೇಜು ಸೊಸೈಟಿಯ ಕಾರ್ಯಾಧ್ಯಕ್ಷ ಮುರಳೀಧರ ಪ್ರಭು ಹೇಳಿದರು.

ಎ.ವಿ.ಬಾಳಿಗಾ ಇಂಗ್ಲೀಷ ಮಾಧ್ಯಮ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಾಲೆಯ ಅಭಿವೃದ್ಧಿ ಹಾಗೂ ಉತ್ತಮ ಶಿಕ್ಷ ಣ ನೀಡಲು ಆಡಳಿತ ಮಂಡಳಿ ಸದಾ ಸಿದ್ಧವಿದೆ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ಧ ಎ.ವಿ.ಬಾಳಿಗಾ ಮಹಾವಿದ್ಯಾಲಯದ ಪ್ರಾಚಾರ್ಯ ಉಮೇಶ ಜಿ ಶಾಸ್ತ್ರೀ ಮಾತನಾಡಿ, ಇಂದಿನ ದಿನಗಳಲ್ಲಿ ಇಂಗ್ಲೀಷ್‌ ಅವಶ್ಯಕತೆಯನ್ನು ಅಲ್ಲಗಳೆಯುವಂತಿಲ್ಲ. ಆದರೆ ನಮ್ಮ ಕನ್ನಡ ಮಾತೃಭಾಷೆ ಶ್ರೇಷ್ಠವಾದದ್ದು. ಕನ್ನಡದ ಬಗ್ಗೆ ಅಲಕ್ಷ್ಯ ಧೋರಣೆ ಸಲ್ಲದು. ಬಾಳಿಗಾ ಶಿಕ್ಷ ಣ ಸಂಸ್ಥೆ ಹೆಮ್ಮರವಿದ್ದಂತೆ. ಮಹಾವಿದ್ಯಾಲಯ ಮುಂದಿನ ದಿನಗಳಲ್ಲಿ ವಿಶ್ವವಿದ್ಯಾಲಯವಾಗಬೇಕು. ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷ ಣ ಸಿಗುತ್ತಿಲ್ಲ ಎಂಬ ಮಾತಿದೆ. ಆದರೆ ಕೆನರಾ ಕಾಲೇಜು ಸೊಸೈಟಿ ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷ ಣ ನೀಡಲು ಈ ಶಾಲೆ ಆರಂಭಿಸಿದೆ. ಈ ಶಾಲೆಯಲ್ಲಿ 350ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಓದುತ್ತಿರುವುದು ಉತ್ತಮ ಶಿಕ್ಷ ಣದ ಸಂಕೇತ. ಕಲಿಕೆಯಲ್ಲಿ ಭಾಷೆಗಳು ಪ್ರಧಾನವಾದರೂ ಮಕ್ಕಳಿಗೆ ಸಂಸ್ಕಾರದ ಹೊರತು ಭವಿಷ್ಯ ಕಟ್ಟಿಕೊಳ್ಳಲಾಗದು ಎಂದರು.

ಅಧ್ಯಕ್ಷ ತೆ ವಹಿಸಿದ್ದ ಎ.ಪಿ.ಶಾನಭಾಗ ಮಾತನಾಡಿ ಮಕ್ಕಳ ಶಿಕ್ಷ ಣಕ್ಕೆ ಅನುಕೂಲಕರ ಪರಿಸರವಿದೆ. ಅಚ್ಚುಕಟ್ಟಾದ ಕಟ್ಟಡ ಹಾಗೂ ಮೂಲ ಸೌಕರ್ಯಗಳ ಲಭ್ಯತೆ ಇದೆ. ಮಂಡಳಿ ಕಾರ್ಯದರ್ಶಿ ವಿನೋದ ಪ್ರಭು ಮೇಲುಸ್ತುವಾರಿಯಲ್ಲಿ ಶಾಲೆಯ ದೈನಂದಿನ ಚಟುವಟಿಕೆಗಳು ಅಚ್ಚುಕಟ್ಟಾಗಿ ನಡೆಯುತ್ತಿವೆ ಎಂದರು.

ವೇದಿಕೆಯಲ್ಲಿ ಶಾಲಾ ಮುಖ್ಯಾಧ್ಯಾಪಕಿ ಪ್ರಿಯಾ ನರ್ಹೋನಾ ಉಪಸ್ಥಿತರಿದ್ದರು. ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಫಲಿತಾಂಶ ಪಡೆದ ಬೇರೆ ವಿದ್ಯಾಸಂಸ್ಥೆಯ ವಿಧ್ಯಾರ್ಥಿಗಳನ್ನು ಗೌರವಿಸಲಾಯಿತು. ಆಡಳಿತ ಮಂಡಳಿ ಕಾರ್ಯದರ್ಶಿ ವಿನೋದ ಪ್ರಭು, ಸದಸ್ಯ ಹರಿ ಪೈ, ಅಶೋಕ ಪಿಕಳೆ, ಎನ್‌.ಆರ್‌.ಶಾನಭಾಗ, ಪಾಲಕರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ನಂತರ ಮಕ್ಕಳ ಮನರಂಜನಾ ಕಾರ್ಯಕ್ರಮ ನಡೆಯಿತು. ಮಕ್ಕಳ ವಿಭಿನ್ನ ಕಲಾ ಪ್ರದರ್ಶನ ಗಮನ ಸೆಳೆಯಿತು.

Summary
ಇಂಗ್ಲೀಷ ಮಾಧ್ಯಮ ಶಾಲೆ ಪ್ರಗತಿ ಪಥದಲ್ಲಿ ಸಾಗುತ್ತಿದೆ.
Article Name
ಇಂಗ್ಲೀಷ ಮಾಧ್ಯಮ ಶಾಲೆ ಪ್ರಗತಿ ಪಥದಲ್ಲಿ ಸಾಗುತ್ತಿದೆ.
Description
ಅಧ್ಯಕ್ಷ ತೆ ವಹಿಸಿದ್ದ ಎ.ಪಿ.ಶಾನಭಾಗ ಮಾತನಾಡಿ ಮಕ್ಕಳ ಶಿಕ್ಷ ಣಕ್ಕೆ ಅನುಕೂಲಕರ ಪರಿಸರವಿದೆ. ಅಚ್ಚುಕಟ್ಟಾದ ಕಟ್ಟಡ ಹಾಗೂ ಮೂಲ ಸೌಕರ್ಯಗಳ ಲಭ್ಯತೆ ಇದೆ. ಮಂಡಳಿ ಕಾರ್ಯದರ್ಶಿ ವಿನೋದ ಪ್ರಭು ಮೇಲುಸ್ತುವಾರಿಯಲ್ಲಿ ಶಾಲೆಯ ದೈನಂದಿನ ಚಟುವಟಿಕೆಗಳು ಅಚ್ಚುಕಟ್ಟಾಗಿ ನಡೆಯುತ್ತಿವೆ ಎಂದರು. 

LEAVE A REPLY

Please enter your comment!
Please enter your name here