‘ನವರಸ ನಾಯಕ’ ಜಗ್ಗೇಶ್ ಭಾನುವಾರ (ಮಾ.17) 56ನೇ ಜನ್ಮದಿನ ಆಚರಿಸಿಕೊಂಡರು. ಸದ್ಯ ಬಿಡುಗಡೆಗೆ ಸಿದ್ಧವಾಗಿರುವ ‘ಪ್ರಿಮಿಯರ್ ಪದ್ಮಿನಿ’ ಚಿತ್ರತಂಡ ಜಗ್ಗೇಶ್ ಜನ್ಮದಿನದ ಪ್ರಯುಕ್ತ ಟೀಸರ್ ರಿಲೀಸ್ ಮಾಡಿ ಶುಭಾಶಯ ಕೋರಿದೆ. ತಮ್ಮ ನೆಚ್ಚಿನ ನಟನಿಗೆ ಅಭಿಮಾನಿಗಳು ಮತ್ತು ಸ್ಯಾಂಡಲ್​ವುಡ್​ನ ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಜಗ್ಗೇಶ್​ಗೆ ಶುಭ ಕೋರಿದ್ದಾರೆ.

‘ಪವರ್ ಸ್ಟಾರ್’ ಪುನೀತ್ ರಾಜ್​ಕುಮಾರ್ ಭಾನುವಾರ (ಮಾ.17) 44ನೇ ವಸಂತಕ್ಕೆ ಕಾಲಿಟ್ಟರು. ಕೇಕ್, ಹಾರಗಳನ್ನು ತರಬೇಡಿ ಎಂಬ ಪುನೀತ್ ಮನವಿಗೆ ಅಭಿಮಾನಿಗಳು ಸ್ಪಂದಿಸಿ, ನೆಚ್ಚಿನ ನಟನಿಗೆ ವಿಷ್ ಮಾಡಿ ಕಣ್ತುಂಬಿಕೊಂಡರು. ಜತೆಗೊಂದು ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಅಭಿಮಾನಿಗಳ ಸಂಭ್ರಮ ಕಂಡು ಖುಷಿ ವ್ಯಕ್ತಿಪಡಿಸಿದ ಪುನೀತ್, ‘ಇಂದು ಅಭಿಮಾನಿಗಳ ದಿನ. ಅವರನ್ನು ಭೇಟಿಯಾಗುವುದೇ ದೊಡ್ಡ ಖುಷಿ. ವರ್ಷಾನುಗಟ್ಟಲೇ ಸಿನಿಮಾಗಳಲ್ಲಿ ಬಿಜಿ ಇರುತ್ತೇವೆ. ಅವರೆಲ್ಲರನ್ನು ಭೇಟಿ ಮಾಡಲು ಇರುವುದು ಈ ದಿನ. ಹಾಗಾಗಿ ಇಡೀ ದಿನ ಅವರ ಜತೆ ಕಾಲ ಕಳೆಯುತ್ತೇನೆ. ಇನ್ನು ವಿಶೇಷ ಉಡುಗೊರೆ ಅಂತ ಯಾವುದು ಇಲ್ಲ. ನನ್ನ ಕುಟುಂಬವೇ ಜೀವನದ ದೊಡ್ಡ ಗಿಫ್ಟ್’ ಎಂದರು. ‘ಸಾಧ್ಯವಾದರೆ ಮನೆ ಮೇಲೆ ಮಣ್ಣಿನ ಪಾತ್ರೆಯಲ್ಲಿ ನೀರು ತುಂಬಿಸಿ ಇಡಿ. ಬೇಸಿಗೆ ಶುರುವಾಗಿದೆ. ಪಕ್ಷಿಸಂಕುಲ ಉಳಿಸಿ, ಗಿಡ ನೆಡಿ’ ಎಂದರು. ಅಭಿಮಾನಿಗಳ ಜತೆಯಲ್ಲಿ ಕೆಲ ಸಿನಿಮಾ ತಂಡದವರು ಆಗಮಿಸಿ ಶುಭಕೋರಿದರು. ಚೇತನ್​ಕುಮಾರ್ ನಿರ್ದೇಶನದಲ್ಲಿ ಸಿದ್ಧಗೊಳ್ಳಲಿರುವ ಪುನೀತ್ ಹೊಸ ಸಿನಿಮಾ ‘ಜೇಮ್್ಸ’ ಚಿತ್ರತಂಡ ಚಿತ್ರದ ಮೋಷನ್ ಪೋಸ್ಟರ್ ಹಾಗೂ ಹಾಡೊಂದನ್ನು ಬಿಡುಗಡೆ ಮಾಡಿದರೆ, ‘ಯುವರತ್ನ’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ನಟ ಶಿವರಾಜ್​ಕುಮಾರ್ ಕೇಕ್ ಜತೆಗೆ ಪುನೀತ್ ಮನೆಗೆ ಆಗಮಿಸಿ, ಜನ್ಮದಿನದ ಶುಭಕೋರಿದರು.

LEAVE A REPLY

Please enter your comment!
Please enter your name here