ಉಡುಪಿ: ಶಿವಮೊಗ್ಗ ಜಿಲ್ಲೆಯ ಸಾಗರ ಹಾಗೂ ಆಸುಪಾಸಿನ 183 ಮಂದಿ ಈ ತನಕ ಶಂಕಿತ ಕೆಎಫ್‌ಡಿ(ಕ್ಯಾಸನೂರು ಫಾರೆಸ್ಟ್‌ ಡಿಸೀಸ್‌) ಜ್ವರದ ಹಿನ್ನೆಲೆಯಲ್ಲಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಜ್ವರ ಮರುಕಳಿಸಿ 8ಮಂದಿ ಆಸ್ಪತ್ರೆಗೆ ದಾಖಲಾಗಿದ್ದು 70ಮಂದಿಗೆ ಕೆಎಫ್‌ಡಿ ಸೋಂಕಿರುವುದು ಹಾಗೂ 120 ಮಂದಿಗೆ ಸೋಂಕಿಲ್ಲದಿರುವುದು ವೈದ್ಯಕೀಯ ವರದಿಯಿಂದ ದೃಢಪಟ್ಟಿದೆ. ಒಂದು ವರದಿ ಬರಲು ಬಾಕಿಯಿದೆ.

155 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. 32 ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಇವರಲ್ಲಿ ಇಬ್ಬರು ಮರು ದಾಖಲಾದವರಾಗಿದ್ದಾರೆ. ಈ ತನಕ ಶಿವಮೊಗ್ಗ ವ್ಯಾಪ್ತಿಯ ಇಬ್ಬರು ಸಾವನ್ನಪ್ಪಿದ್ದಾರೆ.

ಭಾನುವಾರ ಹಾಗೂ ಸೋಮವಾರ ಕೇವಲ ಎರಡು ಮಂಗಗಳು ಮೃತಪಟ್ಟಿವೆ. ಸಿದ್ದಾಪುರ ಜನ್ಸಾಲೆಯ ಕೆಎಫ್‌ಡಿ ಖಚಿತ ಪ್ರದೇಶದಲ್ಲಿ ಒಂದು ಮಂಗ ಮೃತಪಟ್ಟಿದ್ದರೆ ಹೆಬ್ರಿ ಕುಚ್ಚೂರು ರಸ್ತೆಯಲ್ಲೊಂದು ಮಂಗನ ಶವ ಕೊಳೆ ಸ್ಥಿತಿಯಲ್ಲಿ ಸೋಮವಾರ ಪತ್ತೆಯಾಗಿದೆ.

ಈ ತನಕ ಒಟ್ಟು 53 ಮಂಗಗಳ ಮರಣೋತ್ತರ ಪರೀಕ್ಷೆ ನಡೆಸಿದ್ದು 50ವರದಿಗಳ ಪೈಕಿ 12 ಪೊಸಿಟಿವ್‌ ಹಾಗೂ 38 ನೆಗೆಟಿವ್‌ ಬಂದಿದೆ. ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಾನವ ಶಂಕಿತ ಜ್ವರದ ಒಂದು ಪ್ರಕರಣಕ್ಕೆ ಸಂಬಂಧಿಸಿ ವರದಿ ನಿರೀಕ್ಷಿಸಲಾಗಿದೆ. 30ಮಂದಿಯ ರಕ್ತ ಮಾದರಿ ಕಳಿಸಿದ್ದು 29 ನೆಗೆಟಿವ್‌ ಆಗಿದೆ. ಒಂದು ವರದಿ ಬರಲು ಬಾಕಿಯಿದೆ.

ಮಾಹಿತಿ: ಕಡ್ತಲ ಪಂಚಾಯಿತಿ ವ್ಯಾಪ್ತಿಯ ಕೊರಗ ಕಾಲನಿಯಲ್ಲಿ ಗ್ರಾ. ಪಂ. ಅಧ್ಯಕ್ಷ ಮತ್ತು ಪಿಡಿಒ ಮತ್ತು ಸದಸ್ಯರು ಕೆಎಫ್‌ಡಿ ಕುರಿತು ಮಾಹಿತಿ ನೀಡಿದರು.

Summary
ಉಡುಪಿ : ಕೆಎಫ್‌ಡಿ ಶಂಕಿತ ಜ್ವರ: 32ಮಂದಿಗೆ ಚಿಕಿತ್ಸೆ ಮುಂದುವರಿಕೆ !
Article Name
ಉಡುಪಿ : ಕೆಎಫ್‌ಡಿ ಶಂಕಿತ ಜ್ವರ: 32ಮಂದಿಗೆ ಚಿಕಿತ್ಸೆ ಮುಂದುವರಿಕೆ !
Description
ಮಾಹಿತಿ: ಕಡ್ತಲ ಪಂಚಾಯಿತಿ ವ್ಯಾಪ್ತಿಯ ಕೊರಗ ಕಾಲನಿಯಲ್ಲಿ ಗ್ರಾ. ಪಂ. ಅಧ್ಯಕ್ಷ ಮತ್ತು ಪಿಡಿಒ ಮತ್ತು ಸದಸ್ಯರು ಕೆಎಫ್‌ಡಿ ಕುರಿತು ಮಾಹಿತಿ ನೀಡಿದರು. 

LEAVE A REPLY

Please enter your comment!
Please enter your name here