ಉಡುಪಿ: ಉಡುಪಿ ಜಿಲ್ಲೆಯಲ್ಲಿ ಜನವರಿ ತಿಂಗಳಲ್ಲಿ ನಡೆದ ರಸ್ತೆ ಅಪಘಾತಕ್ಕೆ 28 ಅಮೂಲ್ಯ ಜೀವಗಳು ಬಲಿಯಾಗಿವೆ ಎಂದು ಎಎಸ್ಪಿ ಕುಮಾರಚಂದ್ರ ಹೇಳಿದ್ದಾರೆ.

ಅವರು ಜಿಲ್ಲಾಡಳಿತ, ಸಾರಿಗೆ ಇಲಾಖೆ, ಪೊಲೀಸ್‌ ಇಲಾಖೆ ವತಿಯಿಂದ ಮಣಿಪಾಲದ ರಜತಾದ್ರಿಯಲ್ಲಿರುವ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಸೋಮವಾರ ನಡೆದ 30ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

2017ರಲ್ಲಿ 1,671 ರಸ್ತೆ ಅಪಘಾತವಾಗಿದ್ದು 231 ಮಂದಿ ಸಾವನ್ನಪ್ಪಿದರೆ 902 ಮಂದಿ ಗಾಯಗೊಂಡಿದ್ದಾರೆ. 2018ರಲ್ಲಿ 1,671 ಅಪಘಾತದಿಂದ 278ಮಂದಿ ಸಾವನ್ನಪ್ಪಿದ್ದಾರೆ. ಹೇಳದೆ ಕೇಳದೆ ನಡೆವ ಅಪಘಾತದ ಹಿನ್ನೆಲೆಯಲ್ಲಿ ಮುಂಜಾಗರೂಕತೆ ಅತ್ಯಗತ್ಯ ಎಂದು ಹೇಳಿದರು.

ದೇಶದಲ್ಲಿ ಪ್ರತಿ ವರ್ಷ ರಸ್ತೆ ಅಪಘಾತಕ್ಕೆ 1.50ಲಕ್ಷ ಜೀವ ಬಲಿಯಾಗುತ್ತಿದ್ದು ಯಾರಿಗೂ ಕಬ್ಬಿಣ, ಸ್ಟೀಲ್‌ ತಲೆಯಿಲ್ಲ. ಹೆಲ್ಮೆಟ್‌ ಹಾಕದೆ ಅಪಘಾತ ಸಂಭವಿಸಿದರೆ ಸಾವು, ಗಂಭೀರ ಗಾಯ ಸಾಧ್ಯವಿದ್ದು ಪೊಲೀಸರಿಗಾಗಿ ಹೆಲ್ಮೆಟ್‌ ಹಾಕಬೇಡಿ. ಒಂದು ಲಕ್ಷ ರೂ. ಮೌಲ್ಯದ ಬೈಕ್‌ ಕೊಳ್ಳೋರಿಗೆ ಗುಣಮಟ್ಟದ ಹೆಲ್ಮೆಟ್‌ ಯಾಕೆ ಕೊಳ್ಳಲಾಗದು?

ನಮ್ಮ ಜೀವದ ಬೆಲೆ ನಮಗೇ ಗೊತ್ತಿಲ್ಲದಿದ್ದರೆ ಹೇಗೆ? ಹೋದ ಜೀವ ಮತ್ತೆ ಬಾರದು. ಅತಿ ವೇಗ, ಮದ್ಯಪಾನ, ರೋಡ್‌ ಎಂಜಿನಿಯರಿಂಗ್‌ ಕೂಡ ಅಪಘಾತಕ್ಕೆ ಕಾರಣ ಎಂದರು. ವಾಹನ ಚಾಲನೆ ತರಬೇತಿ ಶಾಲೆಯ ಶಿವರಾಮ ಶೆಟ್ಟಿ ಮಾತನಾಡಿದರು.

ಸಹಾಯಕ ಸಾರಿಗೆ ಪ್ರಾದೇಶಿಕ ಅಧಿಕಾರಿ ರಾಮಕೃಷ್ಣ ರೈ, ಆದಿ ಉಡುಪಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಅಶೋಕ್‌ ಉಪಸ್ಥಿತರಿದ್ದರು. ಅಧೀಕ್ಷಕಿ ಸುಧಾಮಣಿ ಪ್ರಾರ್ಥಿಸಿದರು. ಮೋಟಾರು ವಾಹನ ನಿರೀಕ್ಷಕ ವಿಶ್ವನಾಥ ನಾಯಕ್‌ ಸ್ವಾಗತಿಸಿದರು. ಉಡುಪಿ ಉಪ ಸಾರಿಗೆ ಆಯುಕ್ತ ಆರ್‌. ಎಂ. ವೆರ್ಣೇಕರ್‌ ಪ್ರಾಸ್ತಾವಿಕ ಮಾತನ್ನಾಡಿದರು. ಶಶಿಧರ್‌ ಬಹುಮಾನಿತರ ಪಟ್ಟಿ ವಾಚಿಸಿದರು.

ಹಿರಿಯ ಪ್ರಾಥಮಿಕ, ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಚಿತ್ರಕಲೆ, ಭಾಷಣ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕುಮಾರ್‌ ವಂದಿಸಿದರು.

ಪ್ರಾಥಮಿಕ ಶಾಲಾ ವಿಭಾಗ: ಚಿತ್ರಕಲೆ: ಸುಹಾನಿ(ಪ್ರ), ಗಂಗಮ್ಮ(ದ್ವಿ), ಶಮೀರ್‌(ತೃ), ಸಮಾಧಾನಕರ: ಭಾಗ್ಯಶ್ರೀ, ಉಮಾ, ಭಾಷಣ: ಸುಶ್ಮಿತಾ(ಪ್ರ), ಉಮಾ(ದ್ವಿ), ಮಂಜುನಾಥ ಹಡಪದ(ತೃ), ಸಮಾಧಾನಕರ: ವಿಜೇಶ್‌, ಪ್ರೇಮಾ

ಪ್ರೌಢಶಾಲಾ ವಿಭಾಗ: ಚಿತ್ರಕಲೆ: ಶೋಭಾ(ಪ್ರ), ಸವಿತಾ(ದ್ವಿ), ರಿಫಾ(ತೃ), ಸಮಾಧಾನಕರ: ಚೇತನ್‌, ಪಲ್ಲವಿ, ಭಾಷಣ; ಚೇತನ್‌ ಸನಿಲ್‌(ಪ್ರ), ನೌಫಲ್‌(ದ್ವಿ), ವಿನೀತ್‌(ತೃ), ಸಮಾಧಾನಕರ: ಗಗನ, ಸುಶಾನ್‌ ದಾಸ್‌.

Summary
ಉಡುಪಿ : ಜನವರಿ ತಿಂಗಳಲ್ಲಿ ಬಲಿಯಾಗಿವೆ 28 ಅಮೂಲ್ಯ ಜೀವಗಳು !!
Article Name
ಉಡುಪಿ : ಜನವರಿ ತಿಂಗಳಲ್ಲಿ ಬಲಿಯಾಗಿವೆ 28 ಅಮೂಲ್ಯ ಜೀವಗಳು !!
Description
ಪ್ರಾಥಮಿಕ ಶಾಲಾ ವಿಭಾಗ: ಚಿತ್ರಕಲೆ: ಸುಹಾನಿ(ಪ್ರ), ಗಂಗಮ್ಮ(ದ್ವಿ), ಶಮೀರ್‌(ತೃ), ಸಮಾಧಾನಕರ: ಭಾಗ್ಯಶ್ರೀ, ಉಮಾ, ಭಾಷಣ: ಸುಶ್ಮಿತಾ(ಪ್ರ), ಉಮಾ(ದ್ವಿ), ಮಂಜುನಾಥ ಹಡಪದ(ತೃ), ಸಮಾಧಾನಕರ: ವಿಜೇಶ್‌, ಪ್ರೇಮಾ 

LEAVE A REPLY

Please enter your comment!
Please enter your name here