ಉಡುಪಿ: ಶಾಲೆಯಲ್ಲಿ ಸರಸ್ವತಿ ಪೂಜೆ ಮಾಡುವುದನ್ನು ವಿರೋಧಿಸುವ ಸೆಕ್ಯುಲರ್‌ವಾದಿಗಳಿಗೆ ತಿರುಪತಿ ತಿಮ್ಮಪ್ಪನ ಹುಂಡಿಯ ಹಣ ಯಾಕೆ ಬೇಕು. ತಿರಸ್ಕಾರ ಮಾಡಿ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್ ಹೇಳಿದರು.
ಹಿಂದು ಜನಜಾಗೃತಿ ಸಮಿತಿ ವತಿಯಿಂದ ಬೋರ್ಡ್ ಹೈಸ್ಕೂಲ್ ಮೈದಾನದಲ್ಲಿ ನಡೆದ ಹಿಂದು ರಾಷ್ಟ್ರಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.

ಕರಿಂಜೆ ಕ್ಷೇತ್ರದ ಶ್ರೀ ಮುಕ್ತಾನಂದ ಸ್ವಾಮೀಜಿ ಮಾತನಾಡಿದರು. ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ಸಮಾನತೆ ಎಂದು ಸಾರುವ ತೃಪ್ತಿ ದೇಸಾಯಿ, ಮಸೀದಿಗೂ ಇದನ್ನೇ ಯಾಕೆ ಅನ್ವಯಿಸುತ್ತಿಲ್ಲ ಎಂದು ಪ್ರಶ್ನಿಸಿದರು. ಸಮಿತಿಯ ದಕ್ಷಿಣ ಕನ್ನಡ ಜಿಲ್ಲೆ ಸಮನ್ವಯಕಾರ ಚಂದ್ರು ಮೊಗೇರ, ಸನಾತನ ಸಂಸ್ಥೆಯ ಲಕ್ಷ್ಮೀ ಪೈ ಉಪಸ್ಥಿತರಿದ್ದರು.

ವ್ಯಾಲೆಂಟೈನ್ಸ್ ಡೇ ಆಚರಣೆಗೆ ವಿರೋಧ: ಕ್ರಿಶ್ಚಿಯನ್ನರ ’ಡೇ’ ಸಂಸ್ಕೃತಿ ವ್ಯಾಲೆಂಟೆನ್ಸ್ ಡೇ ಆಚರಣೆ ಬೇಡ. ಈ ಬಗ್ಗೆ ರಾಜ್ಯಾದ್ಯಂತ ಜಿಲ್ಲಾಧಿಕಾರಿಗಳಿಗೆ ಮನವಿ ನೀಡುತ್ತೇವೆ. ಪ್ರೇಮಿಗಳ ದಿನದ ಬಗ್ಗೆ ದುರ್ಗಾಸೇನೆ ಮೂಲಕ ಜಾಗೃತಿ ಮೂಡಿಸಲಾಗುತ್ತದೆ. ಪ್ರೇಮಿಗಳ ದಿನಾಚರಣೆ ಬದಲು ತಂದೆ ತಾಯಿಯನ್ನು ಪೂಜಿಸಲು ಪ್ರೇರೇಪಿಸಲಾಗುವುದು ಎಂದು ಮುತಾಲಿಕ್ ಸುದ್ದಿಗಾರರಿಗೆ ತಿಳಿಸಿದರು. ರಾಜ್ಯ ರಾಜಕಾರಣ ಅಸಹ್ಯಕರವಾಗಿದೆ. 3 ಪಕ್ಷಗಳಿಂದ ಸಾಮಾನ್ಯ ಜನರಿಗೆ ಭ್ರಮನಿರಸನವಾಗಿದೆ. ಇಂಥ ರಾಜಕಾರಣವನ್ನು ರಾಜ್ಯದ ಜನತೆ ಧಿಕ್ಕರಿಸಬೇಕು. ಹೊಸ ಪಕ್ಷದ ನಿರ್ಮಾಣ ಅನಿವಾರ್ಯತೆ ಇದೆ ಎಂದರು.

Summary
ಉಡುಪಿ : ಸೆಕ್ಯುಲರ್‌ವಾದಿಗಳಿಗೆ ಹುಂಡಿ ಯಾಕೆ !
Article Name
ಉಡುಪಿ : ಸೆಕ್ಯುಲರ್‌ವಾದಿಗಳಿಗೆ ಹುಂಡಿ ಯಾಕೆ !
Description
3 ಪಕ್ಷಗಳಿಂದ ಸಾಮಾನ್ಯ ಜನರಿಗೆ ಭ್ರಮನಿರಸನವಾಗಿದೆ. ಇಂಥ ರಾಜಕಾರಣವನ್ನು ರಾಜ್ಯದ ಜನತೆ ಧಿಕ್ಕರಿಸಬೇಕು. ಹೊಸ ಪಕ್ಷದ ನಿರ್ಮಾಣ ಅನಿವಾರ್ಯತೆ ಇದೆ ಎಂದರು.

LEAVE A REPLY

Please enter your comment!
Please enter your name here