ಬೆಂಗಳೂರು, ನವೆಂಬರ್ 7: ಬೆಂಗಳೂರು ಸೇರಿದಂತೆ ಇಡೀ ರಾಜ್ಯಾದ್ಯಂತ ಎಚ್‌1ಎನ್1 ಪ್ರಕರಣಗಳು ಹೆಚ್ಚಾಗುತ್ತಿದ್ದು ಈ ಕುರಿತು ಎಚ್ಚರಿಕೆ ನೀಡಲು ನಮ್ಮ ಮೆಟ್ರೋ ಮುಂದಾಗಿದೆ.

ಇತ್ತೀಚಿಗಷ್ಟೆ ಕನ್ನಡದಲ್ಲಿ ಕನ್ನಡ ಹನಿಗವನ, ಚುಟುಕುಗಳನ್ನು ಪ್ರಸಾರ ಮಾಡುತ್ತಿದ್ದಾರೆ, ಕನ್ನಡ ರಾಜ್ಯೋತ್ಸವದ ತಿಂಗಳು ಪೂರ್ತಿಯಾಗಿ ಕನ್ನಡ ಘೋಷಣೆಗಳನ್ನು ಹಾಕಲಾಗುತ್ತಿದೆ. ಇದೀಗ ಎಚ್‌1ಎನ್1 ರೋಗದ ಕುರಿತು ಮಾಹಿತಿ ಹಾಗೂ ಎಚ್ಚರಿಕೆಯನ್ನು ಪ್ರಸಾರ ಮಾಡುತ್ತಿದೆ.

ಎಚ್‌1ಎನ್1 ರೋಗ ಮೊದಲೇ ಪತ್ತೆಯಾದಲ್ಲಿ ಅದನ್ನು ಸುಲಭವಾಗಿ ಕಡಿಮೆ ಮಾಡಬಹುದಾಗಿದೆ, ಈ ರೋಗದ ಬಗ್ಗೆ ಹೆದರುವ ಅಗತ್ಯವಿಲ್ಲ ಎಂದು ಪ್ಲಾಟ್‌ಫಾರ್ಮ್ ಮಾತ್ರವಲ್ಲದೆ ಮೆಟ್ರೋ ನಿಲ್ದಾಣದಾದ್ಯಂತ ಪ್ರಸಾರ ಮಾಡಲಾಗುತ್ತಿದೆ. ಹೆಚ್ಚು ಜನಸಂದಣಿ ಇರುವ ಪ್ರದೇಶದಲ್ಲಿ ಈ ರೋಗದ ಬಗ್ಗೆ ಜಾಗೃತಿ ನೀಡುವ ಅಗತ್ಯವಿದೆ ಎನ್ನುವುದು ವೈದ್ಯರ ಮಾತು.

ಇದೀಗ ನಮ್ಮ ಮೆಟ್ರೋದಲ್ಲಿ ಈ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ, ಶೀಘ್ರ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಮಾಲ್ ಗಳು, ಮಲ್ಟಿ ಪ್ಲೆಕ್ಸ್‌ಗಳನ್ನೂ ಈ ರೀತಿಯ ಜಾಗೃತಿ ಘೋಷಣೆಗಳನ್ನು ಪ್ರಸಾರ ಮಾಡ ಮಾಡಬೇಕಾಗುತ್ತದೆ.

LEAVE A REPLY

Please enter your comment!
Please enter your name here