ಬೈಂದೂರು: ಇಲ್ಲಿನ ಐತಿಹಾಸಿಕ ತಗ್ಗರ್ಸೆ ಕಂಬಳೋತ್ಸವ ತಗ್ಗರ್ಸೆ ಕಂಬಳ ಗದ್ದೆಯಲ್ಲಿ ಸಂಭ್ರಮ ಅದ್ದೂರಿಯಾಗಿ ಸಂಪನ್ನಗೊಂಡಿತು.

ಕಂಬಳೋತ್ಸವದಲ್ಲಿ ವಿಜೇತ ಕೋಣಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಮಾಜಿ ಶಾಸಕ ಕೆ.ಲಕ್ಷ್ಮಿ ನಾರಾಯಣ, ಕೃಷಿಕರು ಪ್ರಕೃತಿಯನ್ನು ಪೂಜಿಸುವರು. ತಮ್ಮ ಜಾನುವಾರುಗಳನ್ನು ಮಕ್ಕಳಂತೆ ಲಾಲನೆ ಪಾಲನೆ ಮಾಡಿ ಕೃಷಿ ಚಟುವಟಿಕೆಯ ಬಿಡುವಿನ ಅವಧಿಯಲ್ಲಿ ಕಂಬಳ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಇದು ಗ್ರಾಮೀಣ ಭಾಗದ ಜನರಿಗೆ ಚೈತನ್ಯ ನೀಡುವ ಉತ್ಸವಗಳಾಗಿವೆ ಎಂದರು.

ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಜಿಲ್ಲಾ ಪಂಚಾಯಿತಿ ಶಿಕ್ಷ ಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ, ಜಿ.ಪಂ. ಸದಸ್ಯ ಶಂಕರ ಪೂಜಾರಿ, ಬೈಂದೂರು ತಾಲೂಕು ಕಂಬಳ ಸಮಿತಿ ಅಧ್ಯಕ್ಷ ವೆಂಕ್ಟ ಪೂಜಾರಿ ಸಸಿಹಿತ್ಲು, ಜಿಲ್ಲಾ ಕಂಬಳ ಸಮಿತಿ ನಿಕಟಪೂರ್ವಾಧ್ಯಕ್ಷ ಬಿ.ಶಾಂತಾರಾಮ ಶೆಟ್ಟಿ ಬಾರಕೂರು, ಲಕ್ಷ ್ಮಣ ಹೆಗ್ಡೆ ತಗ್ಗರ್ಸೆ, ಅಣ್ಣಪ್ಪ ಹೆಗ್ಡೆ ತಗ್ಗರ್ಸೆ ಉಪಸ್ಥಿತರಿದ್ದರು.

ಸಂಘಟಕ ನಾರಾಯಣ ಹೆಗ್ಡೆ ತಗ್ಗರ್ಸೆ ಸ್ವಾಗತಿಸಿದರು. ಗಣಪತಿ ಹೋಬಳಿದಾರ್‌ ಕಾರ್ಯಕ್ರಮ ನಿರ್ವಹಿಸಿದರು. ಜನ್ಮನೆ ರತ್ನಾಕರ ಶೆಟ್ಟಿ ವಂದಿಸಿ, ಉದಯ ಹೆಗ್ಡೆ, ಸಂತೋಷ ಹೆಗ್ಡೆ ಸಹಕರಿಸಿದರು.

ಕಂಬಳದ ಫಲಿತಾಂಶ: ಹಗ್ಗ ಸಬ್‌ ಜೂನಿಯರ್‌ ವಿಭಾಗದಲ್ಲಿ ಗಣಪ ಗಂಗನಾಡು ಅವರ ಕೋಣ ಪ್ರಥಮ ಸ್ಥಾನ, ಸತ್ಯರಂಜನ್‌ ಹೆಗ್ಡೆ ಅರೆಶಿರೂರು ಅವರ ಕೋಣ ದ್ವಿತೀಯ ಸ್ಥಾನ ಪಡೆದಿದೆ. ಹಗ್ಗ ಜೂನಿಯರ್‌ ವಿಭಾಗದಲ್ಲಿ ಅನ್ವಿತಾ ವಿಶ್ವನಾಥ ಪೂಜಾರಿ ಕುದ್ರು ನಾವುಂದ ಅವರ ಕೋಣ ಪ್ರಥಮ ಸ್ಥಾನ, ಪನ್ನಗ ಹೆಬ್ಬಾರ್‌ ಕೊಡೇರಿ ಅವರ ಕೋಣ ದ್ವಿತೀಯ ಸ್ಥಾನ ಪಡೆದಿದೆ.

ಹಗ್ಗ ಸೀನಿಯರ್‌ ವಿಭಾಗದಲ್ಲಿ ದಿ.ಮಹಾಬಲ ಶೆಟ್ಟಿ ಕಾರಿಕಟ್ಟೆ ಬೈಂದೂರು ಅವರ ಕೋಣ ಪ್ರಥಮ ಸ್ಥಾನ, ಆನಂದ ದೇವಾಡಿಗ ಮೇಲ್‌ ಗುಡ್ಡೆಮೆನೆ ತೆಕ್ಕಟ್ಟೆ ಅವರ ಕೋಣ ದ್ವಿತೀಯ ಸ್ಥಾನ ಪಡೆದಿದೆ. ಹಲಗೆ(ಗೋರಿ)ವಿಭಾಗದಲ್ಲಿ ಶಾಂತರಾಮ ಶೆಟ್ಟಿ ಬಾರ್ಕೂರು ಅವರ ಕೋಣ ಪ್ರಥಮ ಸ್ಥನ ಪಡೆದರೆ ವೆಂಕಟ ಪೂಜಾರಿ ಸಸಿಹಿತ್ಲು ಬೈಂದೂರು ಅವರ ಕೋಣ ದ್ವಿತೀಯ ಸ್ಥಾನ ಪಡೆದಿದೆ. ಬೈಂದೂರು ತಾಲೂಕು ಕಂಬಳ ಸಮಿತಿ ಅಧ್ಯಕ್ಷ ವೆಂಕಟ ಪೂಜಾರಿ ಸಸಿಹಿತ್ಲು ಅವರ ಕೋಣವನ್ನು ಆಕರ್ಷಕ ಶೋಭಾಯಾತ್ರೆ ಪಾಲ್ಗೊಂಡ ಕೋಣ ಎಂದು ಗೌರವಿಸಲಾಯಿತು.

LEAVE A REPLY

Please enter your comment!
Please enter your name here