ಬೆಂಗಳೂರು: ನಮ್ಮ ನಡುವಿದ್ದೂ ನಾವ್ಯಾರೂ ಗಮನಿಸದ ರೋಚಕ ಕಥಾನಕ ಹೊಂದಿದ್ದ ಚಿತ್ರ ತಾರಕಾಸುರ. ಭರ್ಜರಿಯಾಗಿಯೇ ಓಪನಿಂಗ್ ಪಡೆದುಕೊಂಡು ಪ್ರೇಕ್ಷಕರನ್ನ ಆವರಿಸಿಕೊಂಡಿದ್ದ ಈ ಸಿನಿಮಾ ಈಗ ಐವತ್ತನೇ ದಿನ ಪೂರೈಸಿಕೊಂಡು ಯಶಸ್ಸಿನ ಓಟವನ್ನ ಮುಂದುವರೆಸಿದೆ. ಈ ಮೂಲಕ ಭರಪೂರವಾದ ಗೆಲುವೊಂದನ್ನು ತನ್ನದಾಗಿಸಿಕೊಂಡಿದೆ.

ಭಾರತೀಯ ಸಿನಿಮಾ ಕ್ಷೇತ್ರದಲ್ಲಿ ಯಾರೂ ಮುಟ್ಟದ ಕಥಾವಸ್ತು `ತಾರಕಾಸುರ’ ಚಿತ್ರದ್ದು. ಈ ಹಿಂದೆ ಇದೇ ನಿರ್ದೇಶಕ ಬಂಡಿಯಪ್ಪ `ರಥಾವರ’ದಲ್ಲಿ ಮಂಗಳಮುಖಿಯರ ವಿಚಿತ್ರ ಜಗತ್ತನ್ನು ಪ್ರೇಕ್ಷಕರಿಗೆ ಪರಿಚಯಿಸಿದ್ದರು. ಈ ಬಾರಿ ಬುಡಬುಡಕೆ ಜನಾಂಗದವರ ವಿಚಾರವನ್ನು ಇಂಚಿಂಚಾಗಿ ಬಿಚ್ಚಿಟ್ಟಿದ್ದಾರೆ. ಇತಿಹಾಸವನ್ನು ಹೇಳುತ್ತಲೇ ವಾಸ್ತವದ ಜೊತೆಗೆ ಕಮರ್ಷಿಯಲ್ ಕತೆಯನ್ನು ಬೆರೆಸಿರುವುದು ಬಂಡಿಯಪ್ಪನವರ ಜಾಣ್ಮೆ. ಈ ಚಿತ್ರದ ಹೀರೋ ವೈಭವ್ ಹೊಸಬನಾದರೂ ಸಾಹಸ ದೃಶ್ಯಗಳಲ್ಲಿ ರೋಚಕವಾಗಿ ಅಭಿನಯಿಸಿದ್ದಾರೆ. ನಾಯಕಿ ಮಾನ್ವಿತಾ ಮುದ್ದುಮುದ್ದಾಗಿ ಕಾಣಿಸಿಕೊಂಡಿದ್ದಾರೆ.

ನರಸಿಂಹಲು ನಿರ್ದೇಶನದ ಈ ಚಿತ್ರದಲ್ಲಿ ಅವರ ಪುತ್ರ ವೈಭವ್ ನಾಯಕನಾಗಿ ಎಂಟ್ರಿ ಕೊಟ್ಟು ಗೆದ್ದಿದ್ದಾರೆ. ಡ್ಯಾನಿ ಸಫಾನಿಯಂಥಾ ರಾಕ್ಷಸ ಪ್ರತಿಭೆಯ ಮುಂದೆ ನಟಿಸಿ, ಥರ ಥರದ ಶೇಡುಗಳನ್ನು ಆವಾಹಿಸಿಕೊಂಡಿರೋ ವೈಭವ್ ಪಾಲಿಗೂ ಇದು ಮಹಾ ಗೆಲುವು. ಪ್ರತಿ ಸೀನುಗಳಲ್ಲಿಯೂ ಅಚ್ಚರಿಗಳನ್ನೇ ತೆರೆದಿಡುವ ಈ ಚಿತ್ರವನ್ನು ಪ್ರೇಕ್ಷಕರು ಒಪ್ಪಿಕೊಂಡು ಅಪ್ಪಿಕೊಂಡಿದ್ದಾರೆ. ಆದ್ದರಿಂದಲೇ ತಾರಕಾಸುರ ಐವತ್ತನೇ ದಿನದಾಚೆಗೂ ಗೆಲುವಿನ ಪಯಣ ಮುಂದುವರೆಸಿದ್ದಾನೆ!

Summary
ಐವತ್ತನೇ ದಿನದಾಚೆಗೆ ಮುನ್ನುಗ್ಗಿದ ತಾರಕಾಸುರ! Manvitha Kamath
Article Name
ಐವತ್ತನೇ ದಿನದಾಚೆಗೆ ಮುನ್ನುಗ್ಗಿದ ತಾರಕಾಸುರ! Manvitha Kamath

LEAVE A REPLY

Please enter your comment!
Please enter your name here