ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅಭಿನಯದ ಯಜಮಾನ ಸಿನಿಮಾದ ಟ್ರೇಲರ್​ ನಿನ್ನೆ ರಿಲೀಸ್​ ಆಗಿದೆ. ಈ ಮೊದಲು ರಿಲೀಸ್​ ಆದ ಮೂರು ಸಾಂಗ್​ಗಳು ಸ್ಯಾಂಡಲ್​ವುಡ್​ನಲ್ಲಿ ಹೊಸ ದಾಖಲೆಗಳನ್ನ ಬರೆಯುವಂಥಾ ವ್ಯೂವ್ಸ್​ ಸಂಪಾದಿಸಿದ್ವು. ನಿನ್ನೆ ರಿಲೀಸ್​ ಆದ ಯಜಮಾನ ಟ್ರೇಲರ್​ ಕೂಡ ನಿರೀಕ್ಷೆಗೂ ಮೀರಿ ಹೊಸ ರೆಕಾರ್ಡ್ಸ್​​ ಹುಟ್ಟು ಹಾಕ್ತಾ ಇದೆ. ಟ್ರೇಲರ್​ ರಿಲೀಸ್​ ಆಗಿ ಜಸ್ಟ್ 55 ನಿಮಿಷದಲ್ಲಿ 10 ಲಕ್ಷ ವ್ಯೂವ್ಸ್​ ಸಂಪಾದಿಸೋ ಮೂಲಕ ದಾಖಲೆ ಮಾಡಿದ ಯಜಮನಾ ಟ್ರೇಲರ್, ರಿಲೀಸ್​ ಆಗಿ 24 ಗಂಟೆಯೊಳಗೆ ಬರೋಬ್ಬರಿ 1 ಕೋಟಿ ವೀಕ್ಷಣೆ ಕಾಣುವ ಮೂಲಕ ಮತ್ತೊಂದು ರೆಕಾರ್ಡ್​ ಮಾಡಿದೆ. ಇದೆ ಮಾರ್ಚ್ 1ನೇ ತಾರೀಖು ರಿಲೀಸ್​ ಆಗ್ತಾ ಇರೋ ಯಜಮಾನ ಸಿನಿಮಾದ ಟ್ರೇಲರ್​ ಸ್ಯಾಂಡಲ್​​ವುಡ್​ ಮಟ್ಟಿಗೆ ಹೊಸದೊಂದ ಬೆಂಚ್​ ಮಾರ್ಕ್​ ಸೃಷ್ಟಿ ಮಾಡಿದೆ. ಜೊತೆಗೆ ಟ್ರೇಲರ್​ ರಿಲೀಸ್​ ಆದಾಗಿಂದ ಟ್ರೆಂಡಿಂಗ್​ನಲ್ಲಿ ನಂಬರ್​ 1 ನೇ ಸ್ಥಾನದಲ್ಲಿದೆ.

ಚಿತ್ರದ ಹಾಡುಗಳು, ಟ್ರೇಲರ್​​ಗೆ ಸಿಗ್ತಾ ಇರೋ ರೆಸ್ಪಾನ್ಸ್​ ನೋಡಿದ್ರೆ ಬಾಕ್ಸ್​ ಆಫೀಸ್​ ಸುಲ್ತಾನನ ದರ್ಬಾರ್ ಈ ಸಲವೂ ಭರ್ಜರಿಯಾಗೇ ಇರೋದ್ರಲ್ಲಿ ಡೌಟೇ ಇಲ್ಲ. ಅಂದಹಾಗೆ ಸಿನಿಮಾಕ್ಕೆ ಪಿ.ಕುಮಾರ್​ ಹಾಗೂ ವಿ.ಹರಿಕೃಷ್ಣ ಸಿನಿಮಾಕ್ಕೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಬಿ.ಸುರೇಶ್​ ಹಾಗೂ ಶೈಲಜಾ ನಾಗ್​ ಯಜಮಾನನ್ನು ನಿರ್ಮಾಣ ಮಾಡಿದ್ದಾರೆ

Summary
ಒಂದೇ ದಿನದಲ್ಲಿ 1 ಕೋಟಿ ಜನ ಕಂಡ ಯಜಮಾನ..!
Article Name
ಒಂದೇ ದಿನದಲ್ಲಿ 1 ಕೋಟಿ ಜನ ಕಂಡ ಯಜಮಾನ..!

LEAVE A REPLY

Please enter your comment!
Please enter your name here