ಚಿಂತಾಮಣಿ: ತಾಲೂಕಿನ ಪ್ರಸಿದ್ಧ ಯಾತ್ರ ಸ್ಥಳವಾದ ಕೈಲಾಸಗಿರಿ ಅರಣ್ಯ ಪ್ರದೇಶ ಒತ್ತುವರಿ ದೂರಿನ ಹಿನ್ನೆಲೆಯಲ್ಲಿ ಪ್ರೊಬೆಷನರಿ ಎಸಿ ಅಶೋಕ್‌ತೇಲಿ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲಿಸಿತು.

ಕೈಲಾಸಗಿರಿ ಯಾತ್ರಾ ಸ್ಥಳವನ್ನು ಕೆಲವರು ಒತ್ತುವರಿ ಮಾಡಿದ್ದು, ಸರ್ವೆ ನಡೆಸಿ ಒತ್ತುವರಿ ತೆರವುಗೊಳಿಸುವಂತೆ ಸಾರ್ವಜನಿಕರು ಜಿಲ್ಲಾಧಿಕಾರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಆದೇಶ ಮೆರೆಗೆ ಶುಕ್ರವಾರ ಆಶೋಕ್‌ ತೇಲಿ ನೆತೃತ್ವದ ತಂಡ ಭೇಟಿ ನೀಡಿತ್ತು.

ದೇವಾಲಯಗಳ ಮೂಲಸೌಲಭ್ಯ ಪರಿಶೀಲನೆ: ಕಾವಲಗಾನಹಳ್ಳಿ ಕೈಲಾಸಗಿರಿ ಬೆಟ್ಟದ ಈಶ್ವರ ಗಣೇಶ ದೇವಾಲಯಗಳು ಖಾಸಗಿ ದೇವಾಲಯಗಳಾಗಿದ್ದು, ಸದರಿ ದೇವಾಲಯಗಳನ್ನು ಅಕ್ರಮವಾಗಿ ನಡೆಸಲಾಗುತ್ತಿದೆ. ಈ ಕುರಿತು ಸಾರ್ವಜನಿಕರಿಂದ ಬಂದ ದೂರುಗಳನ್ನು ಆಧರಿಸಿ ಸದರಿ ದೇವಾಲಯಕ್ಕೆ ಮುಜರಾಯಿ ತಹಸೀಲ್ದಾರರೊಂದಿಗೆ ಭೇಟಿ ನೀಡಿದ ಎಸಿ, ಸ್ಥಳ ಪರಿಶೀಲನೆ ಮಾಡಿದರು.

ಕೈಲಾಸಗಿರಿಯ ಮೆಲಿರುವ ದೇವಾಲಯಕ್ಕೆ ಬರುವ ಭಕ್ತಾಧಿಗಳಿಂದ ಸೇವಾ ಶುಲ್ಕ ವಸೂಲಿ ಮಾಡುತ್ತಿರುವ ಹಾಗೂ ಅವರಿಗೆ ಮೂಲಸೌಲಭ್ಯ, ದೇವಾಲಯದಲ್ಲಿ ನಿತ್ಯದ ವಸೂಲಾತಿಗಳಿಗೆ ಸಂಬಂಧಿಸಿದಂತೆ ಲೆಕ್ಕಪತ್ರಗಳನ್ನು ನಿರ್ವಹಣೆ, ವಾರ್ಷಿಕ ಲೆಕ್ಕ ಪರಿಶೋಧನೆ ನಡೆಸಿರುವ ಬಗ್ಗೆ, ದೇವಾಲಯಕ್ಕೆ ಸೇರಿದ ಆಸ್ತಿ, ದೇವಾಲಯದಲ್ಲಿ ಯಾವುದಾರೂ ಇನ್ನಿತರ ಅವ್ಯವಹಾರ ಚಟುವಟಿಕೆಗಳು ನಡೆಯುತ್ತಿರುವುದೂ ಸೇರಿದಂತೆ ಹಲವು ವಿಚಾರಗಳ ಪರಿಶೀಲಿಸಿ, ಭಕ್ತರೊಂದಿಗೆ ಚರ್ಚಿಸಿದರು.

ಕಾವಲುಗಾನಹಳ್ಳಿ ಸರ್ವೆ ನಂ. 11 ಮತ್ತು 12ರ ನೂರಾರು ಎಕರೆ ಸರಕಾರಿ ಜಮೀನಿನಲ್ಲಿ ಅಕ್ರಮವಾಗಿ ಗಂಗಾಧರೇಶ್ವರ ಟ್ರಸ್ಟ್‌ ದೇವಾಲಯಗಳ ನಿರ್ವಣೆ ನಡೆಸುತ್ತಿದೆ.

ಗುಡಿಬಂಡೆ ತಹಶೀಲ್ದಾರ್‌ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಸಂದೀಪ್‌, ಅರಣ್ಯ ಅಧಿಕಾರಿಗಳಾದ ಜಯಚಂದ್ರ, ಮಂಜುನಾಥ, ಕಂದಾಯ ನಿರೀಕ್ಷ ಕ ನರಸಿಂಹಯ್ಯ ಅವರು ಸರ್ವೆ ಕಾರ‍್ಯ ನಡೆಸಿದರು. ಈ ವೇಳೆ ಸರ್ವೆ ಅಧಿಕಾರಿ ತಿಮ್ಮರಾಜು, ಹಾಗೂ ಚಿಂತಾಮಣಿ ಗ್ರಾಮಾಂತರ ಠಾಣೆಯ ಪೊಲೀಸ್‌ ಇನ್ಸ್‌ಪೆಕ್ಟರ್‌ ಜಗದೀಶ್‌ರೆಡ್ಡಿ ಹಾಜರಿದ್ದರು.

Summary
ಒತ್ತುವರಿ ದೂರಿನ ಹಿನ್ನೆಲೆಯಲ್ಲಿ ಸರ್ವೆಗೆ ಡಿಸಿ ಆದೇಶದ ಮೇರೆಗೆ ಭೇಟಿ!
Article Name
ಒತ್ತುವರಿ ದೂರಿನ ಹಿನ್ನೆಲೆಯಲ್ಲಿ ಸರ್ವೆಗೆ ಡಿಸಿ ಆದೇಶದ ಮೇರೆಗೆ ಭೇಟಿ!
Description
ಕಾವಲುಗಾನಹಳ್ಳಿ ಸರ್ವೆ ನಂ. 11 ಮತ್ತು 12ರ ನೂರಾರು ಎಕರೆ ಸರಕಾರಿ ಜಮೀನಿನಲ್ಲಿ ಅಕ್ರಮವಾಗಿ ಗಂಗಾಧರೇಶ್ವರ ಟ್ರಸ್ಟ್‌ ದೇವಾಲಯಗಳ ನಿರ್ವಣೆ ನಡೆಸುತ್ತಿದೆ.  ಗುಡಿಬಂಡೆ ತಹಶೀಲ್ದಾರ್‌ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಸಂದೀಪ್‌, ಅರಣ್ಯ ಅಧಿಕಾರಿಗಳಾದ ಜಯಚಂದ್ರ, ಮಂಜುನಾಥ, ಕಂದಾಯ ನಿರೀಕ್ಷ ಕ ನರಸಿಂಹಯ್ಯ ಅವರು ಸರ್ವೆ ಕಾರ‍್ಯ ನಡೆಸಿದರು. ಈ ವೇಳೆ ಸರ್ವೆ ಅಧಿಕಾರಿ ತಿಮ್ಮರಾಜು, ಹಾಗೂ ಚಿಂತಾಮಣಿ ಗ್ರಾಮಾಂತರ ಠಾಣೆಯ ಪೊಲೀಸ್‌ ಇನ್ಸ್‌ಪೆಕ್ಟರ್‌ ಜಗದೀಶ್‌ರೆಡ್ಡಿ ಹಾಜರಿದ್ದರು. 

LEAVE A REPLY

Please enter your comment!
Please enter your name here