ಕೂಡಗು :ಕುಶಾಲನಗರದ ಭಾರವಿ ಕನ್ನಡ ಅಭಿಮಾನಿ ಸಂಘದ ವತಿಯಿಂದ 67ನೇ ಹುಣ್ಣಿಮೆಯ ಅಂಗವಾಗಿ ಕಾವೇರಿ ನದಿ ತಟದಲ್ಲಿರುವ ಕೊಡಗಿನ ಗಡಿ ಭಾಗದ ಕೊಪ್ಪ ಗೇಟ್ ಬಳಿ ಇರುವ ಶ್ರೀಕಾವೇರಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಮೊದಲಿಗೆ ತಾಯಿ ಕಾವೇರಿ ಮಾತೆಯ ವಿಗ್ರಹವನ್ನು ಪನ್ನೀರಿನಿಂದ ಶುದ್ಧೀಕರಿಸಿದ ನಂತರ ವಿವಿಧ ಬಗೆಯ ವಸ್ತ್ರಗಳಿಂದ ಅಲಂಕಾರ ಮಾಡಿ ಸುಗಂಧಭರಿತ ವಿವಿಧ ಪುಷ್ಪಗಳಿಂದ ಪುಷ್ಪಾಲಂಕಾರ ಮಾಡಲಾಯಿತು. ನಂತರ ಅರ್ಚಕರಿಂದ ಮಹಾಮಂಗಳಾರತಿ. ಹೋಮ ಹವನ ಕಾರ್ಯಕ್ರಮಗಳು ಜರುಗಿದವು. ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಭಕ್ತ ಸಮೂಹ ತಾಯಿ ಕಾವೇರಿ ಮಾತೆಯ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಂತರ ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆ ಹಾಗೂ ಪ್ರಸಾದ ವಿನಿಯೋಗ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

67ನೇ ಹುಣ್ಣಿಮೆಯ ಪೂಜಾ ಸೇವಾರ್ಥವನ್ನು ನಗರದ ದೇವಿ ಫೈನಾನ್ಸ್ ನಾ ಮಾಲೀಕರಾದ ರಾಜುರವರು ಹಾಗೂ ಮನೆಯವರು ವಹಿಸಿದ್ದರು. ಈ ಕುರಿತು ಮಾತನಾಡಿದ ಭಾರವಿ ಸಹೋದರರಾದ ಬಬೀಂದ್ರ ಪ್ರಸಾದ್ ಮಾತನಾಡಿ ಕಾವೇರಿ ಮಾತೆಯ 67ನೇ ಪೂಜಾ ಮಹೋತ್ಸವವು ಇಂದು ಹುಣ್ಣಿಮೆಯ ದಿನದಂದು ಪ್ರತಿ ಹುಣ್ಣಿಮೆಯ ರಾತ್ರಿಯ ಸಂದರ್ಭ ವಿಶೇಷವಾಗಿ ಪೂಜಾ ವಿಧಿವಿಧಾನಗಳನ್ನು ಆಚರಿಸಿಕೊಂಡು ಬರುತ್ತಿದ್ದು ನಾಡಿನಲ್ಲಿ ಉತ್ತಮ ಮಳೆ ಬೆಳೆಯಾಗಿ ಜನರು ಸಮೃದ್ಧಿಯಿಂದ ಜೀವನ ಸಾಗಿಸಲಿ ಸುಖ ಶಾಂತಿ ನೆಮ್ಮದಿ ಯುವ ನಾಡಿನಲ್ಲಿ ನೆಲಸಲಿ ಮತ್ತು ಉತ್ತಮವಾದ ಆರೋಗ್ಯಕರವಾದ ಜೀವನವನ್ನು ಸಾಗಿಸುವತ್ತ ಪ್ರತಿಯೊಬ್ಬರೂ ಕೂಡ ಆರೋಗ್ಯವಂತರಾಗಿ ಜೀವಿಸುವ ಲ್ಲಿ ಕಾವೇರಿ ತಾಯಿಯ ಆಶೀರ್ವಾದವಿರಲಿ ಎಂದು ಬೇಡಿಕೊಳ್ಳುತ್ತಾ ವಿಶೇಷ ಪೂಜಾ ವಿಧಿವಿಧಾನಗಳನ್ನು ಜರುಗಿಸಲಾಗಿದ್ದು ಇಂದು ಅತೀವ ಭಕ್ತ ಸಮೂಹವು ಈ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ತುಂಬಾ ಸಂತೋಷದಾಯಕವಾಗಿದೆ ಎಂದು ಇದೇ ಸಂದರ್ಭ ತಿಳಿಸಿದರು ನಂತರ ಪೂಜಾ ಸೇವಾರ್ಥ ದಾರರಾದ ದೇವಿ ಫೈನಾನ್ಸ್ ಮಾಲಿಕ ರಾಜು ಮಾತನಾಡಿ ಈ ದಿನ ಈ ಒಂದು 67ನೇ ಹುಣ್ಣಿಮೆಯ ಪೂಜಾ ವಿಧಿವಿಧಾನಗಳನ್ನು ಶ್ರೀ ಕಾವೇರಿ ಮಾತೆಯ ಸನ್ನಿದಿಯಲ್ಲಿ ನೆರವೇರಿಸಲು ಅವಕಾಶ ಮಾಡಿಕೊಟ್ಟ ಅಂತಹ ಭಾರವಿ ಸಹೋದರರು ಮತ್ತು ಈ ಪೂಜಾ ಮಹೋತ್ಸವಕ್ಕೆ ಪಾಲ್ಗೊಂಡ ಎಲ್ಲಾ ಭಕ್ತಸಮೂಹಕ್ಕೆ ನಿಜವಾಗಿಯೂ ನಾವು ಋಣಿ ಯಾಗಿದ್ದು ತಾಯಿ ಕಾವೇರಿ ಮಾತೆಯು ನಾಡಿನ ಎಲ್ಲಾ ಜನರಿಗೆ ಸುಖ ಶಾಂತಿ ನೆಮ್ಮದಿಯನ್ನು ಕರುಣಿಸಲಿ ಎಂದು ಇದೇ ಸಂದರ್ಭ ತಿಳಿಸಿದರು. ನಂತರ ಪ್ರಗತಿಪರರಾದ ಪರಮೇಶ್ ಸಾಗರ್ ಮಾತನಾಡಿ ಇತಿಚಿಗೆ ನಾಡಿನಲ್ಲಿ ಸಮೃದ್ಧವಾದ ಮಳೆ ಬೆಳೆ ಆಗುತ್ತಿದ್ದು ನಾಡಿನಾದ್ಯಂತ ಜಲಕ್ಷಾಮವು ಕೊಂಚ ಮಟ್ಟಿಗೆ ದೂರವಾದಂತೆ ಕಾಣುತ್ತಿದೆ. ಕಾವೇರಿ ನದಿಯ ತಟವನ್ನು ದಯವಿಟ್ಟು ಸ್ವಚ್ಛತೆ ಗಿಂತ ಕಾಪಾಡಿಕೊಳ್ಳಬೇಕು ನದಿಯಲ್ಲಿ ಕಸಕಡ್ಡಿ ಇನ್ನಿತರ ಗಲೀಜು ವಸ್ತುಗಳನ್ನು ಬಿಸಾಡದೆ ಕಾವೇರಿ ನದಿಯ ಪಾವಿತ್ರ್ಯತೆಗೆ ಧಕ್ಕೆ ಬರದಂತೆ ನೋಡಿಕೊಳ್ಳಬೇಕು ಆಗಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯವೆಂದು ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಕಾವೇರಿ ನದಿ ತಂಡವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕೆಂದು ಇದೇ ಸಂದರ್ಭ ತಿಳಿಸಿದರು. ಈ ಸಂದರ್ಭ ಭಾರವಿ ಕನ್ನಡ ಅಭಿಮಾನಿ ಸಂಘದ ರವೀಂದ್ರ ಪ್ರಸಾದ್. ವಿಜೇಂದ್ರ ಪ್ರಸಾದ್. ಚಂದ್ರು. ದೋಸೆ ಕ್ಯಾಂಪ್ ರುದ್ರ. ಸೇರಿದಂತೆ ಅಪಾರ ಭಕ್ತ ಸಮೂಹವು ಈ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here