ಹುಬ್ಬಳ್ಳಿ  
ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯು ರೈತರಿಗೆ ಕಬ್ಬು ಕಟಾವು ಮಾಡುವ ಗ್ಯಾಂಗ್‌ ನೀಡುವಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ ರೈತರು ಕಾರ್ಖಾನೆ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

”ಆಡಳಿತ ಮಂಡಳಿ ನಿರ್ದೇಶಕರು ತಮಗೆ ಬೇಕಾದವರಿಗೆ ಕಬ್ಬು ಕಟಾವು ಮಾಡುವ ಗ್ಯಾಂಗ್‌ ನೀಡುತ್ತಿದ್ದಾರೆ. ಅದನ್ನೇ ಕಾರ್ಖಾನೆ ಸಿಬ್ಬಂದಿ ಸಹ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ,” ಎಂದು ಖಂಡಿಸಿ ರೈತರು ಪ್ರತಿಭಟಿಸಿದರು. ”ಕಾರ್ಖಾನೆ ಮಂಡಳಿ ಹಾಗೂ ಸಿಬ್ಬಂದಿ ರೈತರಿಗೆ ಕಟಾವು ಗ್ಯಾಂಗ್‌ ಬಗ್ಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಹೀಗಾದರೆ ರೈತರ ಗತಿ ಏನು ? ಮೊದಲೇ ಅನೇಕ ಕಾರ್ಖಾನೆಗಳು ಹಿಂದಿನ ಕಬ್ಬಿನ ಬಾಕಿ ಬಿಲ್‌ ಸರಿಯಾಗಿ ನೀಡಿಲ್ಲ. ಇಂತಹ ಸಂದರ್ಭದಲ್ಲಿ ಕಬ್ಬು ಕಟಾವು ಮಾಡುವ ವೇಳೆಯಲ್ಲಿ ತಾರತಮ್ಯ ಮಾಡುವುದು ಯಾವ ನ್ಯಾಯ?,” ಎಂದು ಹರಿಹಾಯ್ದರು. ಬಸವರಾಜು, ಶಂಕರ ಸುಣಗಾರ, ಉದಯ ಮಡಿವಾಳ, ಬಾಬು ಸಕ್ರೆನ್ನವರ, ಸಂಬಣ್ಣವರ, ಗೋಣಿ, ಸತೀಶ ಕಾಮಕರ್‌, ವಿನಾಯಕ ಅತ್ತಾರ ಮತ್ತಿತರರು ಇದ್ದರು.

:

LEAVE A REPLY

Please enter your comment!
Please enter your name here