ಪ್ರಧಾನಿ ನರೇಂದ್ರ ಮೋದಿ ತವರು ರಾಜ್ಯ ಗುಜರಾತ್​ನಲ್ಲಿ ಕಾರ್ಯಕಾರಿಣಿ ನಡೆಸಿರುವ ಕಾಂಗ್ರೆಸ್, ಲೋಕಸಭಾ ಚುನಾವಣೆಯ ರಣಕಹಳೆ ಊದಿದೆ.

‘ಗೋಡ್ಸೆಯ ಹಿಂಸಾವಾದ ಹಾಗೂ ಗಾಂಧೀಜಿಯ ಅಹಿಂಸೆಗೆ ಗುಜರಾತ್ ಸಾಕ್ಷಿಯಾಗಿದೆ. ಇದರಲ್ಲಿ ಯಾವ ಆಯ್ಕೆ ಮಾಡಬೇಕು ಎನ್ನುವುದು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮತದಾರರು ನಿರ್ಧರಿಸಬೇಕಿದೆ’ ಎಂದು ರಾಹುಲ್ ಗಾಂಧಿ ಕರೆ ನೀಡಿದ್ದಾರೆ.

ದಂಡಿ ಉಪ್ಪಿನ ಸತ್ಯಾಗ್ರಹದ 89ನೇ ವರ್ಷಾಚರಣೆ ಸಂದರ್ಭದಲ್ಲಿ ಹಾಗೂ 58 ವರ್ಷಗಳ ಬಳಿಕ ಗುಜರಾತ್​ನ ಅಹಮದಾಬಾದ್​ನಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯಕಾರಿಣಿ ನಡೆದಿದೆ. ಕಾಂಗ್ರೆಸ್ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸುವ ನಿಟ್ಟಿನಲ್ಲಿ ಮೋದಿ ತವರೂರಿನಲ್ಲೇ ಕಾರ್ಯಕಾರಿಣಿ ಆಯೋಜಿಸಲಾಗಿತ್ತು. ಕಾರ್ಯಕಾರಿಣಿ ಬಳಿಕ ಗಾಂಧಿನಗರದಲ್ಲಿ ಬೃಹತ್ ಜನಸಂಕಲ್ಪ ಯಾತ್ರೆ ಆಯೋಜಿಸಲಾಗಿತ್ತು.

ಪಟೇಲ್ ನೆನಪಿಸಿಕೊಂಡ ಕಾಂಗ್ರೆಸ್: ಸರ್ದಾರ್ ವಲ್ಲಭಭಾಯ್ ಪಟೇಲ್ ಅವರನ್ನು ಕಾಂಗ್ರೆಸ್ ನಿರ್ಲಕ್ಷಿಸಿದೆ ಎಂದು ಬಿಜೆಪಿ ಆರೋಪಿ ಸಿತ್ತು. ಆದರೆ ಮಂಗಳವಾರ ನಡೆದ ಕಾರ್ಯಕಾರಣಿ ಉದ್ದಕ್ಕೂ ಪಟೇಲರ ಸ್ಮರಣೆ ಮೂಲಕ ಗುಜರಾತ್​ನಲ್ಲಿ ಪಟೇಲ್ ಸಮುದಾಯದ ಮತಗಳನ್ನು ಸೆಳೆಯುವ ತಂತ್ರಕ್ಕೆ ಕಾಂಗ್ರೆಸ್ ಮುಂದಾಗಿದೆ.

ಹಾರ್ದಿಕ್ ಸೇರ್ಪಡೆ: ಪಟೇಲ್ ಸಮುದಾಯದ ಮೀಸಲು ಹೋರಾಟದಲ್ಲಿ ಮುನ್ನೆಲೆಗೆ ಬಂದಿದ್ದ ಹಾರ್ದಿಕ್ ಪಟೇಲ್, ಮಂಗಳವಾರ ಅಧಿಕೃತವಾಗಿ ಕಾಂಗ್ರೆಸ್ ಸೇರಿದ್ದಾರೆ. ಕಳೆದ ವಿಧಾನ ಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಪರ ನಿಂತಿದ್ದ ಅವರು, ಈ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆಯಿದೆ.

ಕನಿಷ್ಠ ಮೂಲ ಆದಾಯಕ್ಕೆ ಸಮ್ಮತಿ?

ಕನಿಷ್ಠ ಮೂಲ ಆದಾಯ ಯೋಜನೆ ಕುರಿತು ಕಾರ್ಯ ಕಾರಣಿಯಲ್ಲಿ ಚರ್ಚೆಯಾಗಿದೆ. ಚುನಾವಣೆ ಪ್ರಣಾಳಿಕೆಯಲ್ಲಿ ಇದನ್ನು ಪ್ರಸ್ತಾಪಿಸಲು ಬಹುತೇಕ ನಾಯಕರು ಸಮ್ಮತಿಸಿದ್ದಾರೆ ಎನ್ನಲಾಗಿದೆ. ಇದೇ ವಿಚಾರ ಮುಂದಿಟ್ಟುಕೊಂಡು ಕಾಂಗ್ರೆಸ್ ಅಖಾಡಕ್ಕಿಳಿಯುವ ಸಾಧ್ಯತೆಯಿದೆ.

ಪ್ರಿಯಾಂಕಾ ಮೊದಲ ರ‍್ಯಾಲಿ

ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾದ ಬಳಿಕ ಮೊದಲ ಸಾರ್ವಜನಿಕ ರ್ಯಾಲಿಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಭಾಗಿಯಾಗಿದ್ದರು. ಮೊದಲ ಸಭೆ ಯಲ್ಲೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರಿಯಾಂಕಾ ಗಾಂಧಿ ಹೇಳಿದ್ದೇನು?

್ಝ014ರಲ್ಲಿ ಭರವಸೆ ನೀಡಿದ್ದ 2 ಕೋಟಿ ಉದ್ಯೋಗ, ಬಡವರ ಖಾತೆಗೆ 2 ಲಕ್ಷ ರೂ. ಅಚ್ಛೇ ದಿನ್ ಎಲ್ಲಿದೆ? ್ಝೇಶದ ಪ್ರತಿಯೊಂದು ಸಾಂವಿಧಾನಿಕ ಸಂಸ್ಥೆಗಳ ಮೇಲೆ ಪ್ರಹಾರ ನಡೆಯುತ್ತಿದೆ, ದೇಶಾದ್ಯಂತ ದ್ವೇಷದ ವಾತಾವರಣ ನಿರ್ಮಾಣ ಮಾಡಲಾಗುತ್ತಿದೆ. ್ಝೊಡ್ಡ ವಿಚಾರಗಳನ್ನು ಪ್ರಸ್ತಾಪಿಸಿ ಜನರ ದಿಕ್ಕು ತಪ್ಪಿಸುವ ಬದಲು ರೈತರು, ಯುವಕರು ಹಾಗೂ ಮಹಿಳೆಯರ ಅಭಿವೃದ್ಧಿ ಕುರಿತು ಚಿಂತಿಸುವ ಪಕ್ಷಕ್ಕೆ ಮತ ನೀಡ ಬೇಕಿದೆ. ್ಝೇಶದ ಜನರಿಗೆ ಮತದಾನದ ಅಸ್ತ್ರ ಸಿಕ್ಕಿದೆ, ಜವಾಬ್ದಾರಿ ಅರಿತು ಮತ ಚಲಾವಣೆ ಮಾಡಿ.

ಕಾರ್ಯಕಾರಿಣಿ ನಿರ್ಣಯ

*ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಇಡೀ ದೇಶ ಒಗ್ಗಟ್ಟಾಗಿದೆ. *ದೇಶದ ಜ್ವಲಂತ ಸಮಸ್ಯೆಗಳ ಮೇಲಿನ ಚರ್ಚೆ ತಪ್ಪಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರ ಭದ್ರತೆ ಕುರಿತು ಸಿನಿಕತನ ಪ್ರದರ್ಶಿಸುತ್ತಿರುವುದು ಖಂಡನಾರ್ಹ. * ನೋಟು ಅಮಾನ್ಯೀಕರಣ, ಜಿಎಸ್​ಟಿ ಸೇರಿ ಇತರ ಆರ್ಥಿಕ ಕ್ರಮಗಳಿಂದ ದೇಶದ ಅರ್ಥವ್ಯವಸ್ಥೆಯನ್ನು ಎನ್​ಡಿಎ ಸರ್ಕಾರ ಹಾಳುಗೆಡವಿದೆ. *ಬಿಜೆಪಿ ಸರ್ಕಾರದ ವೈಫಲ್ಯಗಳ ವಿರುದ್ಧದ ಹೋರಾಟಕ್ಕೆ ಎಲ್ಲ ಸಮಾನ ಮನಸ್ಕ ಪಕ್ಷಗಳು ಒಟ್ಟಾಗಬೇಕಿದೆ. * ಮೋದಿ ಸರ್ಕಾರದ ವೈಫಲ್ಯ ಮುಂದಿಟ್ಟುಕೊಂಡು ದೇಶದ ಜನತೆಯ ಬಳಿ ಮತಯಾಚನೆ ಮಾಡುವುದು. * ಬೂತ್​ವುಟ್ಟದ ಸಮಿತಿ ಹಾಗೂ ಸಂಘಟನೆ ಗಟ್ಟಿಯಾಗಿಸುವುದು.

LEAVE A REPLY

Please enter your comment!
Please enter your name here