ಬೆಳಗಾವಿ

ಡಿಸೆಂಬರ್ 06: ಡಿ ಗ್ರೂಪ್ ಖಾಯಂ ನೌಕರರಾಗಿ ತೃತೀಯ ಲಿಂಗದ ಮೋನಿಷಾ ಎಂಬುವವರಿಗೆ ವಿಧಾನ ಪರಿಷತ್ ಸಚಿವಾಲಯದಲ್ಲಿ ನೇಮಕ ಮಾಡಲಾಗಿದ್ದು, ಮೋನಿಷಾ ಕರ್ನಾಟಕದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಖಾಯಂ ಸರಕಾರಿ ಹುದ್ದೆ ಪಡೆದ ತೃತಿಯ ಲಿಂಗಿಯಾಗಿದ್ದಾರೆ. ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಬುಧವಾರ (ಡಿ.05) ನಡೆದ ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಈ ಹೇಳಿಕೆ ನೀಡಿದರು. 2016 ರಂದು ವಿಧಾನ ಸೌಧದಲ್ಲಿ ಖಾಲಿ ಇದ್ದ ಗ್ರೂಪ್ ‘ಡಿ’ ಹುದ್ದೆಗೆ ತೃತೀಯ ಲಿಂಗದ ಮೋನಿಷಾ ಅರ್ಜಿ ಹಾಕಿದ್ದರು. ಸರಕಾರದಿಂದ ತೃತೀಯ ಲಿಂಗದವರಿಗೆ ಯಾವುದೇ ಹುದ್ದೆಯಿಲ್ಲದ ಕಾರಣ ಮೋನಿಷಾ ಅರ್ಜಿಯನ್ನು ನಿರಾಕರಿಸಲಾಗಿತ್ತು.

ಆ ನಂತರ ಮೋನಿಷಾ ನ್ಯಾಯಾಲಯಕ್ಕೆ ಹೋಗಿದ್ದರಿಂದ, ನ್ಯಾಯಾಲಯದ ಸೂಚನೆ ಮೇರೆಗೆ ಸಭಾಪತಿ, ಮುಖ್ಯಮಂತ್ರಿಗಳು ವಿಶೇಷ ಆಸಕ್ತಿ ವಹಿಸಿ ಖಾಯಂ ನೇಮಕ ಮಾಡಿಕೊಂಡಿದ್ದಾರೆ.

ತೃತೀಯ ಲಿಂಗದವರು ಇತ್ತೀಚಿನ ದಿನಗಳಲ್ಲಿ ರಾಜಕೀಯ, ಸಾಹಿತ್ಯ, ಸಿನಿಮಾ, ಮಾಡೆಲಿಂಗ್ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಕಾಣಿಸಿಕೊಂಡು ಸಾಧನೆ ಮಾಡುತ್ತಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

LEAVE A REPLY

Please enter your comment!
Please enter your name here