ನವದೆಹಲಿ: ಕರ್ನಾಟಕ ದೋಸ್ತಿ ಸರ್ಕಾರದ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಜೆಡಿಎಸ್​ ಸೇರಿಕೊಂಡು ಸರ್ಕಾರ ರಚಿಸಿದವು. ಆದ್ರೆ ಅಲ್ಲಿನ ಮುಖ್ಯಮಂತ್ರಿಯನ್ನ, ಕಾಂಗ್ರೆಸ್ ಪಕ್ಷವು ಕ್ಲರ್ಕ್​ ರೀತಿ ನಡೆಸಿಕೊಳ್ಳುತ್ತಿದೆ ಎಂದು ಲೇವಡಿ ಮಾಡಿದರು.

ಇಲ್ಲಿನ ರಾಮಲೀಲಾ ಮೈದಾನದಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ನಡೆಯುತ್ತಿದ್ದು, ಕಾರ್ಯಕರ್ತರನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತಾ ಕರ್ನಾಟಕದ ಮೈತ್ರಿ ಸರ್ಕಾರ ರಚನೆಯ ಹಿಂದಿನ ಉದ್ದೇಶವನ್ನ ನಾವು ಅರ್ಥ ಮಾಡಿಕೊಳ್ಳಬೇಕಿದೆ. ಇವರೆಲ್ಲರು ಸೇರಿ ಒಂದು ಮಜಬೂರ ಸರ್ಕಾರ (ಅಸಹಾಯಕ ಸರ್ಕಾರ) ರಚಿಸಲು ಸಜ್ಜಾಗುತ್ತಿದ್ದಾರೆ. ಅವರಿಗೆ ಮಜಬೂತ್ (ಮಜಬೂತು)​ ಸರ್ಕಾರ ಬೇಕಿಲ್ಲ. ಆದ್ರೆ ದೇಶದ ಜನ ಶಕ್ತಿಶಾಲಿ ಸರ್ಕಾರವನ್ನು ಬಯಸುತ್ತಿದ್ದಾರೆ. ಸಬ್​ ಕಾ ಸಾಥ್ -ಸಬ್​ ಕಾ ವಿಕಾಸ್​ಗಾಗಿ ಶಕ್ತಿಶಾಲಿ ಸರ್ಕಾರ ಬೇಕೆನ್ನುತ್ತಿದ್ದಾರೆ ಎಂದು ಹೇಳಿದರು.

Summary
ಕರ್ನಾಟಕದ ಮುಖ್ಯಮಂತ್ರಿಯನ್ನ, ಕಾಂಗ್ರೆಸ್ ಕ್ಲರ್ಕ್​ ರೀತಿ ನಡೆಸಿಕೊಳ್ಳುತ್ತಿದೆ’ -ನರೇಂದ್ರ ಮೋದಿ
Article Name
ಕರ್ನಾಟಕದ ಮುಖ್ಯಮಂತ್ರಿಯನ್ನ, ಕಾಂಗ್ರೆಸ್ ಕ್ಲರ್ಕ್​ ರೀತಿ ನಡೆಸಿಕೊಳ್ಳುತ್ತಿದೆ’ -ನರೇಂದ್ರ ಮೋದಿ

LEAVE A REPLY

Please enter your comment!
Please enter your name here