ಕಾಡುಗೊಲ್ಲರು ಬಲಿಷ್ಠವಾಗಿ ಸಂಘಟಿತರಾಗಿ ಮುಂದೆ ಬಂದು ಮೀಸಲಾತಿ ಪಡೆಯಬೇಕು. ಮುಗ್ಧ ಕಾಡುಗೊಲ್ಲರನ್ನ ದಾರಿ ತಪ್ಪಿಸುವ ಕೆಲಸ ಊರುಗೊಲ್ಲರು ಮಾಡುತ್ತಿದ್ದಾರೆ ಎಂದು ರಾಜ್ಯ ಕಾಡುಗೊಲ್ಲ ಕ್ಷೇಮಾಭಿವೃದ್ದಿ ಸಂಘದ ಪ್ರಧಾನ ಕಾರ್ಯದರ್ಶಿ ಸಿ. ಶಿವು ಯಾದವ್ ಹೇಳಿದರು.

ಇಂದು ಹೊಸದುರ್ಗ ತಾಲ್ಲೂಕಿನ ಮಡದಕೆರೆ ವ್ಯಾಪ್ತಿಯ ಕೆಂಕೆರೆ ಭೂತಪ್ಪ ದೇವಸ್ಥಾನ ಆವರಣದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಕಾಡುಗೊಲ್ಲರ ಸಮ್ಮೇಳನದ ಪೂರ್ವಭಾವಿ ಸಭೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಿವು ಯಾದವ್ ಊರುಗೊಲ್ಲರ ವಿರುದ್ಧ ವಾಗ್ದಾಳಿ ನಡೆಸಿದರು.

ನಂತರ ಮಾಧ್ಯಮದವರ ಜೊತೆ ಮಾತನಾಡಿದ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ರಾಜ್ಯ ಜೆಡಿಎಸ್ ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ಮೀನಾಕ್ಷಿ ನಂದೀಶ್ ರಾಜ್ಯದಲ್ಲಿ ಕಾಡುಗೊಲ್ಲರು ಆರ್ಥಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕ ವಾಗಿ ಹಿಂದುಳಿದಿದ್ದು ಸರ್ಕಾರ ಸಮುದಾಯದ ಕಡೆ ಗಮನ ಹರಿಸಿ ಮೀಸಲಾತಿ ಸೌಲಭ್ಯ ಕಲ್ಪಿಸಲು ಕ್ರಮ ಜರುಗಿಸಬೇಕು. ಹಾಗೇಯೇ ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರ ಕಾಡುಗೊಲ್ಲರಿಗೆ ಕಾಡುಗೊಲ್ಲರ ಪ್ರಾಧಿಕಾರ ನೀಡಬೇಕು ಎಂದು ಸರ್ಕಾರವನ್ನು ಓತ್ತಾಯಿಸಿದರು . ಆದರೆ ಊರುಗೊಲ್ಲರು ಸರ್ಕಾರಕ್ಕೆ ಕಾಡುಗೊಲ್ಲ ಜನಾಂಗದ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆ. ನಮ್ಮ ಕಾಡುಗೊಲ್ಲರ ಅಸ್ತಿತ್ವಕ್ಕೆ ದಕ್ಕೆ ಬಂದರೆ ಸಮುದಾಯಕ್ಕೆ ಪ್ರಾಣ ಕೊಡಲು ಸಿದ್ದ ಎಂದು ಮೀನಾಕ್ಷಿ ನಂದೀಶ್ ತಿಳಿಸಿದರು. ರಾಜ್ಯದಲ್ಲಿ ಕಾಡುಗೊಲ್ಲರನ್ನ
ಗುರುತಿಸಿದ ವ್ಯಕ್ತಿ ಎಂದರೆ ಅದು ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ನವರು ಎಂದರು. ಮುಂದಿನ ದಿನಗಳಲ್ಲಿ ಎಲ್ಲರು ಓಗಟ್ಟು ಪ್ರದರ್ಶಿಸಿುವ ಮೂಲಕ ಹೋರಾಟ ಮಾಡೋಣ ಎಂದು ಹೇಳಿದರು .

ಕಾರ್ಯಕ್ರಮದಲ್ಲಿ ಡಾ. ಪಾಪಣ್ಣ, ಯತೀಶ್ , ರಾಜ್ ಕುಮಾರ್, ಕೂನಿಕೆರೆ ರಾಮಣ್ಣ, ರಮೇಶ್ , ರಾಜಣ್ಣ , ಜಯಣ್ಣ ಸೇರಿದಂತೆ ನೂರಾರು ಕಾಡುಗೊಲ್ಲ ಮುಖಂಡರು ಭಾಗವಹಿಸಿದ್ದರು.

ಚಿದಾನಂದ್ ಮಸ್ಕಲ್
ನ್ಯೂಸ್ ವರದಿಗಾರರು.

LEAVE A REPLY

Please enter your comment!
Please enter your name here