ಮುಳಗುಂದ: ನ್ಯಾಯಾಲಯದ ತಡೆಯಾಜ್ಞೆ ಇದ್ದರೂ ರಸ್ತೆ ಕಾಮಗಾರಿಗೆ ಮುಂದಾಗಿದ್ದ ಪಿಡಬ್ಲೂಡಿ ಇಲಾಖೆ ವಿರುದ್ದ ರೈತರು ಆಕ್ರೋಶ ವ್ಯಕ್ತಪಡಿಸಿ ಕಾಮಗಾರಿ ಸ್ಥಗಿತಗೊಳಿಸಿದ ಘಟನೆ ಭಾನುವಾರ ನಡೆದಿದೆ.

ಗದಗ ಶಿರಹಟ್ಟಿ ಮುಖ್ಯರಸ್ತೆಯ ಶಿರಹಟ್ಟಿ ಮಾರ್ಗವಾಗಿ ಗದಗ ತಲುಪುತ್ತದೆ. ಇದರ ಮಧ್ಯದಲ್ಲಿ ಯಲಿಶಿರೂರ ಗ್ರಾಮದ ಹತ್ತಿರ ರೈತರಿಗೆ ಸೇರಿದ ಭೂಮಿಯಲ್ಲಿ ಎರಡುವರೆ ಕಿಮೀ ರಸ್ತೆ ಹಾಯ್ದು ಹೋಗಿದ್ದು 2007 ರಲ್ಲಿ ರಸ್ತೆ ಭೂ ಸುಧಾರಣೆ ಕಾಯ್ದೆ ಅಡಿ ಭೂಮಿಯನ್ನು ಸ್ವಾಧಿನ ಮಾಡಿಕೊಳ್ಳದೆ ಕಾಮಗಾರಿಗೆ ಲೋಕೋಪಯೋಗಿ ಇಲಾಖೆ ಮುಂದಾಗಿತ್ತು. ಇದನ್ನು ಪ್ರಶ್ನಿಸಿದ 28 ಜನ ರೈತರು ತಮಗೆ ಪರಿಹಾರ ಹಣ ಕೊಡಿಸಬೇಕು ಎಂದು ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಅಲ್ಲಿಂದ ಈಗೂ ಸಹ ನ್ಯಾಯಾಲಯದಲ್ಲಿ ದಾವೆ ಇತ್ಯರ್ಥವಾಗಿಲ್ಲ. ಪಿಡಬ್ಲೂಡಿ ಅವರು ಇದನ್ನು ಪರಿಗಣಿಸದೇ ರಸ್ತೆ ಅಕ್ಕಪಕ್ಕದಲ್ಲಿ ಜಂಗಲ್‌ ಕಟಿಂಗ್‌ ಅಗಲಿಕರಣ ಮಾಡಲು ಮುಂದಾಗಿದ್ದರು. ಇದನ್ನು ಗಮನಿಸಿದ ರೈತರು ಆಕ್ರೋಶ ವ್ಯಕ್ತಪಡಿಸಿ ನ್ಯಾಯಾಲಯದಲ್ಲಿ ದಾವೆ ಇರುವಾಗ ಹೇಗೆ ಕೆಲಸ ಮಾಡುತ್ತಿದ್ದಿರಿ ಎಂದು ಗುತ್ತಿಗೆದಾರನಿಗೆ ತರಾಟೆಗೆ ತೆಗೆದುಕೊಂಡರು. ಬಳಿಕ ಕೆಲಸ ಸ್ಥಗಿತಗೊಳಿಸಲಾಯಿತು.

ರೈತರಾದ ಸಿ.ಎಸ್‌.ಹೊನ್ನಪ್ಪನವರ, ಬಿ.ಬಿ.ಹೊನ್ನಪ್ಪನವರ, ಪರಸಪ್ಪ ಹೂಗಾರ, ಎಸ್‌.ಎಂ.ಕುಂಟಪ್ಪನವರ, ಕರಬಸಪ್ಪ ಹೊನ್ನಪ್ಪನವರ, ಬಿ.ಎಸ್‌.ಹೊನ್ನಪ್ಪನವರ ಮೊದಲಾದವರು ಇದ್ದರು.

ಪರಿಹಾರ ನೀಡಿದ ನಂತರ ಕಾಮಗಾರಿ: 

ಈ ಬಗ್ಗೆ ಗದಗ ಲೋಕೋಪಯೋಗಿ ಸಹಾಯ ಅಭಿಯಂತರ ದೇವರಾಜ ಸ್ಪಷ್ಟನೆ ನೀಡಿದ್ದು ರೈತರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯದ ತಡೆಯಾಜ್ಞೆ ಇರುವ ರಸ್ತೆ ಬಿಟ್ಟು ಕಾಮಗಾರಿ ನಡೆಸುವಂತೆ ಈಗಾಲೇ ಗುತ್ತಿಗೆದಾರನಿಗೆ ತಿಳಿಸಲಾಗಿದೆ. ರೈತರಿಗೆ ಭೂ ಸ್ವಾಧಿನದ ಪರಿಹಾರ ದೊರೆತ ಬಳಿಕ ಕಾಮಗಾರಿ ನಡೆಸಲಾಗುತ್ತದೆ ಎಂದರು.

Summary
ಕಾಮಗಾರಿ ಸ್ಥಗಿತಗೊಳಿಸಿದ ಘಟನೆ ಭಾನುವಾರ ನಡೆದಿದೆ.
Article Name
ಕಾಮಗಾರಿ ಸ್ಥಗಿತಗೊಳಿಸಿದ ಘಟನೆ ಭಾನುವಾರ ನಡೆದಿದೆ.
Description
ಗದಗ ಶಿರಹಟ್ಟಿ ಮುಖ್ಯರಸ್ತೆಯ ಶಿರಹಟ್ಟಿ ಮಾರ್ಗವಾಗಿ ಗದಗ ತಲುಪುತ್ತದೆ. ಇದರ ಮಧ್ಯದಲ್ಲಿ ಯಲಿಶಿರೂರ ಗ್ರಾಮದ ಹತ್ತಿರ ರೈತರಿಗೆ ಸೇರಿದ ಭೂಮಿಯಲ್ಲಿ ಎರಡುವರೆ ಕಿಮೀ ರಸ್ತೆ ಹಾಯ್ದು ಹೋಗಿದ್ದು 2007 ರಲ್ಲಿ ರಸ್ತೆ ಭೂ ಸುಧಾರಣೆ ಕಾಯ್ದೆ ಅಡಿ ಭೂಮಿಯನ್ನು ಸ್ವಾಧಿನ ಮಾಡಿಕೊಳ್ಳದೆ ಕಾಮಗಾರಿಗೆ ಲೋಕೋಪಯೋಗಿ ಇಲಾಖೆ ಮುಂದಾಗಿತ್ತು. ಇದನ್ನು ಪ್ರಶ್ನಿಸಿದ 28 ಜನ ರೈತರು ತಮಗೆ ಪರಿಹಾರ ಹಣ ಕೊಡಿಸಬೇಕು ಎಂದು ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಅಲ್ಲಿಂದ ಈಗೂ ಸಹ ನ್ಯಾಯಾಲಯದಲ್ಲಿ ದಾವೆ ಇತ್ಯರ್ಥವಾಗಿಲ್ಲ. ಪಿಡಬ್ಲೂಡಿ ಅವರು ಇದನ್ನು ಪರಿಗಣಿಸದೇ ರಸ್ತೆ ಅಕ್ಕಪಕ್ಕದಲ್ಲಿ ಜಂಗಲ್‌ ಕಟಿಂಗ್‌ ಅಗಲಿಕರಣ ಮಾಡಲು ಮುಂದಾಗಿದ್ದರು. ಇದನ್ನು ಗಮನಿಸಿದ ರೈತರು ಆಕ್ರೋಶ ವ್ಯಕ್ತಪಡಿಸಿ ನ್ಯಾಯಾಲಯದಲ್ಲಿ ದಾವೆ ಇರುವಾಗ ಹೇಗೆ ಕೆಲಸ ಮಾಡುತ್ತಿದ್ದಿರಿ ಎಂದು ಗುತ್ತಿಗೆದಾರನಿಗೆ ತರಾಟೆಗೆ ತೆಗೆದುಕೊಂಡರು. ಬಳಿಕ ಕೆಲಸ ಸ್ಥಗಿತಗೊಳಿಸಲಾಯಿತು.  ರೈತರಾದ ಸಿ.ಎಸ್‌.ಹೊನ್ನಪ್ಪನವರ, ಬಿ.ಬಿ.ಹೊನ್ನಪ್ಪನವರ, ಪರಸಪ್ಪ ಹೂಗಾರ, ಎಸ್‌.ಎಂ.ಕುಂಟಪ್ಪನವರ, ಕರಬಸಪ್ಪ ಹೊನ್ನಪ್ಪನವರ, ಬಿ.ಎಸ್‌.ಹೊನ್ನಪ್ಪನವರ ಮೊದಲಾದವರು ಇದ್ದರು. 

LEAVE A REPLY

Please enter your comment!
Please enter your name here