ಕಾರ್ಕಳ: ರಾಜಕೀಯ ಮಾತ್ರವಲ್ಲ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ಆಡಳಿತಾತ್ಮಕ ಕ್ಷೇತ್ರದಲ್ಲೂ ಪ್ರಾತಿನಿಧ್ಯ ಸಿಕ್ಕಾಗ ಮಾತ್ರ ಸಮುದಾಯ ಅಭಿವೃದ್ಧಿ ಹೊಂದಲು ಸಾಧ್ಯ. ಸಮ್ಮೇಳನದ ಮೂಲಕ ಸಮುದಾಯದ ಜನತೆ ಹೊಸ ಸಂದೇಶ ನೀಡುವ ಅಗತ್ಯ ಇದೆ ಎಂದು ಶಾಸಕ ಹಾಗೂ ವಿಧಾನಸಭಾ ಪ್ರತಿಪಕ್ಷ ಮುಖ್ಯ ಸಚೇತಕ ವಿ.ಸುನೀಲ್‌ಕುಮಾರ್ ಹೇಳಿದರು.

ಪೆರ್ವಾಜೆ ನಾರಾಯಣ ಗುರು ಸಭಾಭವನದಲ್ಲಿ ಬಿಲ್ಲವ ಸಮಾಜ ಸೇವಾ ಸಂಘ ಕಾರ್ಕಳ ವತಿಯಿಂದ ಆಯೋಜಿಸಲಾಗಿದ್ದ ಕಾರ್ಕಳ ತಾಲೂಕು ಬಿಲ್ಲವ ಸಮ್ಮೇಳನ, ವಾಣಿಜ್ಯ ಸಂಕೀರ್ಣ ಮತ್ತು ನೂತನ ಸಭಾಂಗಣದ ಉದ್ಘಾಟನಾ ಕಾರ್ಯಕ್ರಮದಲ್ಲಿ ನೂತನ ಸಭಾಂಗಣ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯದಲ್ಲಿ ನಾಲ್ಕರಿಂದ ಐದನೇ ಸ್ಥಾನದಲ್ಲಿರುವ ಬಿಲ್ಲವ ಸಮುದಾಯ ಸಂಘಟಿತರಾಗಿ, ನಿರ್ದಿಷ್ಟ ಉದ್ದೇಶವನ್ನು ಸರ್ಕಾರದ ಮುಂದಿಡುವ ಮೂಲಕ ಸಮುದಾಯದ ಅಭಿವೃದ್ಧಿಗೆ ಜತೆಯಾಗಿ ಶ್ರಮಿಸಬೇಕು. ಸಂಘಟನೆಯಿಂದ ನಮ್ಮ ಸಮುದಾಯದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಸಿಗಬೇಕು ಎಂದರು.

ಸಚಿವ ವಿನಯ ಕುಮಾರ್ ಸೊರಕೆ, ಸಮಾಜದ ಏಳಿಗೆಗೆ ಸಂಘಟನೆ ಅನಿವಾರ್ಯ. ನಮ್ಮ ಸಮುದಾಯವನ್ನು ಪ್ರವರ್ಗ-2ರಿಂದ ಪ್ರವರ್ಗ-1ಕ್ಕೆ ಸೇರ್ಪಡೆಗೊಳಿಸುವ ಹಾಗೂ ನಾರಾಯಣ ಗುರು ನಿಗಮ ಸ್ಥಾಪಿಸಿ ಸಮುದಾಯದ ಮಹಿಳೆಯರಿಗೆ ಬಡ್ಡಿ ರಹಿತ ಸಾಲ ನೀಡುವ ಬಗ್ಗೆ ಸರ್ಕಾರದಿಂದ ಪ್ರಯತ್ನಿಸುವ ಕೆಲಸ ಮಾಡೋಣ ಎಂದರು.

ಹೊಸ್ಮಾರು ಕ್ಷೇತ್ರ ಬಲ್ಯೊಟ್ಟುನ ವಿಖ್ಯಾತಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.
ಕಾರ್ಕಳ ಬಿಲ್ಲವ ಸಂಘ ಅಧ್ಯಕ್ಷ ಡಾ.ಡಿ.ಆರ್.ರಾಜು ಅಧ್ಯಕ್ಷತೆ ವಹಿಸಿದ್ದರು. ಮಹಾರಾಷ್ಟ್ರ ಲೋನಾವಾಲ ಪುರಸಭೆ ಉಪಾಧ್ಯಕ್ಷ ಹಾಗೂ ಉದ್ಯಮಿ ಶ್ರೀಧರ ಎಸ್. ಪೂಜಾರಿ ಭೋಜನ ಶಾಲೆ ಉದ್ಘಾಟಿಸಿದರು. ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ರಶ್ಮಿ ಚಾರಿಟೆಬಲ್ ಟ್ರಸ್ಟ್ ಉದ್ಘಾಟಿಸಿದರು.
ಬೆಂಗಳೂರು ಬಿಲ್ಲವ ಅಸೋಸಿಯೇಷನ್ ಅಧ್ಯಕ್ಷ ವೇದ ಕುಮಾರ್, ರಶ್ಮಿ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಸಾವಿತ್ರಿ ಡಿ.ಆರ್.ರಾಜು, ಯಕ್ಷಗಾನ ಕಲಾವಿದ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೀತಾರಾಮ್ ಕಟೀಲ್, ಪ್ರಮುಖರಾದ ಪ್ರಭಾಕರ ಬಂಗೇರ, ಚಂದ್ರಹಾಸ ಸುವರ್ಣ, ಪ್ರದೀಪ್ ಕೋಟ್ಯಾನ್, ಸುಭಿತ್ ಕುಮಾರ್ ಎನ್., ಪ್ರವೀಣ್ ಸುವರ್ಣ, ನವೀನ್ ಸುವರ್ಣ, ಸಂದೇಶ್ ಕೋಟ್ಯಾನ್, ನಾಗಮ್ಮ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಟ್ರಸ್ಟ್‌ಗೆ ಚಾಲನೆ, ಸನ್ಮಾನ: ಸಭಾ ಕಾರ್ಯಕ್ರಮದಲ್ಲಿ ರಶ್ಮಿ ಚಾರಿಟೆಬಲ್ ಟ್ರಸ್ಟ್‌ಗೆ ಚಾಲನೆ ನೀಡಲಾಯಿತು. ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು ಹಾಗೂ ಗರಡಿಗಳಲ್ಲಿ ಪೂಜೆ ಸಲ್ಲಿಸುತ್ತಿರುವ ಹಿರಿಯರಾದ ಅಂಡಾರು ಸಂಜೀವ ಪೂಜಾರಿ, ತೆಳ್ಳಾರು ತಬುರ ಪೂಜಾರಿ, ಹಿರ್ಗಾನ ಲೋಕು ಪೂಜಾರಿ, ಹೆರ್ಮುಂಡೆ ಎಚ್.ಕೆ.ಕರಿಯ ಪೂಜಾರಿ, ಮುನಿಯಾಲು ರಾಜು ಪೂಜಾರಿ, ಕೆರುವಾಸೆಯ ಸಾಧು ಪೂಜಾರಿ ಅವರನ್ನು ಸನ್ಮಾನಿಸಲಾಯಿತು.
ಡಿ.ಆರ್.ರಾಜು ಸ್ವಾಗತಿಸಿ, ರಮಾನಂದ ಸಾಲ್ಯಾನ್ ಸಿಸಿಹಿತ್ಲು ನಿರೂಪಿಸಿದರು. ನಾಗಮ್ಮ ವಂದಿಸಿದರು.

Summary
ಕಾರ್ಕಳ : ಸಮುದಾಯಕ್ಕೆ ಹೊಸ ಸಂದೇಶ !
Article Name
ಕಾರ್ಕಳ : ಸಮುದಾಯಕ್ಕೆ ಹೊಸ ಸಂದೇಶ !
Description
ನಮ್ಮ ಸಮುದಾಯವನ್ನು ಪ್ರವರ್ಗ-2ರಿಂದ ಪ್ರವರ್ಗ-1ಕ್ಕೆ ಸೇರ್ಪಡೆಗೊಳಿಸುವ ಹಾಗೂ ನಾರಾಯಣ ಗುರು ನಿಗಮ ಸ್ಥಾಪಿಸಿ ಸಮುದಾಯದ ಮಹಿಳೆಯರಿಗೆ ಬಡ್ಡಿ ರಹಿತ ಸಾಲ ನೀಡುವ ಬಗ್ಗೆ ಸರ್ಕಾರದಿಂದ ಪ್ರಯತ್ನಿಸುವ ಕೆಲಸ ಮಾಡೋಣ ಎಂದರು.

LEAVE A REPLY

Please enter your comment!
Please enter your name here