ಹಾವೇರಿ: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಖಾನೆಗಳ ಸಂಭವನೀಯ ರಾಸಾಯನಿಕ ವಿಪತ್ತುಗಳ ತಡೆಗೆ ವಿಶೇಷ ಕಾಳಜಿ, ತರಬೇತಿ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕೆಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಕಾರ್ಖಾನೆಗಳ ಅಧಿಕಾರಿಗಳಿಗೆ ತಿಳಿಸಿದರು. 

ಹಾವೇರಿಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಅಪಾಯಕಾರಿ ಕಾರ್ಯಾಚರಣೆ ಹೊಂದಿರುವ ಕಾರ್ಖಾನೆಗಳ ಜಿಲ್ಲಾ ಬಿಕ್ಕಟ್ಟು ಪರಿಹಾರ ಸಮಿತಿ ಸಭೆಯ ಅಧ್ಯಕ್ಷ ತೆ ವಹಿಸಿ ಅವರು ಮಾತನಾಡಿದರು. 

ಜಿಲ್ಲೆಯಲ್ಲಿ ಯಾವುದೇ ರೀತಿಯ ವಿಪತ್ತು ಸಂಭವಿಸಬಾರದು. ಅಪಾಯಕಾರಿ ರಾಸಾಯನಿಕ ಪದಾರ್ಥಗಳ ಬಳಕೆಯಿಂದ ಅವಘಡಗಳು ಜರುಗದಂತೆ ಮುನ್ನೆಚ್ಚರಿಕೆ ಕೈಗೊಳ್ಳಬೇಕು. ಸಂಭವನೀಯ ಅವಘಡ ತಡೆಗೆ ಕೈಗೊಳ್ಳಬೇಕಾದ ತುರ್ತು ಕ್ರಮಗಳ ಕುರಿತಂತೆ ಸೂಕ್ತ ತರಬೇತಿ, ಉಪಕರಣಗಳು ಸೇರಿದಂತೆ ವಿಪತ್ತು ಯೋಜನೆ ರೂಪಿಸಿಕೊಂಡು ಸದಾ ಸನ್ನದ್ಧರಾಗುವಂತೆ ಕಾರ್ಖಾನೆಗಳ ಅಧಿಕಾರಿಗಳಿಗೆ ತಿಳಿಸಿದರು. 

ಅತೀ ಹೆಚ್ಚು ಪರಿಣಾಮ ಬೀರುವ ರಾಸಾಯನಿಕ ಬಳಕೆಯ ಕಾರ್ಖಾನೆಗಳನ್ನು ಗುರುತಿಸಿ ಕಾಲಕಾಲಕ್ಕೆ ತಪಾಸಣೆ ನಡೆಸಬೇಕು. ಅಪಘಾತ ತಡೆಯುವ ನಿಟ್ಟಿನಲ್ಲಿ ಕೈಗೊಂಡಿರುವ ಸುರಕ್ಷ ತಾ ಕ್ರಮಗಳ ಕುರಿತಂತೆ ಪರಿಶೀಲನೆ, ವಿಪತ್ತು ತಡೆಯ ಪಡೆಯ ಮಾನವ ಸಂಪನ್ಮೂಲ, ಉಪಕರಣಗಳ ಸಿದ್ಧತೆ ಹಾಗೂ ಅಪಾಯಕಾರಿ ಸ್ಥಳದಲ್ಲಿ ಕೈಗೊಂಡಿರುವ ಸುರಕ್ಷ ತಾ ಕ್ರಮಗಳ ಕುರಿತಂತೆ ಕಾರ್ಖಾನೆಗಳು, ಬಾಯ್ಲರ್‌ಗಳು ಕೈಗಾರಿಕಾ ಸುರಕ್ಷ ತೆ ಮತ್ತು ಸ್ವಾಸ್ಥ್ಯ ಇಲಾಖೆ ಸಹಾಯಕ ನಿರ್ದೇಶಕಿ ಚಿನ್ಮು ತೋರ್ಗಲ್‌ ಹಾಗೂ ಪರಿಸರ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಗ್ರಾಸೀಂ ಕಂಪನಿಯಲ್ಲಿ ಬಳಕೆ ಮಾಡುತ್ತಿರುವ ಅಪಾಯಕಾರಿ ಕೆಮಿಕಲ್‌ಗಳ ಸುರಕ್ಷ ತಾ ನಿರ್ವಹಣೆ ಕುರಿತಂತೆ ಗರಿಷ್ಠ ಎಚ್ಚರ ವಹಿಸಲು ಸೂಚನೆ ನೀಡಿದರು. ಕ್ಲೋರಿನ್‌ ದಾಸ್ತಾನು, ಕಾರ್ಬನ್‌ ಸಲ್ಪೇಟ್‌ಗಳ ದಾಸ್ತಾನು ಪ್ರಮಾಣ ಹಾಗೂ ನಿರ್ವಹಣೆಯನ್ನು ಮಾರ್ಗಸೂಚಿ ಅನುಸಾರ ಕೈಗೊಳ್ಳಬೇಕು. ಸುರಕ್ಷ ತಾ ನಿರ್ವಹಣೆಯ ಅಧಿಕಾರಿಗಳ ಆರೋಗ್ಯ ಹಾಗೂ ದಾಸ್ತಾನು ಸ್ಥಳದ ಸುರಕ್ಷ ತೆ ಕುರಿತಂತೆ ಎಲ್ಲ ಮುನ್ನೆಚ್ಚರಿಕೆ ಕೈಗೊಳ್ಳಬೇಕು ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ನಗರಸಭೆ ಪರಿಸರ ಅಧಿಕಾರಿಗಳು, ಕೃಷಿ ಇಲಾಖೆ ಜಂಟಿ ನಿರ್ದೇಶಕರು, ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿಗಳು ಹಾಗೂ ಗ್ರಾಸೀಂ ಕಾರ್ಖಾನೆಯ ಅಧಿಕಾರಿಗಳು ಒಳಗೊಂಡಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು. 

LEAVE A REPLY

Please enter your comment!
Please enter your name here