ಬೆಳಗಾವಿ
. ನ.10 : ಇಂದು ಟಿಪ್ಪು ಸುಲ್ತಾನ್ ಜಯಂತಿ ಹಿನ್ನೆಲೆ. ಬೆಳಗಾವಿಯ ಕುಮಾರ ಗಂಧರ್ವ ರಂಗ ಮಂದಿರಕ್ಕೆ ಬೀಗಿ ಭದ್ರತೆ.ಬೆಳಗ್ಗೆ 11 ಗಂಟೆಗೆ ಜಿಲ್ಲಾಡಳಿತದ ವೇದಿಕೆ ಕಾರ್ಯಕ್ರಮ ನಿಗದಿಯಾಗಿತ್ತು.ಕಾರ್ಯಕ್ರಮಕ್ಕೆ ಜನರಿಂದ, ಅಧಿಕಾರಿಗಳಿಂದ ನಿರಾಸಕ್ತಿ ಕಂಡು ಬಂದಿದೆ.

ಜನರು, ಅಧಿಕಾರಿಗಳು ಇಲ್ಲದ ಕಾರಣ ಕಾರ್ಯಕ್ರಮ ವಿಳಂಬವಾಗಿದೆ. ಇನ್ನು ಸರಕಾರ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ, ಕಾಂಗ್ರೆಸ್ ಶಾಸಕ ರಮೇಶ ಜಾರಕಿಹೊಳಿ ಸೇರಿ ಬಿಜೆಪಿ ಶಾಸಕರು, ಸಂಸದರು ಗೈರಾಗಿದ್ದರಿಂದ ಕುಮಾರ ಗಂಧರ್ವ ರಂಗ ಮಂದಿರ ಬೀಕೋ ಎನ್ನುತ್ತಿದೆ. ಅಹಿತಕರ ಘಟನೆ ನಡೆಯಬಾರದದೆಂದು ಪೊಲೀಸ್ ಇಲಾಖೆ ಬೆಳಗಾವಿ ಜಿಲ್ಲೆಯಾದ್ಯಂತ 144 ನಿಷೇದಾಜ್ಞೆ ಜಾರಿಗೊಳಿಸಿದೆ.

# ಆಹ್ವಾನ ಪತ್ರಿಕೆಯಲ್ಲಿ ಬೆಳಗಾವಿ ಜಿಲ್ಲಾ ಬಿಜೆಪಿ ನಾಯಕರ ಹೆಸರು
ಬೆಳಗಾವಿ: ಟಿಪ್ಪು ಜಯಂತಿ ಆಚರಣೆಯ ಆಮಂತ್ರಣ ಪತ್ರಿಕೆಯಲ್ಲಿ ಯಾವುದೇ ಕಾರಣಕ್ಕೂ ನನ್ನ ಹೆಸರನ್ನು ಬಳಸಬಾರದು ಎಂದು ಹೇಳಿದ್ದ ಕೇಂದ್ರ ಸಚಿವ ಅನಂತ್ ಕುಮಾರ ಹೆಗಡೆ ಅವರ ಸೂಚನೆಯಂತೆ ಬೆಳಗಾವಿ ಜಿಲ್ಲಾಡಳಿತ ಅವರ ಹೆಸರನ್ನು ಹಾಕಿಲ್ಲ. ಮೊದಲಿನಿಂದಲೂ ಟಿಪ್ಪು ಜಯಂತಿ ವಿರೋಧಿಯಾಗಿರುವ ಕೇಂದ್ರ ಸಚಿವ ಅನಂತ್ ಕುಮಾರ ಹೆಗಡೆ, ಯಾವುದೇ ಕಾರಣಕ್ಕೂ ತಮ್ಮ ಹೆಸರನ್ನು ಬಳಸಬಾರದು ಎಂದು ಕಟ್ಟಪ್ಪಣೆ ನೀಡಿದ್ದರು. ಇದರಂತೆ ಜಿಲ್ಲಾಡಳಿತ ಅವರ ಹೆಸರನ್ನು ಬಳಸಿಲ್ಲ ಎಂದು ತಿಳಿದುಬಂದಿದೆ.

# ಆಮಂತ್ರಣ ಪತ್ರಿಕೆಯಲ್ಲಿದೆ ಬಿಜೆಪಿ ಎಲ್ಲಾ ಮುಖಂಡರ ಹೆಸರು:
ಕೇಂದ್ರ ಸಚಿವ ಅನಂತ್ ಕುಮಾರ ಹೆಗಡೆ ಅವರನ್ನು ಹೊರತುಪಡಿಸಿ, ಬೆಳಗಾವಿ ಜಿಲ್ಲೆಯ ಬಿಜೆಪಿ ನಾಯಕರ ಹೆಸರುಗಳು ಟಿಪ್ಪು ಜಯಂತಿ ಆಮಂತ್ರಣ ಪತ್ರಿಕೆಯಲ್ಲಿವೆ. ಟಿಪ್ಪು ಜಯಂತಿ ವಿರೋಧಿಸಿ ಧರಣಿ ಮಾಡುವ ನಾಯಕರ ಹೆಸರನ್ನು ಕೂಡ ಆಮಂತ್ರಣ ಪತ್ರಿಕೆಯಲ್ಲಿ ಜಿಲ್ಲಾಡಳಿತ ನಮೂದಿಸಿದೆ ಎನ್ನಲಾಗುತ್ತಿದೆ.

LEAVE A REPLY

Please enter your comment!
Please enter your name here