ವಿಜಯಪುರ: ಈ ಹಿಂದೆ ಕುತಂತ್ರದಿಂದ ಬಿ.ಎಸ್.ಯಡಿಯೂರಪ್ಪ ಅವರನ್ನು ಜೈಲಿಗೆ ಕಳುಹಿಸಿದವರೇ ಜೈಲಿಗೆ ಹೋಗುವ ದಿನಗಳು ಬಂದಿವೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು. 

ನಗರದಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾನೆ ವೇಳೆ ಮಾತನಾಡಿದ ಅವರು, ಸಂಪುಟ ವಿಸ್ತರಣೆಯಾದರೂ ಸಮ್ಮಿಶ್ರ ಸರಕಾರ ಬೀಳುತ್ತದೆ ಎಂದು ಭವಿಷ್ಯ ನುಡಿದರು. 

ಕುಮಾರಸ್ವಾಮಿ ಅವರು ಕರ್ನಾಟಕದ ಮುಖ್ಯಮಂತ್ರಿ ಎಂದು ಭಾಸವಾಗುತ್ತಿಲ್ಲ. ಅವರು ಬೆಂಗಳೂರು ಗ್ರಾಮಾಂತರ, ಮಂಡ್ಯ, ಹಾಸನ ಭಾಗಕ್ಕೆ ಮಾತ್ರ ಸಿಎಂ ಅನಿಸುತ್ತಿದೆ ಎಂದು ಟೀಕಿಸಿದರು. ಯಾರೋ ಕೊರೆದ ಕೊಳವೆ ಬಾವಿ ಉದ್ಘಾಟನೆಯಲ್ಲಿ ಸಿಎಂ ನಿರತರಾಗಿದ್ದಾರೆ ಎಂದು ಛೇಡಿಸಿದರು. 

ಕ್ಯಾಬಿನೆಟ್ ಅನುಮೋದನೆ ಇಲ್ಲದೆಯೇ ಹಾಸನಕ್ಕೆ ನೂರಾರು ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ಆರೋಪಿಸಿರುವ ಯತ್ನಾಳ್, ಬಿಜೆಪಿ ಶಾಸಕರ ಕಡತಗಳನ್ನು ಉದ್ದೇಶ ಪೂರ್ವಕವಾಗಿ ತಳ್ಳುತ್ತಿದ್ದಾರೆಂದು ದೂರಿದರು. 

ಸರಕಾರದ ಅಸ್ಥಿರತೆ ನೋಡಿ ರಾಜ್ಯದ ಜನತೆ ದಂಗೆ ಏಳುವ ದಿನಗಳು ದೂರವಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು. 

LEAVE A REPLY

Please enter your comment!
Please enter your name here