ಬೆಂಗಳೂರು, ಸೆಪ್ಟೆಂಬರ್ 10: ಪೆಟ್ರೋಲ್, ಡೀಸೆಲ್ ದರ ನಿಯಂತ್ರಣ ಸಾಧ್ಯವಾಗದೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೈಚೆಲ್ಲಿ ಕೂತಿವೆ. ಯುಪಿಎ ಹಾಗೂ ಎನ್ಡಿಎ ಕಾಲದ ದರಗಳ ತುಲನೆ ಇನ್ನೂ ಜಾರಿಯಲ್ಲಿದೆ. ಈ ನಡುವೆ ರಾಜ್ಯಗಳು ಏಕೆ ಸ್ವಯಂ ಪ್ರೇರಿತರಾಗಿ ಜನರ ಕಷ್ಟಕ್ಕೆ ಸ್ಪಂದಿಸಿ, ವ್ಯಾಟ್, ಸೆಸ್ ಇಳಿಸಬಾರದು ಎಂಬ ಚರ್ಚೆ ಮತ್ತೊಮ್ಮೆ ಆರಂಭವಾಗಿದೆ. ಕೇಂದ್ರ ಸರ್ಕಾರ ಎಂದಿನಂತೆ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಹೆಚ್ಚಿಸಿ ಜನ ಸಾಮಾನ್ಯರ ಮೇಲೆ ಹೊರೆ ಹಾಕಿದೆ. ಆದರೆ, ರಾಜ್ಯ ಸರ್ಕಾರಗಳು ತಮ್ಮ ಜನರ ಕಷ್ಟ ನಷ್ಟಗಳನ್ನು ಗಮನಿಸಿ ಹೆಚ್ಚುವರಿ ತೆರಿಗೆಗಳನ್ನು ಮನ್ನಾ ಮಾಡುವ ಅಧಿಕಾರ ಚಲಾಯಿಸಬಹುದು. ಗೋವಾ ಸರ್ಕಾರ ಈ ನಿಟ್ಟಿನಲ್ಲಿ ಹೆಜ್ಜೆ ಇಡುವುದಾಗಿ ಭರವಸೆ ನೀಡಿ ಹುಸಿಗೊಳಿಸಿದೆ. ಆಂಧ್ರಪ್ರದೇಶ ಹಾಗೂ ರಾಜಸ್ಥಾನಗಳಲ್ಲಿ ಪೆಟ್ರೋಲ್ ಮೇಲಿನ ವೌಲ್ಯವರ್ಧಿತ ತೆರಿಗೆ (ವ್ಯಾಟ್) ಯನ್ನು ಇಳಿಸಲಾಗಿದೆ

ಕರ್ನಾಟಕದಲ್ಲಿ ವ್ಯಾಟ್ ತಗ್ಗಿಸುವ ಬಗ್ಗೆ ಚರೆ ಮಾಡುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ಆದರೆ, ಕೇಂದ್ರ ಸರ್ಕಾರ ಮಾತ್ರ ತನ್ನ ಪಾಲಿನ ವ್ಯಾಟ್ ತಗ್ಗಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ತೆರಿಗೆ ಲೆಕ್ಕಾಚಾರ ಏನಾದರೂ ಇರಲಿ ಪೆಟ್ರೋಲ್, ಡೀಸೆಲ್ ಬೆಲೆ ತಗ್ಗಿದರೆ ಸಾಕು ಎಂದು ಜನ ಸಾಮಾನ್ಯರು ಗೋಳಾಡುತ್ತಿದ್ದಾರೆ. ಕರ್ನಾಟಕದ ವ್ಯಾಟ್ ಲೆಕ್ಕಾಚಾರ, ಎಷ್ಟು ಪ್ರಮಾಣ ಸೆಸ್ ಇಳಿಸಬಹುದು? ಇಳಿಕೆ ಮಾಡಿದರೆ ರಾಜ್ಯದ ಬೊಕ್ಕಸಕ್ಕೆ ನಷ್ಟವಾಗುವುದಿಲ್ಲವೆ? ಎಂಬ ಪ್ರಶ್ನೆ ಎದ್ದಿದೆ. ಕುಮಾರಸ್ವಾಮಿ ಅವರು ಹೆಚ್ಚೆಂದರೆ ಶೇ 4 ರಷ್ಟು ಅಥವಾ 2 ರು ನಷ್ಟು ಬೆಲೆ ಇಳಿಸಬಹುದಾಗಿದೆ. ಆದರೆ, ಇದರಿಂದ ರಾಜ್ಯದ ಬೊಕ್ಕಸಕ್ಕೆ ನಷ್ಟ ತಪ್ಪಿಸಲು ಸಾಧ್ಯವಿಲ್ಲ.

LEAVE A REPLY

Please enter your comment!
Please enter your name here