ಮೈಸೂರು

ಡಿ.8:- ಕೆಆರ್‌ಎಸ್ ಉಳುವಿಗಾಗಿ ಪೂರ್ವಭಾವಿ ಸಮಾಲೋಚನಾ‌ ಸಭೆಯನ್ನಿಂದು ನಗರದ ಬಿಎಂ ಆಸ್ಪತ್ರೆ ಎದುರಿನ ಕೃಷಿ ಮಾರುಕಟ್ಟೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ವಿವಿಧ ಜನಪರ ಸಂಘಟನೆಗಳು, ಹಿರಿಯ ಹೋರಾಟಗಾರರಿಂದ ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆಯಲ್ಲಿ ಹಿರಿಯ ಹೋರಾಟಗಾರ ಪ.ಮಲ್ಲೇಶ್, ನಂಜರಾಜೇ ಅರಸ್ ಸೇರಿದಂತೆ 80ಕ್ಕೂ ಹೆಚ್ಚು ಹೋರಾಟಗಾರರು ಪಾಲ್ಗೊಂಡು ಕೆಆರ್ ಎಸ್ ಬಗ್ಗೆ ತಮ್ಮ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಕೆಆರ್ ಎಸ್ ನಿಂದ ಜನರಿಗೆ ಆಗುತ್ತಿರುವ ಸದುಪಯೋಗಗಳನ್ನು ಹಿರಿಯರು ತಿಳಿಸಿದ್ದು, ಕೆಆರ್ ಎಸ್ ಉಳಿವಿಗಾಗಿ ನಾವು ಧ್ವನಿ ಕೊಡಬೇಕು. ನಾವು ಈಗ ನದಿಗಳ ಬಗ್ಗೆ ಧ್ವನಿ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಯಾವುದೇ ಅಣೆಕಟ್ಟೆ, ನದಿಗಳು ಇರುವುದಿಲ್ಲ ಎಂದು ಹಿರಿಯ ಹೋರಾಟಗಾರರು ಹೇಳಿದರು.

ಕೆಆರ್ ಎಸ್ ಗೆ ತೊಂದರೆ ಆದರೆ ಮೈಸೂರಿಗೆ ಮಾತ್ರ ಅಲ್ಲದೆ ಬೆಂಗಳೂರಿಗೆ ತೊಂದರೆ ಆಗುತ್ತದೆ. ಇದನ್ನು ಸರ್ಕಾರ ಮನಗಾಣಬೇಕು. ಕೆಆರ್ ಎಸ್ ಸುತ್ತಲಿನ ಬೇಬಿ ಬೆಟ್ಟದಲ್ಲಿ ಆಕ್ರಮ ಗಣಿಗಾರಿಕೆ ನಡೆಯುತ್ತಿದೆ. ಅಕ್ರಮ ಗಣಿಕಾರಿಗೆಯಿಂದ ಬಳ್ಳಾರಿಯಲ್ಲಿ ಆದ ಪರಿಸ್ಥಿತಿ ಇಲ್ಲಿಯೂ ಆಗುತ್ತದೆ. ಅಕ್ರಮವಾಗಿ ನಡೆಯುತ್ತಿರುವ ಗಣಿಗಾರಿಕೆಯಲ್ಲಿ ರಾಜಕೀಯ ನಾಯಕರ ಮತ್ತು ಅಧಿಕಾರಿಗಳ ಕುಮ್ಮಕ್ಕಿದೆ. ಡಿಸ್ನಿ ಲ್ಯಾಂಡ್ ಯೋಜನೆ ತಡೆಯುವ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕು. ಈ ಯೋಜನೆಯಿಂದ ಆಗುವ ಅನಾನೂಕೂಲಗಳ ಬಗ್ಗೆ ನಾವು ಸರ್ಕಾರದ ಕಿವಿ ಹಿಂಡಬೇಕು ಎಂದು ಹಿರಿಯ ಹೋರಾಟಗಾರ ಪ.ಮಲ್ಲೇಶ್ ಹೇಳಿದರು.

LEAVE A REPLY

Please enter your comment!
Please enter your name here