ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಚಿತ್ರ ರಾಜ್ಯಾದ್ಯಂತ ಭರ್ಜರಿ ಕಲೆಕ್ಷನ್ ಮಾಡುತ್ತಿದ್ದು ಈ ಮಧ್ಯೆ ಚಿತ್ರದ ಆನ್ ಲೈನ್ ನಲ್ಲಿ ಸೋರಿಕೆಯಾಗಿದ್ದು ಚಿತ್ರದ ಕಲೆಕ್ಷನ್ ಮೇಲೆ ದೊಡ್ಡ ಹೊಡೆತ ಬಿದ್ದಿದೆ.
ಹೌದು, ಬ್ಲಾಕ್ ಬಸ್ಟರ್ ಚಿತ್ರಗಳನ್ನು ಆನ್ ಲೈನ್ ನಲ್ಲಿ ಸೋರಿಕೆ ಮಾಡುತ್ತಿರುವ ತಮಿಳು ರ್ಯಾಕರ್ಸ್ ಇದೀಗ ಯಜಮಾನ ಚಿತ್ರದ ಪೈರಸಿಯನ್ನು ಸೋರಿಕೆ ಮಾಡಿದೆ. ಇದರಿಂದಾಗಿ ಡಿ ಬಾಸ್ ಗೆ ಸಂಕಷ್ಟ ಎದುರಾಗಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಹಿಂದೆ ಎಷ್ಟೇ ಮನವಿ ಮಾಡಿಕೊಂಡರೆ ಕಿಡಿಗೇಡಿಗಳು ಪೈರಸಿ ಮಾಡೋದನ್ನು ಬಿಟ್ಟಿಲ್ಲ. ಸಿನಿಮಾ ರಿಲೀಸ್ ಆಗಿ ಥಿಯೇಟರ್ ಗಳಲ್ಲಿ ಭಾರೀ ಪ್ರದರ್ಶನ ಕಾಣುತ್ತಿದ್ದರೂ, ಇತ್ತ ಆನ್ ಲೈನ್ ನಲ್ಲಿ ಚಿತ್ರ ಸೋರಿಕೆಯಾಗಿದೆ. ಇನ್ನು ಯಜಮಾನ ಥಿಯೇಟರ್ ನಲ್ಲಿ ಪ್ರಸಾರವಾಗುತ್ತಿದ್ದಂತೆ ವೀಕ್ಷಕನೊಬ್ಬ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಲೈವ್ ಆಗಿ ವಿಡಿಯೋ ಸೋರಿಕೆ ಮಾಡಿದ್ದರು.
ಯಜಮಾನ ಚಿತ್ರವನ್ನು ಶೈಲಜಾ ಸುರೇಶ್ ಅವರು ನಿರ್ಮಿಸಿದ್ದು, ಕುಮಾರ್ ಎಂಬುವರು ನಿರ್ದೇಶಿಸಿದ್ದಾರೆ.
Summary
ಕೆಜಿಎಫ್ ನಂತರ ಆನ್‍‍ಲೈನ್‍‍ನಲ್ಲಿ ಯಜಮಾನ ಲೀಕ್, ಕನ್ನಡಕ್ಕೆ ದೊಡ್ಡ ಹೊಡೆತ
Article Name
ಕೆಜಿಎಫ್ ನಂತರ ಆನ್‍‍ಲೈನ್‍‍ನಲ್ಲಿ ಯಜಮಾನ ಲೀಕ್, ಕನ್ನಡಕ್ಕೆ ದೊಡ್ಡ ಹೊಡೆತ
Description
ಯಜಮಾನ ಚಿತ್ರವನ್ನು ಶೈಲಜಾ ಸುರೇಶ್ ಅವರು ನಿರ್ಮಿಸಿದ್ದು, ಕುಮಾರ್ ಎಂಬುವರು ನಿರ್ದೇಶಿಸಿದ್ದಾರೆ.

LEAVE A REPLY

Please enter your comment!
Please enter your name here