ಕೋಲಾರ: ಜಿಪಂನ ಸರ್ಕಾರಿ ಡೀಸೆಲ್ ವಾಹನಗಳಿಗೆ ಜೈವಿಕ ಇಂಧನ (ಬಯೋ ಡೀಸೆಲ್) ಬಳಸುವಂತೆ ನಿರ್ದೇಶನ ನೀಡಿದ್ದು, ಕೆಜಿಎಫ್​ನಲ್ಲಿರುವ ಜೈವಿಕ ಇಂಧನ ಮತ್ತು ಸಂಶೋಧನೆ, ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕೇಂದ್ರಕ್ಕೆ ಇಂಧನ ಪೂರೈಸುವ ಜವಾಬ್ದಾರಿ ವಹಿಸಲಾಗಿದೆ.

ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಕೋರಿಕೆ ಮೇರೆಗೆ ಆರ್​ಡಿಪಿಆರ್ ಕಾರ್ಯದರ್ಶಿ ಎಲ್.ಕೆ. ಅತೀಕ್ ಜಿಪಂಗಳಿಗೆ ಸುತ್ತೋಲೆ ಹೊರಡಿಸಿ ಸರ್ಕಾರಿ ಡೀಸೆಲ್ ವಾಹನಗಳಿಗೆ ಜೈವಿಕ ಇಂಧನ ಬಳಸುವಂತೆ ನಿರ್ದೇಶನ ನೀಡಿದ್ದಾರೆ. ವಾಹನಗಳಿಗೆ ಬಯೋ ಡೀಸೆಲ್ ಬಳಸುವ ಬಗ್ಗೆ ಜಿಪಂ ವಾಹನ ಚಾಲಕರಿಗೆ ಸೂಕ್ತ ತರಬೇತಿ ನೀಡುವ ಜವಾಬ್ದಾರಿ ಪ್ರಾತ್ಯಕ್ಷಿಕೆ ಕೇಂದ್ರಗಳದ್ದಾಗಿದೆ. ಜೈವಿಕ ಇಂಧನವನ್ನು ಡೀಸೆಲ್ ಜತೆಗೆ ಶೇ.5 (100 ಲೀಟರ್ ಡೀಸೆಲ್​ಗೆ 5 ಲೀ) ಪ್ರಮಾಣದಲ್ಲಿ ಮಿಶ್ರಣ ಮಾಡಿ ಬಳಸುವಂತೆ ಮಾರ್ಗಸೂಚಿ ನೀಡಲಾಗಿದೆ.

ಜಿಲ್ಲೆಯಲ್ಲಿ ಹೇಗೆ?: ಕೆಜಿಎಫ್​ನ ಟಿ. ತಿಮ್ಮಯ್ಯ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಸಹಾಯಧನದಿಂದ 2011ರಲ್ಲೇ ಜೈವಿಕ ಇಂಧನ ಮತ್ತು ಸಂಶೋಧನೆ, ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕೇಂದ್ರವನ್ನು 10 ಲಕ್ಷ ರೂ. ವೆಚ್ಚದಲ್ಲಿ ಸ್ಥಾಪಿಸಿತ್ತು. ಪ್ರಸ್ತುತ ವಾರ್ಷಿಕ ನಿರ್ವಹಣೆಗೆ 2 ಲಕ್ಷ ರೂ.ಗಳನ್ನು ಸರ್ಕಾರ ನೀಡುತ್ತಿದೆ.

ಇಷ್ಟು ದಿನ ಕಾಲೇಜು ವಿದ್ಯಾರ್ಥಿಗಳ ಕಲಿಕೆಗೆ ಬಳಕೆಯಾಗುತ್ತಿದ್ದ ಘಟಕ ಇನ್ನು ಮುಂದೆ ಸರ್ಕಾರದ ಡೀಸೆಲ್ ವಾಹನಗಳಿಗೆ ಇಂಧನ ಪೂರೈಸುವ ಜವಾಬ್ದಾರಿ ನಿರ್ವಹಿಸಲಿದೆ.

ಘಟಕದಲ್ಲಿ ಇಬ್ಬರು ಸಿಬ್ಬಂದಿ ಇದ್ದು, ಜೈವಿಕ ಇಂಧನದ ಬೀಜಗಳ ಸಂಗ್ರಹಣೆ ಕಾರ್ಯ ನಡೆಯುತ್ತಿದೆ. ಜೈವಿಕ ಇಂಧನ ಬಳಕೆಯಿಂದ ವಾಹನದ ಕಾರ್ಯಕ್ಷಮತೆ ಹೆಚ್ಚುವ ಜತೆಗೆ ಹಣ ಉಳಿತಾಯವಾಗುತ್ತದೆ ಎನ್ನುತ್ತಾರೆ ಕಾಲೇಜು ಸಹಾಯಕ ಪ್ರಾಧ್ಯಾಪಕ ಎಸ್. ಸುರೇಶ್​ಕುಮಾರ್.

Summary
ಕೋಲಾರ : ಡೀಸೆಲ್ ವಾಹನಕ್ಕೆ ಜೈವಿಕ ಇಂಧನ
Article Name
ಕೋಲಾರ : ಡೀಸೆಲ್ ವಾಹನಕ್ಕೆ ಜೈವಿಕ ಇಂಧನ
Description
ಜೈವಿಕ ಇಂಧನ ಬಳಕೆಯಿಂದ ವಾಹನದ ಕಾರ್ಯಕ್ಷಮತೆ ಹೆಚ್ಚುವ ಜತೆಗೆ ಹಣ ಉಳಿತಾಯವಾಗುತ್ತದೆ ಎನ್ನುತ್ತಾರೆ ಕಾಲೇಜು ಸಹಾಯಕ ಪ್ರಾಧ್ಯಾಪಕ ಎಸ್. ಸುರೇಶ್​ಕುಮಾರ್.

LEAVE A REPLY

Please enter your comment!
Please enter your name here