ಮೈಸೂರು: ವಿನಾಕಾರಣ ಖಾಸಗಿ ಕಾಲೇಜು ವಿದ್ಯಾರ್ಥಿಯೊಬ್ಬನನ್ನು ಆತನ ನಾಲ್ವರು ಸ್ನೇಹಿತರೇ ಕೊಂದುದಲ್ಲದೆ ಶವವನ್ನು ಸ್ಮಶಾನದಲ್ಲಿ ಹೂತು ಹಾಕಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಕುಂಬಾರಕೊಪ್ಪಲಿನವರೇ ಆಗಿದ್ದ ಅವನ ನಾಲ್ವರು ಸ್ನೇಹಿತರು ಈ ಘೋರ ಕೃತ್ಯ ನಡೆಸಿದ್ದಾರೆನ್ನಲಾಗಿದ್ದು ಪೋಲೀಸರು ಆರೋಪಿಗಳನ್ನು ವಶಕ್ಕೆ ಪಡೆಇದ್ದಾರೆ.
ಕೃತ್ಯ ನಡೆಸಿದ ಬಳಿಕ ಮೈಸೂರು-ಬೆಂಗಳೂರು ರಸ್ತೆಯಲ್ಲಿನ ಜೋಡಿ ತೆಂಗಿನಮರದ ಸ್ಮಶಾನದಲ್ಲಿ ಶವವನ್ನು ಹೂತು ಹಾಕಲಾಗಿದೆ. ಸ್ಥಳಕ್ಕೆ ವಿಜಯನಗರ ಠಾಣೆ ಇನ್ಸ್ ಪೆಕ್ಟರ್ ಕುಮಾರ್ ಹಾಗೂ ತಹಶೀಲ್ದಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸದ್ಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ.
ಮೃತನನ್ನು ಕುಂಬಾರಕೊಪ್ಪಲು ನಿವಾಸಿ ರಾಘವೇಂದ್ರ (24)ಎಂದು ಗುರುತಿಸಲಾಗಿದ್ದು ಈತ ಶುಕ್ರವಾರ ಮನೆಯಿಂದ ಹೊರಟವನು ಮತ್ತೆ ಹಿಂತಿರುಗಿರಲಿಲ್ಲ.

LEAVE A REPLY

Please enter your comment!
Please enter your name here