ಗಜೇಂದ್ರಗಢ: Bike ಅಪಘಾತ, ಸಕಾಲದಲ್ಲಿ ಚಿಕಿತ್ಸೆ ಸಿಗದೆ ಯುವಕ ಸಾವು

0
22

ಗಜೇಂದ್ರಗಢ: ಬೈಕ್ ಅಪಘಾತವಾಗಿ ಗಾಯಗೊಂಡಿದ್ದ ಯುವಕನೊಬ್ಬ ಸಕಾಲಕ್ಕೆ ಚಿಕಿತ್ಸೆ ದೊರೆಯದ ಕಾರಣ ಮೃತಪಟ್ಟಿರುವ ದಾರುಣ ಘಟನೆ ಗದಗ ಜಿಲ್ಲೆ ಗಜೇಂದ್ರಗಢ ಪಟ್ಟಣದಲ್ಲಿ ನಡೆದಿದೆ.
ರವಿ ಚವ್ಹಾಣ (26) ಎನ್ನುವ ಯುವಕ ಸಾವನ್ನಪ್ಪಿದ್ದ ದುರ್ದೈವಿ.ಈತ ಬೈಕ್ ಅಪಘಾತದಿಂದ ಗಾಯಗೊಂಡು ನಡುರಸ್ತೆಯಲ್ಲೇ ಒದ್ದಾಡುತ್ತಿದ್ದರೂ ಯಾರೊಬ್ಬರೂ ಸಹಾಯಕ್ಕೆ ಬರದೇ ಇದ್ದದ್ದಲ್ಲದೆ ವೀಡಿಯೋ ಚಿತ್ರಿಸಿಕೊಳ್ಳುವುದರಲ್ಲೇ ತಲ್ಲೀನರಾಗಿದ್ದರು ಎನ್ನಲಾಗಿದೆ.

ಜನರು ಸಹಾಯಕ್ಕೆ ಬರುವಿದಿರಲಿ ಸಮೀಪದಲ್ಲೇ ಇದ್ದ ಪೋಲೀಸರು ಸಹ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸದೆ ಸುಮ್ಮನೆ ಇದ್ದು ತಮ್ಮ ಕರ್ತವ್ಯ ಪ್ರಜ್ಞೆ ಮರೆತಂತೆ ಇದ್ದದ್ದು ನಿಜಕ್ಕೂ ಖೇದಕರ ಸಂಗತಿ.
ಇನ್ನೂ ಆ ಯುವಕನ ದುರದೃಷ್ಟಕ್ಕೆ ಪಕ್ಕದಲ್ಲೇ ಆಸ್ಪತ್ರೆ ಇದ್ದರೂ ಸಹ ಸಕಾಲಕ್ಕೆ ಅಂಬ್ಯುಲೆನ್ಸ್ ದೊರಕದೆ ಆಸ್ಪತ್ರೆಗೆ ದಾಖಲಿಸುವುದು ವಿಳಂಬವಾಗಿದೆ. ಕಡೆಗೂ ಕ್ರೂಸರ್ ವಾಹನ ಮೂಲಕ ಯುವಕನನ್ನು ಆಸ್ಪತ್ರೆಗೆ ದಾಖಲಿಸಿದಾಗ ಅಲ್ಲಿ ಆತನ ಸ್ಥಿತಿ ಚಿಂತಾಜನಕವಾಗಿರುವುದು ಕಂಡ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್ ಗೆ ಕಳಿಸಿದ್ದಾರೆ. ಆದರೆ ಹುಬ್ಬಳ್ಳಿಗೆ ತೆರಳುವ ಮಾರ್ಗ ಮಧ್ಯೆಯೇ ಯುವಕ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ.
ಒಟ್ಟಾರೆ ಅಪಘಾತ ನಡೆದು ಗಂಟೆ ಗಟ್ಟಲೆ ರಸ್ತೆ ಮಧ್ಯೆ ಯುವಕನೊಬ್ಬ ನರಳುತ್ತಿದ್ದರೂ ಯಾರೊಬ್ಬರೂ ಸಹಕಾರ ನೀಡದಿರುವುದು ಜನರಲ್ಲಿನ ಮಾನವೀಯತೆಯನ್ನೇ ಪ್ರಶ್ನಿಸುವಂತಿತ್ತು.

LEAVE A REPLY

Please enter your comment!
Please enter your name here