ರೋಣ : ಅಂತರ್ಜಲ ಮಟ್ಟ ಹೆಚ್ಚಿಸಲು ನದಿಗಳ ಪುನಶ್ಚೇತನ ಯೋಜನೆಯಡಿ ಆರ್ಟ ಆಫ್‌ ಲೀವಿಂಗ್‌ ಸಂಸ್ಥೆಯ ಸಹಯೋಗದಲ್ಲಿ ಹಳ್ಳ, ಕೊಳ್ಳ, ಬಾವಿ, ಕೊಳವೆ ಬಾವಿಗಳ ಪಕ್ಕದಲ್ಲಿ ಇಂಗು ಗುಂಡಿಗಳನ್ನು ನಿರ್ಮಿಸುವ ಕಾರ್ಯ ಅಂತರ್ಜಲ ಪುನಶ್ಚೇತನಕ್ಕೆ ಸಹಕಾರಿಯಾಗಿದ್ದು, ಪ್ರತಿಯೊಬ್ಬರೂ ಇದಕ್ಕೆ ಸಹಕಾರ ನೀಡುವ ಮೂಲಕ ಕೈ ಜೋಡಿಸಬೇಕು ಎಂದು ಶಾಸಕ ಕಳಕಪ್ಪ ಬಂಡಿ ಮನವಿ ಮಾಡಿದರು

ತಾಲೂಕಿನ ಕೊತಬಾಳ ಗ್ರಾಪಂ ಮತ್ತು ಆರ್ಟ ಆಫ್‌ ಲೀವಿಂಗ್‌ ಸಂಸ್ಥೆ ಜಂಟಿಯಾಗಿ ಏರ್ಪಡಿಸಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೈಗೆತ್ತಿಕೊಂಡಿರುವ ನದಿಗಳ ಪುನಶ್ಚೇತನ ಯೋಜನೆಯಡಿ ಇಂಗು ಗುಂಡಿಗಳ ನಿರ್ಮಾಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಬಯಲು ಸೀಮೆ ಮತ್ತು ಮಲೆನಾಡಿನಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ಅದನ್ನು ಹೆಚ್ಚಿಸಲು ನದಿ ಪುನಶ್ಚೇತನ ಯೋಜನೆ ಸಹಕಾರಿಯಾಗಬೇಕು. ಈ ಯೋಜನೆಯ ಫಲ ಗ್ರಾಮೀಣ ಜನರಿಗೆ ದೊರೆಯಬೇಕಾದರೆ ಪಕ್ಷಾತೀತವಾಗಿ ಎಲ್ಲ ಜನಪ್ರತಿನಿಧಿಗಳು ಸಹಕರಿಸಬೇಕು. ಆರ್ಟ ಆಫ್‌ ಲಿವಿಂಗ್‌ ನೇತ್ರತ್ವದಲ್ಲಿ ನಡೆಯುತ್ತಿರುವ ಕಾರ‍್ಯದಲ್ಲಿ ಗ್ರಾಮಸ್ಥರು ಕೈ ಜೋಡಿಸಬೇಕು ಎಂದರು

ಆರ್ಟ ಆಫ್‌ ಲಿವಿಂಗ್‌ ಸಂಸ್ಥೆ ರೈತರಿಗೆ ಅರಿವು ಮೂಡಿಸುವ ಜತೆಗೆ ಅಂತರ್ಜಲ ಹೆಚ್ಚಿಸಿ ನೀರಿಲ್ಲದೇ ಹಾಳುಬಿದ್ದ ಕೊಳವೆಬಾವಿಗಳಲ್ಲೂ ನೀರುಕ್ಕಿಸಿ ತೋರಿಸಿದೆ. ಇದು ತಾಲೂಕಿನ ರೈತ ಸಮೂಹಕ್ಕೆ ಮಾದರಿಯಾಗಬೇಕು ಎಂಬುದು ಈ ಭಾಗದ ಒತ್ತಾಸೆ. ಹೀಗಾಗಿ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಅಂತರ್ಜಲ ಹೆಚ್ಚಿಸುವ ಕೆಲಸ ನಡೆದಿದೆ ಎಂದರು.

ಮುತ್ತಣ್ಣ ಲಿಂಗನಗೌಡ್ರ, ಶರಣಪ್ಪ ಕಂಬಳಿ, ಶಿವಾನಂದ ಜಿಡ್ಡಿಬಾಗಿಲ, ಎನ್‌.ಆರ್‌.ಇ.ಜಿ ಎಡಿ, ಗ್ರಾ.ಪಂ.ಸದಸ್ಯರು, ಮುಖಂಡರು ಉಪಸ್ಥಿತರಿದ್ದರು.
Summary
ಗದಗ : ಅಂತರ್ಜಲ ಹೆಚ್ಚಳಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ !
Article Name
ಗದಗ : ಅಂತರ್ಜಲ ಹೆಚ್ಚಳಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ !
Description
ಈ ಯೋಜನೆಯ ಫಲ ಗ್ರಾಮೀಣ ಜನರಿಗೆ ದೊರೆಯಬೇಕಾದರೆ ಪಕ್ಷಾತೀತವಾಗಿ ಎಲ್ಲ ಜನಪ್ರತಿನಿಧಿಗಳು ಸಹಕರಿಸಬೇಕು. ಆರ್ಟ ಆಫ್‌ ಲಿವಿಂಗ್‌ ನೇತ್ರತ್ವದಲ್ಲಿ ನಡೆಯುತ್ತಿರುವ ಕಾರ‍್ಯದಲ್ಲಿ ಗ್ರಾಮಸ್ಥರು ಕೈ ಜೋಡಿಸಬೇಕು ಎಂದರು 

LEAVE A REPLY

Please enter your comment!
Please enter your name here