ಬಾಗೇಪಲ್ಲಿ

ಗುಮ್ಮಾನಾಯಕನಪಾಳ್ಯ ಕೋಟೆಯಲ್ಲಿನ ಬೃಹತ್‌ ದೇಗುಲಗಳು ಕಲ್ಲಿನಿಂದ ನಿರ್ಮಾಣಗೊಂಡಿವೆ. ಸಂಗೀತ ವಾದಕರು, ರಾಜರಾಣಿಯರ ಪುರಾಣಗಳ ದೃಶ್ಯಗಳು, ದೇವತೆಗಳು, ಮರಗಿಡಗಳು, ಪಕ್ಷಿಗಳು, ಮೊದಲಾದ ಕೆತ್ತನೆಗಳಿವೆ. ಆದರೆ ಇಂದು ಕೋಟೆ ಪಾಳುಬಿದ್ದಿದೆ ಎಂದು ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್‌ ತಿಳಿಸಿದರು.

ಗುಮ್ಮಾನಾಯಕನಪಾಳ್ಯ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾತನಾಡಿದರು. ಶಿಲ್ಪಕಲಾ ಸೌಂದಾರ್ಯದ ಕೋಟೆಯಲ್ಲಿನ ಬೃಹತ್‌ ದೇಗುಲಗಳು ಕುರಿದೊಡ್ಡಿಗಳಾಗಿವೆ. ಸುಮಾರು ಶಿಲ್ಪಕಲಾ ವಿಗ್ರಹಗಳನ್ನು ಸ್ಥಳೀಯರು ಗುಡಿಸಲು ಕಾಯುವ ಕಾವಲುಗಾರರಂತೆ ನಿಲ್ಲಿಸಿಕೊಂಡಿದ್ದಾರೆ. ಶಿಲ್ಪಕಲೆಯ ಕಂಬಗಳನ್ನು ಕದ್ದೊಯ್ದು ದನಕರುಗಳನ್ನು ಕಟ್ಟಿಕೊಳ್ಳುವ ಕಂಬಗಳನ್ನಾಗಿ ಮಾಡಿಕೊಂಡಿದ್ದಾರೆ. ಬೃಹತ್‌ ಕೋಟೆಯ ಕಿರಿದಾಗ ಪ್ರವೇಶದ್ವಾರ ಬೃಹತ್‌ ಕಟ್ಟಡಗಳು ಮೈದಾನಗಳು, ಶಿಲಾ ಶಾಸನಗಳು, ವಾಸ್ತು ಶಿಲ್ಪ ಪ್ರತಿಬಿಂಬಿಸುವ ಸ್ಮಾರಕಗಳು ದಿಕ್ಕು ಕಾಣದೆ ಅನಾಥವಾಗಿವೆ. ಚಿತ್ರದುರ್ಗದ ಕೋಟೆಯಂತೆ ಗುಮ್ಮಾನಾಯಕನಪಾಳ್ಯ ಕೋಟೆ ರಾಜ್ಯದ ಇನ್ನೊಂದು ಪ್ರಮುಖ ಪ್ರವಾಸಿ ತಾಣವಾಗಿ ಅಭಿವೃದ್ಧಿ ಮಾಡಲು ಮನಸ್ಸು ಮಾಡಿ ಈಗಾಗಲೇ ಪಾಳ್ಯದ ಅಭಿವೃದ್ಧಿಗೆ 53ಲಕ್ಷ ರೂ. ಗಳನ್ನು ಸರಕಾರ ಬಿಡುಗಡೆ ಮಾಡಿದೆ. ಈ ಹಣದಲ್ಲಿ ಪುರಾತನ ಕಾಲದಂತೆ ಗಾರೆ ಉಪಯೋಗಿಸಿ ಕೋಟೆಯನ್ನು ಸಂರಕ್ಷ ಣೆ ಮಾಡಲು ಉದ್ದೇಶಿಸಲಾಗಿದೆ ಎಂದ ಅವರು, ಗ್ರಾಮದಲ್ಲಿ ರಾಮದೇವರ ದೇವಾಲಯದಲ್ಲಿ ಜಾನುವಾರುಗಳನ್ನು ಕಟ್ಟಿ ಹಾಕಲಾಗುವುದರ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಕೋಟೆಯಲ್ಲಿರುವ ಈಶ್ವರ ದೇವಾಲಯ ಹಾಗೂ ರಾಮದೇವರ ದೇವಾಲಯವನ್ನು ಜೀಣ್ಣೋದ್ಧಾರ ಮಾಡಲು ಉದ್ದೇಶಿಸಲಾಗಿದೆ. ಇತರ ಇಲಾಖೆಗಳೊಂದಿಗೆ ಮಾತುಕತೆ ನಡೆಸಿ ಗುಮ್ಮಾನಾಯಕನಪಾಳ್ಯವನ್ನು ನವೀಕರಣಗೊಳಿಸಲಾಗುವುದು. ಗ್ರಾಮಸ್ಥರು ರಾಮದೇವರ ದೇವಾಲಯಲದಲ್ಲಿ ಕುರಿ, ಮೇಕೆಗಳನ್ನು ಕಟ್ಟಿ ಹಾಕುತ್ತಿರುವುದಕ್ಕೆ ಬುದ್ಧಿವಾದ ಹೇಳಿದ ಈ ದೇವಾಲಯವನ್ನು ಜೀಣ್ಣೋರ್‍ದ್ಧಾರಗೊಳಿಸಿದ ನಂತರ ತೆಂಗಿನ ಕಾಯಿ, ಹೂವು ಹಣ್ಣು ಮಾರಾಟ ಮಾಡಿದರೆ ನೀವು ಜೀವನ ನಡೆಸಬಹುದು. ಬೆಂಗಳೂರು ಇತರ ದೂರದ ಊರುಗಳಿಂದ ಕೋಟೆಯನ್ನು ನೋಡಲು ಜನರು ಆಗಮಿಸುತ್ತಾರೆ. ಗ್ರಾಮದ ಮುಂಭಾಗದಲ್ಲಿರುವ ಕಲ್ಯಾಣಿ ಜೋಣ್ಣೋರ್‍ದ್ಧಾರ, ಜತೆಗೆ ಹೆಬ್ಬಾಗಿಲು ನಿರ್ಮಾಣ, ಕೋಟೆ ಮೇಲೆ ಹೋಗಲು ಮೆಟ್ಟಲುಗಳ ನಿರ್ಮಾಣ, ಪ್ರವಾಸಿಗರಿಗೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಕಾವಲುಗಾರರನ್ನು ನೇಮಿಸಲಾಗುವುದು. ಗ್ರಾಮದಲ್ಲಿರುವ ಕೆರೆಯಲ್ಲಿ ಬೊಟಿಂಗ್‌ ವ್ಯವಸ್ಥೆ, ಶೌಚಾಲಯ ಹಾಗೂ ಮುಂತಾದ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುವುದು. ಸಿಸಿ ಕ್ಯಾಮರ ಅಳವಡಿಸಿ ಎಚ್ಚರಿಕೆ ವಹಿಸಲು ತೀರ್ಮಾನಿಸಲಾಗಿದೆ. ಸರಕಾರ ಈಗ ಬಿಡುಗಡೆ ಮಾಡಿರುವ 53 ಲಕ್ಷ ರೂ.ಗಳನ್ನು ವೆಚ್ಚದಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು. ಉಳಿದ ಕಾಮಗಾರಿಗಳನ್ನು ಮಾಡಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಹಾಗೂ ನಿಧಿ ಆಸೆಗಾಗಿ ದೇವಾಲಯಗಳನ್ನು ಆಗೆದು ನಾಶ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದರು.

ಯುವಕ ದೂರು-ಗ್ರಾಮದಲ್ಲಿ ಪರವಾನಗಿ ಇಲ್ಲದೆ ಅನೇಕ ಜನರು ಬಂದೂಕು ಹೊಂದಿದ್ದಾರೆ. ನಿಧಿ ತೆಗೆಯಲು ಬರುವ ಜನರಿಗೆ ಆಶ್ರಯ ನೀಡಿ ಕುರಿ, ಕೋಳಿ, ಮಾಂಸ ತಿಂದು ಮದ್ಯಪಾನ ಸೇವನೆ ಮಾಡುತ್ತಾರೆ. ಮೂಕ ಪ್ರಾಣಿಗಳನ್ನು ಭೇಟೆಯಾಡುತ್ತಾರೆ. ಇಂತಹ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮೌಖಿಕವಾಗಿ ದೂರು ಸಲ್ಲಿಸಿದರು.

ಈ ಸಂದರ್ಭದಲ್ಲಿ ಜಿಪಂ ಸಿಇಒ ಗುರುದತ್‌ ಹೆಗಡೆ, ತಹಸೀಲ್ದಾರ್‌ ಮಹಮದ್‌ ಅಸ್ಲಂ, ಪುರಾತತ್ವ ಇಲಾಖೆಯ ನಿವೃತ್ತ ಅಧಿಕಾರಿ ವೆಂಕಟೇಶಯ್ಯ, ಸರಕಾರಿ ಪದವಿ ಕಾಲೇಜಿನ ಉಪನ್ಯಾಸಕ ಡಾ.ನಯಾಜ್‌ ಆಹಮದ್‌, ಗ್ರಂಥಪಾಲಕ ವೆಂಕಟರಾಮರೆಡ್ಡಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ನಿಕಟ ಪೂರ್ವ ಅಧ್ಯಕ್ಷ ಬಿ.ಆರ್‌.ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

Summary
ಗುಮ್ಮಾನಾಯಕನಪಾಳ್ಯ ಕೋಟೆ ಅಭಿವೃದ್ಧಿಗೆ 53ಲಕ್ಷ ರೂ. ಗಳನ್ನು ಸರಕಾರ ಬಿಡುಗಡೆ
Article Name
ಗುಮ್ಮಾನಾಯಕನಪಾಳ್ಯ ಕೋಟೆ ಅಭಿವೃದ್ಧಿಗೆ 53ಲಕ್ಷ ರೂ. ಗಳನ್ನು ಸರಕಾರ ಬಿಡುಗಡೆ
Description
ಗುಮ್ಮಾನಾಯಕನಪಾಳ್ಯ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾತನಾಡಿದರು. ಶಿಲ್ಪಕಲಾ ಸೌಂದಾರ್ಯದ ಕೋಟೆಯಲ್ಲಿನ ಬೃಹತ್‌ ದೇಗುಲಗಳು ಕುರಿದೊಡ್ಡಿಗಳಾಗಿವೆ. ಸುಮಾರು ಶಿಲ್ಪಕಲಾ ವಿಗ್ರಹಗಳನ್ನು ಸ್ಥಳೀಯರು ಗುಡಿಸಲು ಕಾಯುವ ಕಾವಲುಗಾರರಂತೆ ನಿಲ್ಲಿಸಿಕೊಂಡಿದ್ದಾರೆ. ಶಿಲ್ಪಕಲೆಯ ಕಂಬಗಳನ್ನು ಕದ್ದೊಯ್ದು ದನಕರುಗಳನ್ನು ಕಟ್ಟಿಕೊಳ್ಳುವ ಕಂಬಗಳನ್ನಾಗಿ ಮಾಡಿಕೊಂಡಿದ್ದಾರೆ. ಬೃಹತ್‌ ಕೋಟೆಯ ಕಿರಿದಾಗ ಪ್ರವೇಶದ್ವಾರ ಬೃಹತ್‌ ಕಟ್ಟಡಗಳು ಮೈದಾನಗಳು, ಶಿಲಾ ಶಾಸನಗಳು, ವಾಸ್ತು ಶಿಲ್ಪ ಪ್ರತಿಬಿಂಬಿಸುವ ಸ್ಮಾರಕಗಳು ದಿಕ್ಕು ಕಾಣದೆ ಅನಾಥವಾಗಿವೆ. ಚಿತ್ರದುರ್ಗದ ಕೋಟೆಯಂತೆ ಗುಮ್ಮಾನಾಯಕನಪಾಳ್ಯ ಕೋಟೆ ರಾಜ್ಯದ ಇನ್ನೊಂದು ಪ್ರಮುಖ ಪ್ರವಾಸಿ ತಾಣವಾಗಿ ಅಭಿವೃದ್ಧಿ ಮಾಡಲು ಮನಸ್ಸು ಮಾಡಿ ಈಗಾಗಲೇ ಪಾಳ್ಯದ ಅಭಿವೃದ್ಧಿಗೆ 53ಲಕ್ಷ ರೂ. ಗಳನ್ನು ಸರಕಾರ ಬಿಡುಗಡೆ ಮಾಡಿದೆ. ಈ ಹಣದಲ್ಲಿ ಪುರಾತನ ಕಾಲದಂತೆ ಗಾರೆ ಉಪಯೋಗಿಸಿ ಕೋಟೆಯನ್ನು ಸಂರಕ್ಷ ಣೆ ಮಾಡಲು ಉದ್ದೇಶಿಸಲಾಗಿದೆ ಎಂದ ಅವರು, ಗ್ರಾಮದಲ್ಲಿ ರಾಮದೇವರ ದೇವಾಲಯದಲ್ಲಿ ಜಾನುವಾರುಗಳನ್ನು ಕಟ್ಟಿ ಹಾಕಲಾಗುವುದರ ಬಗ್ಗೆ ಬೇಸರ ವ್ಯಕ್ತಪಡಿಸಿದರು.
Author

LEAVE A REPLY

Please enter your comment!
Please enter your name here