ಚಾಮುಂಡೇಶ್ವರಿಯಲ್ಲಿ ನನ್ನನ್ನೇ ಸೋಲಿಸಿದ್ರು ಜನ: Siddaramaih

0
27

ಹರಪನಹಳ್ಳಿ: ತಮ್ಮ ನೆಚ್ಚಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪರಾಭವಗೊಂಡಿರುವುದು ಸಿದ್ದರಾಮಯ್ಯ ಅವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಈ ವಿಷಯ ಅವರನ್ನು ಸದಾ ಕಾಡುತ್ತಲೇ ಇದೆ.

ಚುನಾವಣೆ ಮುಗಿದು 6 ತಿಂಗಳಾದರೂ ಚಾಮುಂಡೇಶ್ವರಿಯಲ್ಲಿನ ಸೋಲು ಸಿದ್ದರಾಮಯ್ಯ ಅವರನ್ನು ಕಾಡುತ್ತಲೇ ಇದೆ.

ಹರಪನಹಳ್ಳಿಯಲ್ಲಿ ನಡೆದ ಎಂಪಿ. ರವೀಂದ್ರ ನುಡಿನಮನ ಕಾರ್ಯಕ್ರಮದಲ್ಲಿಯೂ ಸಿದ್ದರಾಮಯ್ಯ ತಮ್ಮ ಮನದಾಳದ ನೋವನ್ನು ಬಹಿರಂಗಪಡಿಸಿದರು.

ನುಡಿನಮನ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಸಿದ್ದರಾಮಯ್ಯ, ಅಭಿವೃದ್ಧಿ ಕಾರ್ಯಗಳಿಗೆ ಜನರು ಬೆಂಬಲ ನೀಡುವುದಿಲ್ಲ. ನಾನು ಮುಖ್ಯಮಂತ್ರಿಯಾಗಿದ್ದಾಗ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದೇ. ಅಂಥ ನನ್ನನ್ನೇ ಚಾಮುಂಡೇಶ್ವರಿಯಲ್ಲಿ ಜನ ಸೋಲಿಸಿಬಿಟ್ಟರು ಎಂದರು.

ಅಭಿವೃದ್ಧಿ ಯೋಜನೆಗಳಿಗೆ ಎಂದಿಗೂ ಜನ ಬೆಂಬಲಿಸುವುದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here