ಚಿಕ್ಕಬಳ್ಳಾಪುರ:  ನಡೆದಾಡುವ ದೇವರು, ತ್ರಿವಿಧ ದಾಸೋಹಿ ಸಿದ್ಧಗಂಗಾ ಮಠದ ಶಿವೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿಯವರ ಪುಣ್ಯಸ್ಮರಣೆ ಪ್ರಯುಕ್ತ ವೀರಶೈವ ಸಮಾಜ ಸೇರಿ ವಿವಿಧ ಸಂಘ-ಸಂಸ್ಥೆಗಳು ಹಾಗೂ ಸೇವಾ ಕಾರ್ಯಕರ್ತರು ಜಿಲ್ಲಾದ್ಯಂತ ಅನ್ನದಾಸೋಹ ಮೂಲಕ ಗುರುನಮನ ಸಲ್ಲಿಸಿದರು.

ವೀರಶೈವ ಸೇವಾ ಸಮಾಜದಿಂದ ನಗರದ ಹಳೇ ಬಸವನಗುಡಿಯಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಸಂಘದ ಗೌರವಾಧ್ಯಕ್ಷ ಬಿ.ಗಿರೀಶ್ ಮಾತನಾಡಿ, ಶ್ರೀಗಳು ಯಾವುದೇ ಜಾತಿ, ಧರ್ಮ, ಭೇದಭಾವವಿಲ್ಲದೆ ಅಕ್ಷರ, ಅನ್ನ ಮತ್ತು ಅರಿವನ್ನು ನೀಡುವ ಮೂಲಕ ತ್ರಿವಿಧ ದಾಸೋಹಿಗಳಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅನ್ನಸಂತರ್ಪಣೆ ಮೂಲಕ ಹಸಿದವರಿಗೆ ಅನ್ನವನ್ನಿಕ್ಕು ಎಂಬ ಶ್ರೀಗಳ ಸಂದೇಶ ಪಾಲಿಸಲಾಗುತ್ತಿದೆ ಎಂದರು. ಸಂಘದ ಜಿಲ್ಲಾಧ್ಯಕ್ಷ ಎಸ್.ರಾಜಶೇಖರ್, ಉಪಾಧ್ಯಕ್ಷ ಗುಬ್ಬಿ ಶೆಟ್ಟರ್, ಕಾರ್ಯದರ್ಶಿ ಪರಶಿವಯ್ಯ, ಸಂಘಟನಾ ಕಾರ್ಯದರ್ಶಿ ಬಿ.ಸಿದ್ದಪ್ಪ, ಖಜಾಂಚಿ ದೇವೇಂದ್ರ ಮತ್ತಿತರರಿದ್ದರು.

ನ್ಯಾಯಾಲಯ ರಸ್ತೆಯಲ್ಲಿ ಅನ್ನಸಂತರ್ಪಣೆ: ಜಿಲ್ಲಾ ನ್ಯಾಯಾಲಯದ ರಸ್ತೆಯಲ್ಲಿ ವ್ಯಾಪಾರಿಗಳು, ವಕೀಲರು ಅನ್ನಸಂತರ್ಪಣೆ ಕೈಗೊಂಡರು. ವಕೀಲ ಮಟಮಪ್ಪ ಮಾತನಾಡಿ, ಸಿದ್ಧಗಂಗಾ ಶ್ರೀಗಳು ಎಲ್ಲರ ಮನ ಗೆದ್ದ ವಿಶ್ವ ರತ್ನ ಎಂದು ಬಣ್ಣಿಸಿದರು. ವಕೀಲರಾದ ಜಿ.ಆರ್.ಹರಿಕುಮಾರ್, ಎಸ್.ಎನ್.ನಾಗರಾಜ್, ಎಚ್.ವಿ.ನಾರಾಯಣಪ್ಪ, ಎಚ್.ಎಂ.ಮಂಜುನಾಥ್, ತಿಮ್ಮಯ್ಯ, ಮುನಿಕೃಷ್ಣಪ್ಪ, ಸಮಾಜಸೇವಕರಾದ ಎಲೆಹಳ್ಳಿ ವೆಂಕಟೇಶ್, ಲಿಂಗಶೆಟ್ಟಿ ಪ್ರಕಾಶ್, ಚಿಕ್ಕಕಾಡಿಗೇನಹಳ್ಳಿ ಗಂಗಾಧರ್, ಮುನಿನಾರಾಯಣಪ್ಪ, ಮುನಿಯಪ್ಪ ಮತ್ತಿತರರಿದ್ದರು.

ಅಧಿಕಾರಿಗಳಿಂದ ಪರಿಶೀಲನೆ:  ಸುಳ್ವಾಡಿ ಮಾರಮ್ಮ ಮತ್ತು ಚಿಂತಾಮಣಿಯ ಅಮ್ಮ ಗಂಗಾಭವಾನಿ ದೇವಾಲಯ ಪ್ರಸಾದದ ದುರಂತ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳಾದ ಮಿತ್ರಣ್ಣ, ಹರೀಶ್ ನೇತೃತ್ವದ ತಂಡವು ಸಿದ್ಧಗಂಗಾ ಶ್ರೀಗಳ ಪುಣ್ಯಸ್ಮರಣೆ ಮತ್ತು ಅನ್ನಸಂತರ್ಪಣೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತು.

ಚಿಕ್ಕಬಳ್ಳಾಪುರದ ಭುವನೇಶ್ವರಿ ವೃತ್ತ, ಬಸವನಗುಡಿ, ಮಂಚನಬಲೆ ಸೇರಿ ಹಲವೆಡೆ ತೆರಳಿ ಸಂಘಟಕರ ಹೆಸರು, ಪ್ರಸಾದ ತಯಾರಕರ ಮಾಹಿತಿ ಪಡೆಯಿತು. ಹಾಗೆಯೇ ಪ್ರಸಾದದ ಸ್ಯಾಂಪಲ್ ಸಂಗ್ರಹಿಸಿತು. ಸ್ವಯಂ ಸೇವಾ ಸಂಸ್ಥೆ ಮತ್ತು ದಾನಿಗಳಿಗೆ ಪ್ರಸಾದ ವಿತರಣೆಗೆ ಪೂರ್ವಾನುಮತಿ, ಅಡುಗೆ ತಯಾರಿ ಸ್ಥಳದಲ್ಲಿ ಸಿಸಿ ಕ್ಯಾಮರಾ ಅಳವಡಿಕೆಗೆ ಮೊದಲೇ ಜಿಲ್ಲಾಡಳಿತ ಸೂಚಿಸಿತ್ತು. ಇದರಿಂದ ಆಯಾ ತಹಸೀಲ್ದಾರ್​ಗಳ ಅನುಮತಿ ಪಡೆದು ಸಂಘಟಕರು ಅನ್ನಸಂತರ್ಪಣೆ ಕೈಗೊಂಡಿದ್ದರು.

Summary
ಚಿಕ್ಕಬಳ್ಳಾಪುರ : ಅನ್ನಸಂತರ್ಪಣೆ ಮೂಲಕ ತ್ರಿವಿಧ ದಾಸೋಹಿಗೆ ಗುರುನಮನ !!
Article Name
ಚಿಕ್ಕಬಳ್ಳಾಪುರ : ಅನ್ನಸಂತರ್ಪಣೆ ಮೂಲಕ ತ್ರಿವಿಧ ದಾಸೋಹಿಗೆ ಗುರುನಮನ !!
Description
ಅಧಿಕಾರಿಗಳಿಂದ ಪರಿಶೀಲನೆ:  ಸುಳ್ವಾಡಿ ಮಾರಮ್ಮ ಮತ್ತು ಚಿಂತಾಮಣಿಯ ಅಮ್ಮ ಗಂಗಾಭವಾನಿ ದೇವಾಲಯ ಪ್ರಸಾದದ ದುರಂತ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳಾದ ಮಿತ್ರಣ್ಣ, ಹರೀಶ್ ನೇತೃತ್ವದ ತಂಡವು ಸಿದ್ಧಗಂಗಾ ಶ್ರೀಗಳ ಪುಣ್ಯಸ್ಮರಣೆ ಮತ್ತು ಅನ್ನಸಂತರ್ಪಣೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತು.

LEAVE A REPLY

Please enter your comment!
Please enter your name here