ಸ್ಯಾಂಡಲ್​ವುಡ್​ನ ಆ್ಯಕ್ಷನ್​ ಹೀರೋಗಳಲ್ಲಿ ನಟ ಚಿರಂಜಿವಿ ಸರ್ಜಾ ಕೂಡ ಒಬ್ಬರು. ವಿಭಿನ್ನ ಲುಕ್‌, ಮ್ಯಾನರಿಸಂ ಖಡಕ್‌ ಡೈಲಾಗ್​ನಿಂದ ಫೇಮಸ್ ಆಗಿರೋ ಚಿರು, ಸದ್ಯ ತಮ್ಮ ಬತ್ತಳಿಕೆಯಲ್ಲಿ ಹಲವಾರು ಸಿನಿಮಾಗಳನ್ನು ಇಟ್ಟುಕೊಂಡಿದ್ದಾರೆ. ನೆನ್ನೆಯಷ್ಟೇ ಟಿ.ಎಸ್.ನಾಗಾಭರಣ ನಿರ್ದೇಶನದ ‘ಜುಗಾರಿ ಕ್ರಾಸ್’ ಮುಹೂರ್ತ ಅದ್ಧೂರಿಯಾಗಿ ನಡೆಯಿತು. ಇನ್ನು ‘ಸಿಂಗ’ನಾಗಿಯೂ ಅಬ್ಬರಿಸೋಕೆ ರೆಡಿಯಾಗಿರೋ ಚಿರು ಬೊಂಬಾಟಾಗಿರೋ ಮತ್ತೊಂದು ಸುದ್ದಿ ಕೊಟ್ಟಿದ್ದಾರೆ.
‘ಸಿಂಗ’ನ ಜೊತೆ ‘ಖಾಕಿ’ ಅಬ್ಬರ..!
‘ಜುಗಾರಿ ಕ್ರಾಸ್’ ಸಿನಿಮಾ ಮುಹೂರ್ತದ ಖುಷಿಯ ಬೆನ್ನಲ್ಲೆ ಚಿರು ಮತ್ತೊಂದು ಸಿನಿಮಾ ಸೆಟ್ಟೇರುತ್ತಿದೆ. ನವೀನ್ ರೆಡ್ಡಿ ನಿರ್ದೇಶನದಲ್ಲಿ ‘ಖಾಕಿ’ ಅನ್ನೋ ಸಿನಿಮಾವೊಂದು ಸೆಟ್ಟೇರುತ್ತಿದ್ದು, ಆ ಚಿತ್ರದ ಟೈಟಲ್​ ರಿಲೀಸ್ ಆಗಿದೆ. ವಿಕ್ಟರಿ-2′ ಚಿತ್ರ ನಿರ್ಮಿಸಿದ್ದ ತರುಣ್​ ಶಿವಪ್ಪ ‘ಖಾಕಿ’ ಸಿನಿಮಾಗೂ ಬಂಡವಾಳ ಹೂಡುತ್ತಿದ್ದಾರೆ. ಈಗಾಗಲೇ ಬ್ಯಾಕ್​ ಟು ಬ್ಯಾಕ್ ಸಿನಿಮಾಗಳಲ್ಲಿ ಕಾಣಿಸಿಕೊಳ್ತಿರೋ ಚಿರು ‘ಖಾಕಿ‘ ಸಿನಿಮಾದ ಮೂಲಕ ಖದರ್ ತೋರಿಸೋಕೆ ರೆಡಿಯಾಗಿದ್ದಾರೆ. ಅಂದ್ಹಾಗೆ ನಾಳೆ ಸಿನಿಮಾದ ಮುಹೂರ್ತ ನಡೆಯಲಿದೆ. ತಾರಾಗಣದಲ್ಲಿ ಯಾಱರು ಇರಲಿದ್ದಾರೆ ಎಂಬುದು ನಾಳೆ ಗೊತ್ತಾಗಲಿದೆ.

Summary
ಚಿರಂಜೀವಿ ಸರ್ಜಾ ಇನ್ಮುಂದೆ ಪೊಲೀಸ್ ಅಧಿಕಾರಿ..?
Article Name
ಚಿರಂಜೀವಿ ಸರ್ಜಾ ಇನ್ಮುಂದೆ ಪೊಲೀಸ್ ಅಧಿಕಾರಿ..?

LEAVE A REPLY

Please enter your comment!
Please enter your name here