ಬೆಂಗಳೂರು: ಜನವರಿ 16ರೊಳಗೆ ಕ್ಯಾಬ್, ಟ್ಯಾಕ್ಸಿಗಳಲ್ಲಿರುವ ಚೈಲ್ಡ್ ಲಾಕ್‌ಗಳನ್ನು ತೆಗೆಯುವಂತೆ ಸರ್ಕಾರ ಆದೇಶಿಸಿದೆ. ಕರ್ನಾಟಕ ಮೋಟಾರು ವಾಹನ ಕಾಯ್ದೆಯ ತಿದ್ದುಪಡಿಯಲ್ಲಿ ಚೈಲ್ಡ್ ಲಾಕ್ ವ್ಯವಸ್ಥೆ ರದ್ದುಗೊಳಿಸುವಂತೆ ತಿಳಿಸಲಾಗಿದೆ. ಸಾರಿಗೆ ಇಲಾಖೆ ಅಧಿಕಾರಿಗಳು ಹೇಳಿರುವ ಮಾಹಿತಿ ಪ್ರಕಾರ ಹೊಸದಾಗಿ ನೋಂದಣಿಯಾಗುವ ಟ್ಯಾಕ್ಸಿಗಳು ಹಾಗೆಯೇ ಪ್ರಸ್ತುತ ಇರುವ ಟ್ಯಾಕ್ಸಿಗಳಿಗೂ ಕೂಡ ಅನ್ವಯವಾಗುತ್ತದೆ. ಜನವರಿ 16ರ ಬಳಿಕ ನಿಯಮ ಪಾಲಿಸದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಆಟೋಮೊಬೈಲ್ ಕಂಪನಿಗಳು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಚೈಲ್ಡ್ ಲಾಕ್ ವ್ಯವಸ್ಥೆ ಆರಂಭಿಸಿದ್ದರು. ಆದರೆ ಅದರ ದುರುಪಯೋಗವಾಗುತ್ತಿರುವ ಕಾರಣ ಆ ವ್ಯವಸ್ಥೆಯನ್ನು ರದ್ದುಪಡಿಸಲಾಗಿದೆ.

ಎಲ್ಲಾ ಕ್ಯಾಬ್ ಡ್ರೈವರ್ ಗಳಿಗೆ ಚೈಲ್ಡ್ ಲಾಕ್ ತೆಗೆಸುವಂತೆ ನೋಟಿಸ್ ನೀಡಲಾಗಿದೆ ಎಂದು ಹೈಕೋರ್ಟ್ ಬಳಿ ಸರ್ಕಾರ ಹೇಳಿಕೆ ನೀಡಿದೆ. ಅಧಿಸೂಚನೆಯಲ್ಲೇನಿದೆ? ಅ.9 ರಂದು ಹೊರಡಿಸಿರುವ ಅಧಿಸೂಚನೆಯಲ್ಲಿ ಕರ್ನಾಟಕ ಮೋಟಾರು ವಾಹನಗಳ ಕಾಯ್ದೆ 1988ರ ಕಲಂ(25)ರಲ್ಲಿ ವ್ಯಾಖ್ಯಾನಿಸಿರುವ ಸಾರಿಗೆ ವಾಹನ ವರ್ಗದ ಮೋಟಾರ್ ಕ್ಯಾಬ್ಸ್ ವಾಹನಗಳಲ್ಲಿ ಚೈಲ್ಡ್ ಲಾಕ್ ವ್ಯವಸ್ಥೆಯನ್ನು ನಿಷ್ಕ್ರಿಯಗೊಳಿಸತಕ್ಕದ್ದು, ತಪ್ಪಿದಲ್ಲಿ ಅಂತಹ ವಾಹನಗಳ ರಹದಾರಿ ನೀಡುವ, ನವೀಕರಿಸುವ ಮತ್ತು ಅರ್ಹತಾ ಪತ್ರ ನೀಡುವ, ನವೀಕರಣ ಮಂಜೂರು ಮಾಡುವಂತಿಲ್ಲ.

Summary
ಜನವರಿ 16ರೊಳಗೆ ಕ್ಯಾಬ್, ಟ್ಯಾಕ್ಸಿಗಳಲ್ಲಿರುವ ಚೈಲ್ಡ್ ಲಾಕ್‌ಗಳನ್ನು ತೆಗೆಯುವಂತೆ ಸರ್ಕಾರ ಆದೇಶಿಸಿದೆ.
Article Name
ಜನವರಿ 16ರೊಳಗೆ ಕ್ಯಾಬ್, ಟ್ಯಾಕ್ಸಿಗಳಲ್ಲಿರುವ ಚೈಲ್ಡ್ ಲಾಕ್‌ಗಳನ್ನು ತೆಗೆಯುವಂತೆ ಸರ್ಕಾರ ಆದೇಶಿಸಿದೆ.
Description
ಎಲ್ಲಾ ಕ್ಯಾಬ್ ಡ್ರೈವರ್ ಗಳಿಗೆ ಚೈಲ್ಡ್ ಲಾಕ್ ತೆಗೆಸುವಂತೆ ನೋಟಿಸ್ ನೀಡಲಾಗಿದೆ ಎಂದು ಹೈಕೋರ್ಟ್ ಬಳಿ ಸರ್ಕಾರ ಹೇಳಿಕೆ ನೀಡಿದೆ. ಅಧಿಸೂಚನೆಯಲ್ಲೇನಿದೆ? ಅ.9 ರಂದು ಹೊರಡಿಸಿರುವ ಅಧಿಸೂಚನೆಯಲ್ಲಿ ಕರ್ನಾಟಕ ಮೋಟಾರು ವಾಹನಗಳ ಕಾಯ್ದೆ 1988ರ ಕಲಂ(25)ರಲ್ಲಿ ವ್ಯಾಖ್ಯಾನಿಸಿರುವ ಸಾರಿಗೆ ವಾಹನ ವರ್ಗದ ಮೋಟಾರ್ ಕ್ಯಾಬ್ಸ್ ವಾಹನಗಳಲ್ಲಿ ಚೈಲ್ಡ್ ಲಾಕ್ ವ್ಯವಸ್ಥೆಯನ್ನು ನಿಷ್ಕ್ರಿಯಗೊಳಿಸತಕ್ಕದ್ದು, ತಪ್ಪಿದಲ್ಲಿ ಅಂತಹ ವಾಹನಗಳ ರಹದಾರಿ ನೀಡುವ, ನವೀಕರಿಸುವ ಮತ್ತು ಅರ್ಹತಾ ಪತ್ರ ನೀಡುವ, ನವೀಕರಣ ಮಂಜೂರು ಮಾಡುವಂತಿಲ್ಲ.

LEAVE A REPLY

Please enter your comment!
Please enter your name here