ಇಚಲಕರಂಜಿ : ನಗರದಲ್ಲಿ ಜರ್ಮನಿ ಗ್ಯಾಂಗ್‌ನ ಹೆಸರಿನಲ್ಲಿ ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸುವುದರೊಂದಿಗೆ ಹಾಡಹಗಲೇ ಮಾರಕಾಸ್ತ್ರಗಳನ್ನು ಹಿಡಿದು ತಿರುಗಾಡುತ್ತಿದ್ದ ಒಬ್ಬ ಅಪ್ರಾಪ್ತ ಸೇರಿ ನಾಲ್ವರನ್ನು ಶಿವಾಜಿನಗರ ಪೋಲಿಸರು ವಶಕ್ಕೆ ಪಡೆದಿದ್ದಾರೆ, 

ಆನಂದ ಶೇಖರ ಜಾಧವ ಉರ್ಫ್‌ ಜರ್ಮನಿ(21) ರೂಪೇಶ ಪಂಡಿತ ನರವಾಡೆ (22) ಅಕ್ಷ ಯ ಅಶೋಕ ಕುಂಡುಗಳೆ (20) ಬಂಧಿತರು. 

ಗುರುವಾರ ಮಧ್ಯಾಹ್ನ ಹವಾಲ್ದಾರ್‌ ಮಹೇಶ ಕೋರೆಯವರಿಗೆ ಸಿಕ್ಕ ಸುಳಿವನ್ನಾಧರಿಸಿ ವಾಕರೆಕರ ಮಳಾ-ಕಬನೂರ ರಸ್ತೆಯಲ್ಲಿ ತಿರುಗುತ್ತಿದ್ದ ಆರೋಪಿತರನ್ನು ವಶಕ್ಕೆ ಪಡೆಯಲಾಯಿತು. ಆರೋಪಿಗಳಿಂದ ಮೂರು ಕಬ್ಬಿಣದ ಕುಡುಗೋಲು, ಒಂದು ಬಡಿಗೆ ಸೇರಿದಂತೆ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಹಾಯಕ ಪೊಲೀಸ್‌ ನಿರೀಕ್ಷ ಕ ಸತೀಶ ಶಿಂಧೆ ತಿಳಿಸಿದ್ದಾರೆ. 

ಆರೋಪಿತರು ಸಾರ್ವಜನಿಕರನ್ನು ಅಡ್ಡಗಟ್ಟಿ ಹಣ, ಬಂಗಾರ ಲೂಟಿ ಮಾಡುತ್ತಿದ್ದುದಾಗಿ ಅವರು ತಿಳಿಸಿದ್ದಾರೆ. ಇವರೆಲ್ಲ ಈಗಾಗಲೇ ಕಳ್ಳತನ, ಕೊಲೆ, ಲೂಟಿ, ಮನೆಗಳ್ಳತನಗಳ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂದು ಸತೀಶ ಶಿಂದೆ ತಿಳಿಸಿದ್ದಾರೆ. 

ಬಂಧನ ಕಾರ್ಯಾಚರಣೆಯಲ್ಲಿ ಪೊಲೀಸ್‌ ಸಿಬ್ಬಂದಿ ಅಮೋಲ ಮಾಳಿ, ವೈಭವ ದಡ್ಡೀಕರ, ಶೆಹನಾಜ ಕನವಾಡೆ, ರಣಜಿತ್‌ ಪಾಟೀಲ, ವಿಜಯ ತಳಸಕರ, ರಾಜು ಪಟ್ಟಣಕುಡೆ, ಸಾಗರ ಪಾಟೀಲ ಅಜಿಂಕ್ಯ ಘಾಟಗೆ ಭಾಗವಹಿಸಿದ್ದರು. 

LEAVE A REPLY

Please enter your comment!
Please enter your name here