ಹುಮನಾಬಾದ್‌ :ಬೀದರ್‌ ಹಿಂದುಳಿದ ಜಿಲ್ಲೆ ಎಂಬ ಶಾಪದಿಂದ ಮುಕ್ತವನ್ನಾಗಿ ಮಾಡಲು ರಾಜ್ಯದ ಸಮ್ಮಿಶ್ರ ಸರಕಾರ ಬದ್ಧವಾಗಿದೆ ಎಂದು ಸಚಿವ ರಾಜಶೇಖರ ಪಾಟೀಲ ಹೇಳಿದರು.

ತಾಲೂಕಿನ ಹಳ್ಳಿಖೇಡ(ಕೆ) ಗ್ರಾಮದಲ್ಲಿ ಬುಧವಾರ ಆಯೋಜಿಸಿದ ಹಳ್ಳಿಖೇಡ(ಕೆ) ವಲಯ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ, ಜಿಲ್ಲೆಯ ಮೂವರು ಸಚಿವರು ಸೇರಿ, ಎಲ್ಲರೂ ಅಧಿಕಾರ ಅವಧಿಯಲ್ಲಿ ಜಿಲ್ಲೆಯ ಸಮಗ್ರ ಚಿತ್ರಣವನ್ನು ಬದಲಿಸುವ ದೃಷ್ಟಿಕೋನ ಹೊಂದಲಾಗಿದೆ ಎಂದರು.

ರಾಜ್ಯದಲ್ಲಿ ಕನ್ನಡಕ್ಕೆ ಮೊದಲು ಆದ್ಯತೆ ನೀಡಬೇಕು, ನೆಲ, ಜಲದ ವಿಷಯ ಬಂದಾಗ ಎಲ್ಲರೂ ಒಂದಾಗಿ ಹೋರಾಡಬೇಕು. ಕನ್ನಡವನ್ನು ಉಳಿಸಿ ಬೆಳೆಸಲು ರಾಜ್ಯ ಸರಕಾರ ಸದಾ ಮುಂದಿದೆ ಎಂದರು.

ವಿಶ್ರಾಂತ ಪ್ರಾಚಾರ್ಯ ಡಾ.ವಿ.ಜಿ ಪೂಜಾರ ಮಾತನಾಡಿ, ವಚನ ಸಾಹಿತ್ಯ ಕನ್ನಡ ಸಾಹಿತ್ಯಲೋಕದ ಕಣ್ಣು ಇದ್ದಂತೆ. ಸ್ತ್ರೀ ಸಮಾನñಗಾಗಿ ವಚನ ಸಾಹಿತ್ಯ ವಿಶ್ವಕ್ಕೆ ನೀಡಿದ ಕೊಡುಗೆ ಅಪಾರ ಎಂದು ಶ್ಲಾಘಿಸಿದರು.

ಬಸವಾದಿ ಶರಣರು ಕೇವಲ ಇಷ್ಟಲಿಂಗ ಪೂಜೆ ಮಾತ್ರಕ್ಕೆ ಸೀಮಿತವಾಗದೆ ಕಾಯಕ, ದಾಸೋಹದ ಜೊತೆ ಬಡವರ ಕಾಳಜಿ ಹೊಂದಿದ್ದರು ಎಂದರು.

ಸಮ್ಮೇಳನದ ಅಧ್ಯಕ್ಷ ಡಾ.ಚಿದಾನಂದ ಚಿಕ್ಕಮಠ, ವಿಧಾನ ಪರಿಷತ ಸದಸ್ಯ ಡಾ.ಚಂದ್ರಶೇಖರ ಪಾಟೀಲ, ಶ್ರೀ ರಾಜೇಶ್ವರ ಶಿವಚಾರ್ಯರು, ಜಿಪಂ ಅಧ್ಯಕ್ಷೆ ಭಾರತಬಾಯಿ ಶೇರಿಕಾರ, ಶ್ರೀ ಚರಮೂರ್ತಿ ಸಿದ್ದರಾಮ ದೇವರು,ಕಸಾಪ ಜಿಲಾಧ್ಯಕ್ಷ ಸುರೇಶ ಚನ್ನಶಟ್ಟಿ, ತಾಲೂಕಾಧ್ಯಕ್ಷ ಸಚ್ಚಿದಾನಂದ ಮಠಪತಿ, ತಾಪಂ ಸದಸ್ಯ ನಾಗೇಶ ಕಲ್ಲೂರ, ಗ್ರಾಪಂ ಅಧ್ಯಕ್ಷ ದೇವೆಂದ್ರಪ್ಪಾ ಪೋಲಾ, ಉಪಾಧ್ಯಕ್ಷ ಶಿವಕುಮಾರ, ಪ್ರಮುಖರಾದ ರವೀಂದ್ರರೆಡ್ಡಿ ಪಾಟೀಲ, ಮುರುಗೇಂದ್ರ ಸಜ್ಜನಶಟ್ಟಿ, ನಾಗುಬಾಯಿ ದೊಡ್ಡಮನಿ ಮತ್ತಿತರರು ಇದ್ದರು.

ಗ್ರಾಪಂ ಮಾಜಿ ಅಧ್ಯಕ್ಷ ಹಾಗೂ ಸಮ್ಮೇಳನ ಸ್ವಾಗತ ಸಮಿತಿಯ ಅಧ್ಯಕ್ಷ ಸುಭಾಷ ವಾರದ ಸ್ವಾಗತಿಸಿದರು. ವಲಯ ಅಧ್ಯಕ್ಷ ಸದಾಶಿವಯ್ಯಾ ಹಿರೇಮಠ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷ ಕಿ ಭುವನೇಶ್ವರಿ ನಿರೂಪಿಸಿದರು, ವಲಯ ಕಸಾಪ ಗೌರವ ಅಧ್ಯಕ್ಷ ಭಕ್ತರಾಜ ಚಿಪ್ಪಾಪೂರೆ ವಂದಿಸಿದರು.

ಜಾನಪದ ಗೀತೆಗಳು 

ರಾಜೇಶ್ವರ ಶಿವಾಚಾರ್ಯರು ಮಾತನಾಡಿ, ಗೀಗೀ ಪದ, ಜೋಗುಳ, ಗೊಂದಳ ಪದ ಇತ್ಯಾದಿಗಳು ನಮ್ಮ ಉನ್ನತ ಸಂಸ್ಕೃತಿಯ ಪ್ರತೀಕವಾಗಿದ್ದು, ಇವುಗಳು ಮಾಯವಾಗುವ ಹಂತಕ್ಕೆ ತಲುಪಿರುವುದು ದುದೈರ್‍ವದ ಸಂಗತಿಯಾಗಿದೆ ಎಂದರು.

ವೈಜ್ಞಾನಿಕ ಭಾಷೆಯಾಗಿರುವ ಕನ್ನಡವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲೆ ಇದೆ ಎಂದರು.

ಈ ಭಾಗದಲ್ಲಿ ನಮ್ಮವರನ್ನೆ ನಾವು ಟೀಕೆ ಮಾಡುವ ಪ್ರವೃತ್ತಿ ಹೆಚ್ಚಾಗಿರುವ ಕಾರಣ, ಇದು ಕೂಡ ನಮ್ಮ ಹಿಂದುಳಿಕೆಗೆ ಕಾರಣವಾಗಿದೆ. ಹೀಗಾಗಿ ಈ ಭಾಗಕ್ಕೆ ಹೆಚ್ಚಿನ ಅಧಿಕಾರ ಸಿಕ್ಕಿಲ್ಲಾ ಎಂದು ಬೇಸರ ವ್ಯಕ್ತೊಡಿಸಿದರು.

Summary
ಜಿಲ್ಲೆ ಶಾಪ ಮುಕ್ತಗೊಳಿಸಲು ಸರಕಾರ ಬದ್ಧ!
Article Name
ಜಿಲ್ಲೆ ಶಾಪ ಮುಕ್ತಗೊಳಿಸಲು ಸರಕಾರ ಬದ್ಧ!
Description
ರಾಜೇಶ್ವರ ಶಿವಾಚಾರ್ಯರು ಮಾತನಾಡಿ, ಗೀಗೀ ಪದ, ಜೋಗುಳ, ಗೊಂದಳ ಪದ ಇತ್ಯಾದಿಗಳು ನಮ್ಮ ಉನ್ನತ ಸಂಸ್ಕೃತಿಯ ಪ್ರತೀಕವಾಗಿದ್ದು, ಇವುಗಳು ಮಾಯವಾಗುವ ಹಂತಕ್ಕೆ ತಲುಪಿರುವುದು ದುದೈರ್‍ವದ ಸಂಗತಿಯಾಗಿದೆ ಎಂದರು.  ವೈಜ್ಞಾನಿಕ ಭಾಷೆಯಾಗಿರುವ ಕನ್ನಡವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲೆ ಇದೆ ಎಂದರು.  ಈ ಭಾಗದಲ್ಲಿ ನಮ್ಮವರನ್ನೆ ನಾವು ಟೀಕೆ ಮಾಡುವ ಪ್ರವೃತ್ತಿ ಹೆಚ್ಚಾಗಿರುವ ಕಾರಣ, ಇದು ಕೂಡ ನಮ್ಮ ಹಿಂದುಳಿಕೆಗೆ ಕಾರಣವಾಗಿದೆ. ಹೀಗಾಗಿ ಈ ಭಾಗಕ್ಕೆ ಹೆಚ್ಚಿನ ಅಧಿಕಾರ ಸಿಕ್ಕಿಲ್ಲಾ ಎಂದು ಬೇಸರ ವ್ಯಕ್ತೊಡಿಸಿದರು. 

LEAVE A REPLY

Please enter your comment!
Please enter your name here