ನಮ್ಮಲ್ಲಿ ಟಿಪ್ಪು ರಕ್ತ ಹರಿಯುತ್ತಿಲ್ಲ…
ಸ್ವಾತಂತ್ರ್ಯ ಯೋಧರ ರಕ್ತ ಹರಿಯುತ್ತಿದೆ ಟಿಪ್ಪು ಜಯಂತಿಯಿಂದಲೆ ಕೊಲೆ ಸುಲಿಗೆಗೆಗಳು ನಡೆಯುತ್ತಿವೆ ಎಂದು ಆಕ್ರೋಶ ಹೊರಹಾಕಿದರು.

ಬಾಗಲಕೋಟೆ ‌ಜಿಲ್ಲೆ ಬೀಳಗಿ‌ಮತಕ್ಷೇತ್ರ ವ್ಯಾಪ್ತಿ ಕಳಸಕೊಪ್ಪ ಕೆರೆಗೆ ಬಾಗೀನ ಅರ್ಪಿಸಿದ ವೇಳೆ ಮಾತನಾಡಿದ ಈಶ್ವರಪ್ಪ,

ಟಿಪ್ಪು ಜಯಂತಿ ಮಾಡಿ ಅಂತ ಯಾರೂ ಹೇಳಿದ್ದಿಲ್ಲ ಆದರೆ ಕಾಂಗ್ರೆಸ್ ಸರಕಾರ ವಿವಾದ ಹುಟ್ಟು ಹಾಕಿತು ಎಂದರು.

ಇನ್ನು ಸಿಎಂ ಕುಮಾರಸ್ವಾಮಿಗೆ ನಿಲುವೇ ಇಲ್ಲ…
ದ್ವಂದ್ವ ಎಲ್ಲಿಂದ ಬಂತು? ಎಂದು ಪ್ರಶ್ನಿಸಿದ ಕೆ ಎಸ್ ಈಶ್ವರಪ್ಪ,

ಈ ಹಿಂದೆ ಕುಮಾರಸ್ವಾಮಿ ಸಿಎಂ ಆದರೆ ಟಿಪ್ಪು ಜಯಂತಿ ಆಚರಿಸಲ್ಲ ಅಂದಿದ್ರು….ಕಳೆದ ಟಿಪ್ಪು ಜಯಂತಿ ವೇಳೆ ನಡೆದ ಗಲಾಟೆ ವೇಳೆ ಮೃತಪಟ್ಟಿದ್ದ ವ್ಯಕ್ತಿ ಮನೆಗೆ ಹೋಗಿದ್ದಾಗ ಕುಮಾರಸ್ವಾಮಿ ಈ ಮಾತು ಹೇಳಿದ್ರು ಎಂದರು.

ಇನ್ನು
ಟಿಪ್ಪು ಜಯಂತಿ ಆಚರಣೆ ವಿರೋಧಿಸಿ, ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ….ಅದೃಷ್ಟವೋ ದುರಾದೃಷ್ಟವೋ ಕುಮಾರಸ್ವಾಮಿ ಸಿಎಂ ಆಗಿ, ಮುಂದುವರೆಯುತ್ತಿದ್ದಾರೆ.

ಮೊನ್ನೆ ನಡೆದ ಉಪ ಚುನಾವಣೆಯಲ್ಲಿ ಅವರಿಗೆ ಒಳ್ಳೆಯದಾಗಿದೆ, ಆಗಲಿ ಎಂದರು.

ಇದೆ ವೇಳೆ ಮಾತನಾಡಿದ ಈಶ್ವರಪ್ಲ,ಬೆಳಗಾವಿ ಅಧಿವೇಶನದಲ್ಲಿ ಮಹಾದಾಯಿ ಕುರಿತು ಬಿಜೆಪಿ ಹೋರಾಟ ನಡೆಸಲಿದೆ ನ್ಯಾಯಾಧೀಕರಣದ ತೀರ್ಪು ಬಂದು, ನೀರು ಬಳಕೆಗೆ ಅವಕಾಶ ಇದೆ…ಆದರೆ, ರಾಜ್ಯ ಸರ್ಕಾರ ಒಂದು ಹೆಜ್ಜೆಯೂ ಮುಂದೆ ಇಟ್ಟಿಲ್ಲ ಇದನ್ನು ವಿರೋಧಿಸಿ, ಬೆಳಗಾವಿ ಅಧಿವೇಶನದಲ್ಲಿ ಚರ್ಚೆ ಮಾಡ್ತೇವೆ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಶಾಸಕರು ಹೋರಾಟ ಮಾಡುತ್ತೇವೆ ಎಂದರು.

ಬಿಜೆಪಿ ಸರ್ಕಾರ ಇದ್ದಾಗ ನಾನು ಜಲಸಂಪನ್ಮೂಲ ಸಚಿವನಾಗಿ ಮಹಾದಾಯಿ ಯೋಜನೆಗೆ ಚಾಲನೆ ನೀಡಿದ್ದೆ ಎಂದು ಹೇಳಿಕೊಂಡರು.
ಆದರೆ ಬಾಗೀನ ಅರ್ಪಣೆ ವೇಳೆ ಶೂ ಹಾಕಿಕೊಂಡೇ ಬಾಗೀನ ಅರ್ಪಿಸಿ ಯಡವಟ್ಟು ಮಾಡಿಕೊಂಡಿದ್ದಾರೆ.ಶೂ ಹಾಕಿಕೊಂಡೇ ಗಂಗಾಮಾತೆಗೆ ಪೂಜೆ ಸಲ್ಲಿಸಿ, ದೀಪ ಬೆಳಗಿದ ಈಶ್ವರಪ್ಪ…
ಮಾಜಿ ಸಚಿವ, ಶಾಸಕ ಮುರುಗೇಶ್ ಬಂದು ಶೂ ಬಿಚ್ಚಿ ಅಂತ ಪಿಸುಗುಟ್ಟಿದರೂ ಶೂ ಬಿಚ್ಚದೆ ಹಾಗೆ ಬಾಗೀನ‌ ಅರ್ಪಿಸಿದರು.

LEAVE A REPLY

Please enter your comment!
Please enter your name here