ಬೆಂಗಳೂರು : ಟಿಪ್ಪು ಜಯಂತಿ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಮುಸ್ಲಿಂ ಧರ್ಮಗುರುಗಳು ಸನ್ಮಾನ ಮಾಡಿದ್ದಾರೆ.

ಸಿದ್ದರಾಮಯ್ಯರ ಕಾವೇರಿ ನಿವಾಸಕ್ಕೆ ತೆರಳಿದ ಮುಸ್ಲಿಂ ಧರ್ಮ ಗುರುಗಳು, ಬೆಳ್ಳಿ ಖಡ್ಗ, ಬೆಳ್ಳಿ ಹಾರ, ಪೇಟ ತೊಡಿಸಿ ಸನ್ಮಾನ ಮಾಡಿದರು. ಈ ವೇಳೆ ಸಚಿವ ಜಮೀರ್ ಅಹ್ಮದ್ ಖಾನ್ ಉಪಸ್ಥಿತರಿದ್ದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿದ್ದರಾಮಯ್ಯ, ರಾಜಕೀಯ ಕಾರಣಗಳಿಗೆ ಬಿಜೆಪಿ ಟಿಪ್ಪು ಜಯಂತಿ ವಿರೋಧಿಸುತ್ತಿದೆ. ಬಿಜೆಪಿ ನಾಯಕರು ಟಿಪ್ಪು ಖಡ್ಗ ಹಿಡಿದು, ಪೇಟ ತೊಟ್ಟಿದ್ದರು. ಆಗ ಇವರ್ಯಾರು ವಿರೋಧ ಮಾಡಲಿಲ್ಲ. ಟಿಪ್ಪು ಪುಸ್ತಕಕ್ಕೆ ಜಗದೀಶ್ ಶೆಟ್ಟರ್ ಅವರೇ ಮುನ್ನುಡಿ ಬರೆದಿದ್ದಾರೆ. ಇವರೆಲ್ಲಾ ಟಿಪ್ಪು ಬಗ್ಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಟಿಪ್ಪು ಕಾಲದಲ್ಲಿ ಸಾಮರಸ್ಯ ಇತ್ತು ಎಂದರು.

LEAVE A REPLY

Please enter your comment!
Please enter your name here