ಮಂಗಳೂರು: ಮಂಗಳೂರು ಮೂಲದ ವೈದ್ಯೆ ಡಾ.ಸಲ್ಮಾ ಸುಹಾನಾ ಅವರು ಅಮೆರಿಕನ್‌ ಅಕಾಡೆಮಿ ಆಫ್‌ ನ್ಯೂರಾಲಜಿ ಸಂಸ್ಥೆಯ ಪ್ರತಿಷ್ಠಿತ ಅಂತಾರಾಷ್ಟ್ರೀಯ ಸ್ಕಾಲರ್‌ಶಿಪ್‌ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಸ್ತುತ ಇವರು ದಾವಣಗೆರೆಯ ಎಸ್‌ಎಸ್‌ಐಎಂಎಸ್ ಆಂಡ್‌ ಆರ್‌ಸಿ ವೈದ್ಯಕೀಯ ಕಾಲೇಜಿನಲ್ಲಿ ನ್ಯೂರಾಲಜಿ “ಸೂಪರ್‌ ಸ್ಪೆಷಾಲಿಟಿ’ ಕುರಿತು ವ್ಯಾಸಂಗ ಮಾಡುತ್ತಿದ್ದಾರೆ.

ಅಕಾಡೆಮಿಯು ಡಾ.ಸಲ್ಮಾ ಸುಹಾನಾರ ‘ಸೆರೆಬ್ರಲ್ ವೀನಸ್ ಥ್ರೊಂಬೋಸಿಸ್’ ಕುರಿತ ಅಧ್ಯಯನವನ್ನು ಗುರುತಿಸಿ ಫಿಲಡೆಲ್ಫಿಯಾದಲ್ಲಿ ನಡೆಯಲಿರುವ ಜಾಗತಿಕ ನರರೋಗ ತಜ್ಞರ ಸಮಾವೇಶದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಿದೆ.

ಈ ಹಿಂದೆ ಸಲ್ಮಾ ಸುಹಾನಾ ಅವರು ಮಂಗಳೂರಿನ ಫಾದರ್‌ ಮುಲ್ಲರ್ ಮೆಡಿಕಲ್ ಕಾಲೇಜಿನಲ್ಲಿ ಅತ್ಯುತ್ತಮ ವೈದ್ಯಕೀಯ ವಿದ್ಯಾರ್ಥಿಯೆಂದು ಪರಿಗಣಿಸಲ್ಪಟ್ಟು ಚಿನ್ನದ ಪದಕ ಪಡೆದಿದ್ದರು.

ಅಷ್ಟೇ ಅಲ್ಲ, ರಾಜೀವ್‌ ಗಾಂಧಿ ಆರೋಗ್ಯ ವಿವಿಯಲ್ಲಿ ಎರಡು ಚಿನ್ನದ ಪದಕಗಳೊಂದಿಗೆ ಎಂಬಿಬಿಎಸ್ ಪದವಿ, ಬೆಂಗಳೂರಿನ ಕೆಂಪೇಗೌಡ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್ ಸೈನ್ಸ್ ನಲ್ಲಿ ಜನರಲ್‌ ಮೆಡಿಸಿನ್‌ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.

ಡಾ ಸಲ್ಮಾ ಅವರು ಸೌದಿ ಅರೇಬಿಯಾದ ಖಸಿಂ ಯುನಿವರ್ಸಿಟಿಯ ದಂತ ವೈದ್ಯಕೀಯ ವಿಭಾಗದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್‌ ಆಗಿರುವ ಡಾ ಶಕಿಲ್ ಎಂ. ಅವರ ಪತ್ನಿ ಹಾಗೂ ನಿವೃತ್ತ ಡೆಪ್ಯುಟಿ ಡೈರೆಕ್ಟರ್‌ ಖಾಲಿದ್ ತಣ್ಣೀರುಬಾವಿ ಅವರ ಪುತ್ರಿ.

Summary
ಡಾ.ಸಲ್ಮಾ ಸುಹಾನಾ ಅಮೆರಿಕನ್ ಅಕಾಡೆಮಿ ಆಫ್ ನ್ಯೂರಾಲಜಿ ಪ್ರಶಸ್ತಿಗೆ ಆಯ್ಕೆ
Article Name
ಡಾ.ಸಲ್ಮಾ ಸುಹಾನಾ ಅಮೆರಿಕನ್ ಅಕಾಡೆಮಿ ಆಫ್ ನ್ಯೂರಾಲಜಿ ಪ್ರಶಸ್ತಿಗೆ ಆಯ್ಕೆ
Description
ಅಷ್ಟೇ ಅಲ್ಲ, ರಾಜೀವ್‌ ಗಾಂಧಿ ಆರೋಗ್ಯ ವಿವಿಯಲ್ಲಿ ಎರಡು ಚಿನ್ನದ ಪದಕಗಳೊಂದಿಗೆ ಎಂಬಿಬಿಎಸ್ ಪದವಿ, ಬೆಂಗಳೂರಿನ ಕೆಂಪೇಗೌಡ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್ ಸೈನ್ಸ್ ನಲ್ಲಿ ಜನರಲ್‌ ಮೆಡಿಸಿನ್‌ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಡಾ ಸಲ್ಮಾ ಅವರು ಸೌದಿ ಅರೇಬಿಯಾದ ಖಸಿಂ ಯುನಿವರ್ಸಿಟಿಯ ದಂತ ವೈದ್ಯಕೀಯ ವಿಭಾಗದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್‌ ಆಗಿರುವ ಡಾ ಶಕಿಲ್ ಎಂ. ಅವರ ಪತ್ನಿ ಹಾಗೂ ನಿವೃತ್ತ ಡೆಪ್ಯುಟಿ ಡೈರೆಕ್ಟರ್‌ ಖಾಲಿದ್ ತಣ್ಣೀರುಬಾವಿ ಅವರ ಪುತ್ರಿ.

LEAVE A REPLY

Please enter your comment!
Please enter your name here