ತಲವಾನೆಯ ಸ್ನೇಹಿತನ ಮನೆಯಲ್ಲಿ CM ವಾಸ್ತವ್ಯ

0
18

ಜಯಪುರ : ಶೃಂಗೇರಿಯ ಶ್ರೀ ಶಾರದಾ ಪೀಠಕ್ಕೆ ಗುರುವಾರ ಸಂಜೆ ಭೇಟಿ ನೀಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ದೇವಿಯ ದರ್ಶನ ಪಡೆದು ರಾತ್ರಿ 9.45 ಕ್ಕೆ ತಮ್ಮ ಆಪ್ತ ಸ್ನೇಹಿತ ತಲವಾನೆ ಎಸ್ಟೇಟ್‌ ಮಾಲೀಕ ಶ್ರೀರಂಗನಾಥ್‌ ಅವರ ಮನೆಯಲ್ಲಿ ತಂಗಿದ್ದರು.

ಬೆರಳೆಣಿಕೆಯ ರಾಜಕಾರಣಿಗಳು, ಜೆಡಿಎಸ್‌ ಮುಖಂಡರಿಗಷ್ಟೇ ಪ್ರವೇಶಕ್ಕೆ ಅವಕಾಶವಿದ್ದು, ಸುತ್ತಲೂ ಪೊಲೀಸ್‌ ಸರ್ಪಗಾವಲು ಹಾಕಲಾಗಿತ್ತು. ಬೆಳಗ್ಗೆ ಮಲೆನಾಡಿನ ವಿಶೇಷ ಸೀಮೆಅಕ್ಕಿ ಇಡ್ಲಿ, ಉಪ್ಪಿಟ್ಟು, ಅನಾನಸ್‌ ಕೇಸರಿ ಬಾತ್‌, ಹೆಸರುಬೇಳೆ ಕೋಸಂಬರಿ, ಕಾಫಿ ಸವಿದರು.

ವಿಧಾನ ಪರಿಷತ್‌ ಸದಸ್ಯರಾದ ಎಸ್‌.ಎಲ್‌. ಧರ್ಮೇಗೌಡ, ಎಸ್‌.ಎಲ್‌.ಭೋಜೇಗೌಡ, ಕೊಡಗು ಉಸ್ತುವಾರಿ ಸಚಿವ ಸಾ.ರಾ.ಮಹೇಶ್‌ ಜತೆಗಿದ್ದರು. ಬೆಳಗ್ಗೆ 8.30ಕ್ಕೆ ಶೃಂಗೇರಿಗೆ ತೆರಳಿದರು.

ಮುಖ್ಯಮಂತ್ರಿಗಳ ಭದ್ರತಾ ವಿಭಾಗದ ಎಸ್‌ಪಿ ಯೋಗೀಶ್‌, ಐಜಿಪಿ ಅರುಣ್‌ ಚಕ್ರವರ್ತಿ, ಜಿಲ್ಲಾ ಎಸ್ಪಿ ಹರೀಶ್‌ ಪಾಂಡೆ, ಜಿಲ್ಲಾಧಿಕಾರಿ ಶ್ರೀರಂಗಯ್ಯ, ಶೃಂಗೇರಿ ವೃತ್ತ ನಿರೀಕ್ಷ ಕ ಪ್ರಮೋದ್‌ ಕುಮಾರ್‌, ಕೊಪ್ಪ ತಹಸೀಲ್ದಾರ್‌ ತನುಜಾ, ಶಾಸಕ ಟಿ.ಡಿ.ರಾಜೇಗೌಡ, ಪ್ರಗತಿಪರ ಕೃಷಿಕ ತಲವಾನೆ ಪ್ರಕಾಶ್‌, ಕಾಂಗ್ರೆಸ್‌ ಮುಖಂಡ ಎಚ್‌.ಎಂ.ಸತೀಶ್‌, ಜೆಡಿಎಸ್‌ನ ನಾಗೇಂದ್ರ, ಹೆಗ್ಗದ್ದೆ ಜಯಶೀಲ, ದಿವಾಕರ, ಶಂಕರ್‌ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here