ಚೆನ್ನೈ: ಇದು ಅತಿರೇಕ ಅನ್ನಿ ಅಥವಾ ಅಭಿಮಾನ ಎನ್ನಿ. ತಮಿಳು ತಲೈವಾ ರಜನಿಕಾಂತ್ ಅಭಿಮಾನಿಯೊಬ್ಬರು ಥಿಯೇಟರ್ ಮುಂದೆಯೇ ಮದುವೆಯಾಗುವ ಮೂಲಕ ತಮ್ಮ ಅಭಿಮಾನವನ್ನು ಮೆರೆದಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.

ಅಭಿಮಾನದ ಅತಿರೇಕಕ್ಕೆ ಇದು ಇನ್ನೊಂದು ನಿದರ್ಶನ ಇದು. ಅದರಲ್ಲೂ ತಮಿಳುನಾಡಿನಲ್ಲಿ ರಜನಿಕಾಂತ್ ಸಿನಿಮಾ ಬಿಡುಗಡೆಯಾಗುತ್ತಿದೆ ಎಂದರೆ ಸಾಕು ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇರುವುದಿಲ್ಲ.

ಗುರುವಾರ ‘ಪೇಟಾ’ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಅಂಬಸು, ಕಮಾಚಿ ಎಂಬ ಯುವಕ ಯುವತಿ ಇದೇ ಮುಹೂರ್ತವನ್ನು ಶುಭ ಮುಹೂರ್ತ ಎಂದು ಭಾವಿಸಿದರು. ರಜನಿಕಾಂತ್‌ ಅಭಿಮಾನಿಗಳಾದ ಇವರು ಈ ಸಂದರ್ಭದಲ್ಲಿ ವಿವಾಹವಾಗುವ ಮೂಲಕ ಒಂದಾಗಿದ್ದಾರೆ.

ಇವರ ಮದುವೆ ಯಾವುದೇ ಕಲ್ಯಾಣ ಮಂಟಪದಲ್ಲೋ, ದೇವಸ್ಥಾನದಲ್ಲೋ ನಡೆಯಲಿಲ್ಲ. ಪೇಟಾ ಸಿನಿಮಾ ಪ್ರದರ್ಶನ ಕಾಣುತ್ತಿರುವ ಚೆನ್ನೈನ ಉಡ್‍ಲ್ಯಾಂಡ್ಸ್ ಥಿಯೇಟರ್ ಮುಂದೆಯೇ ನಡೆಯಿತು. ಅಲ್ಲೇ ಮದುವೆ ಮಂಟಪಕ್ಕೆ ವ್ಯವಸ್ಥೆ ಮಾಡಿ ಹಿಂದೂ ಸಂಪ್ರದಾಯದಂತೆ ಮದುವೆಯಾದರು. ಈ ಮದುವೆಗೆ ರಜನಿಕಾಂತ್ ಅಭಿಮಾನಿಗಳೇ ಬಂಧುಬಳಗ.

ಪೇಟಾ ಸಿನಿಮಾ ನೋಡಲು ಬಂದ ಅಭಿಮಾನಿಗಳೆಲ್ಲಾ ಮದುವೆ ನೋಡಿ ಖುಷಿಪಟ್ಟರು. ನೂತನ ದಂಪತಿಗಳನ್ನು ಹಾರೈಸಿದರು. ಮದುವೆ ಬಳಿಕ ಎಲ್ಲಾ ಅಭಿಮಾನಿಗಳಿಗೂ ಊಟವನ್ನೂ ಹಾಕಿಸಿದರು. ಒಟ್ಟಾರೆ ರಜನಿ ಮೇಲಿನ ಅಭಿಮಾನವನ್ನು ಇವರಿಬ್ಬರೂ ಈ ರೀತಿ ಪ್ರದರ್ಶಿಸಿದ್ದಾರೆ.

Summary
ಥಿಯೇಟರ್ ಮುಂದೆಯೇ ತಾಳಿ ಕಟ್ಟಿದ 'Rajinikanth' ಅಭಿಮಾನಿ
Article Name
ಥಿಯೇಟರ್ ಮುಂದೆಯೇ ತಾಳಿ ಕಟ್ಟಿದ 'Rajinikanth' ಅಭಿಮಾನಿ

LEAVE A REPLY

Please enter your comment!
Please enter your name here