ಬೆಂಗಳೂರು: ಕಾಂಗ್ರೆಸ್ ಟಿಕೆಟ್ ಸಿಗದಿದ್ದರು ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಅವರು ಸ್ಪರ್ಧಿಸುವ ನಿರ್ಣಯ ಮಾಡಿದ್ದು ಇದೇ ವೇಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೇ ಸುಮಲತಾ ಅವರ ಬೆನ್ನಿಗೆ ನಿಂತಿದ್ದಾರೆ ಅಂದ ಮೇಲೆ ಆನೆ ಬಲ ಬಂದಂತೆ ಎಂದು ನಟ ಕಿಚ್ಚ ಸುದೀಪ್ ಹೇಳಿದ್ದಾರೆ.
ಸುಮಲತಾ ಅಂಬರೀಶ್ ಪರ ಪ್ರಚಾರ ಮಾಡ್ತೀರಾ ಎನ್ನುವ ಪ್ರಶ್ನೆಗೆ ನಟ ಕಿಚ್ಚ ಸುದೀಪ್ ಅವರು ಈಗಾಗಲೇ ದರ್ಶನ್ ಅಲ್ಲಿದ್ದಾರೆ. ಅಂದ ಮೇಲೆ ಯಾರ ಅವಶ್ಯಕತೆನೂ ಇಲ್ಲ. ಅವನು ಎಲ್ಲಾ ನೋಡಿಕೊಳ್ಳುತ್ತಾನೆ. ನನಗೆ ಇನ್ನೂ ಯಾರಿಂದಲೂ ಬುಲಾವ್ ಬಂದಿಲ್ಲ ಎಂದು ಹೇಳಿದರು.

ಅಲ್ಲದೆ ನನಗೆ ರಾಜಕೀಯದ ಬಗ್ಗೆ ಅಷ್ಟೇನೂ ಅಸಕ್ತಿ ಇಲ್ಲ. ನನ್ನನ್ನು ನಂಬಿ ತುಂಬಾ ನಿರ್ಮಾಪಕರು ದುಡ್ಡು ಹಾಕಿದ್ದಾರೆ. ಹೀಗಾಗಿ ನನ್ನ ಸಪೋರ್ಟ್ ನಿರ್ಮಾಪಕರಿಗೆ ಎಂದ ಕಿಚ್ಚ ಸುದೀಪ್, ಅಂಬರೀಶ್ ಹೆಸರೊಂದೆ ಸಾಕು ಗೆಲ್ಲೋಕೆ. ಅದರ ಜತೆ ದರ್ಶನ್ ಒಬ್ಬರೇ ಸಾಕು ಗೆಲುವು ಪಡೆಯೋಕೆ ಅಂತಾ ಹೇಳಿದ್ದಾರೆ.

LEAVE A REPLY

Please enter your comment!
Please enter your name here